ನಂಜನಗೂಡು: ನಮ್ಮ ದೇಶದ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು. ಈ ವಿಚಾರದಲ್ಲಿ ಸುತ್ತೂರು ಮಠ ಉಳಿಸಿಕೊಂಡು ಹೋಗುತ್ತಿರುವುದು ಸಂಗತಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಪ್ರಸಂಸಿಸಿದರು.
ಸೋಮವಾರ ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು. ಸುತ್ತೂರಿನಲ್ಲಿ ನಡೆಯುವ ಜಾತ್ರೆ ಕರ್ನಾಟಕದ ಯಾವ ಭಾಗಗಳಲ್ಲೂ ನಡೆಯುವುದಿಲ್ಲ. ನಮ್ಮ ದೇಶ ವಿಭಿನ್ನ ದೇಶ. ಹಳೆಯ ಪಾರಂಪರಿಕ ಆಟಗಳನ್ನು ಪರಿಚಯಿಸುತ್ತಿದ್ದಾರೆ. ಇಡೀ ವಿಶ್ವದಲ್ಲಿ ಬಾರದಂತ ದೇಶ ಮತ್ತೊಂದಿಲ್ಲ. ಸಾಂಸ್ಕೃತಿಕ, ಸಂಗೀತ ಸೇರಿದಂತೆ ಹಲವು ಸಂಸ್ಕೃತಿಗಳು ಇಲ್ಲಿವೆ. ನಮ್ಮ ನೆಲದಲ್ಲಿ ಆಚಾರ ವಿಚಾರಗಳು ಇನ್ನು ಉಳಿದಿವೆ. ಆರೋಗ್ಯ ಇಲಾಖೆಯಲ್ಲಿ ಪಾರಂಪರಿಕ ವೈದ್ಯ ಪದ್ಧತಿ ಇನ್ನೂ ಕೂಡ ಇದೆ. ಹೊಸತನದ ಜೊತೆಗೆ ಹಳೆತನವನ್ನು ಉಳಿಸಬೇಕು. ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಜೊತೆಯಲ್ಲಿರಬೇಕು. ಒಂದೇ ಬೇಕು ಎನ್ನುವುದು ಸರಿಯಲ್ಲ ಎಂದರು. ಜ್ಞಾನ ವಿಜ್ಞಾನ ಸಂಸ್ಕೃತಿ ಬಗ್ಗೆ ಹೆಮ್ಮೆ ಇರಬೇಕು ಎಂದು ತಿಳಿಸಿದರು.
ಬಳಿಕ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಮಹಾಸ್ವಾಮಿಗಳು ಮಾತನಾಡಿ, ನಮ್ಮ ದೇಶದ ಧಾರ್ಮಿಕತೆ, ಸಂಸ್ಕೃತತೆಯನ್ನು ರಕ್ಷಣೆ ಮಾಡುವಲ್ಲಿ ಸುತ್ತೂರು ಶ್ರೀ ಕ್ಷೇತ್ರದ ಶ್ರೀ ಬೇಸಿಕ್ ಕೇಂದ್ರ ಮಹಾಸ್ವಾಮಿಗಳು ಅಗ್ರಗಣ್ಯ ಸ್ಥಾನದಲ್ಲಿದ್ದಾರೆ. ಶ್ರೀಗಳು ಎಲ್ಲರನ್ನು ಬಹಳ ಪ್ರೀತಿಯಿಂದ ಕಾಣುತ್ತಾರೆ. ಭಕ್ತಿ ಜ್ಞಾನ ಧಾರ್ಮಿಕತೆಯನ್ನು ಹೊಂದಿರುವ ಶ್ರೇಷ್ಠ ಸಂತರು ಇವರು. ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳು ನಿಜವಾದ ಆದಿ ಜಗದ್ಗುರುಗಳು. ನಾನು ಕೂಡ ಸಿದ್ದಗಂಗಾ ಮಠದ ವಿದ್ಯಾರ್ಥಿಯಾಗಿದ್ದೆ. ಲಕ್ಷಾಂತರ ಮಕ್ಕಳಿಗೆ ವಿದ್ಯೆ ಜ್ಞಾನ ಮತ್ತು ದಾಸೋಹವನ್ನು ಉಚಿತವಾಗಿ ನೀಡುತ್ತಿದ್ದಾರೆ. ಹಾಗೆ ಕರ್ನಾಟಕದಲ್ಲಿ ಸುತ್ತೂರು ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಸಿದ್ದಗಂಗಾ ಶ್ರೀಗಳು ಈ ದೇಶ ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಕ್ಷೇತ್ರದ ಶ್ರೀಗಳಾದ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳು, ಶ್ರೀ ಭವತಾರಿನಿ ಆಶ್ರಮ ವಿಜಯನಗರದ ಮಾತಾಜಿ ವಿವೇಕ ಮಯಿ, ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದ ಮಹಾಸ್ವಾಮಿಗಳು, ಬಸವ ಇಂಟರ್ನ್ಯಾಷನಲ್ ಫೌಂಡೇಶನ್ ಅಧ್ಯಕ್ಷರು ಎಸ್ ಮಹದೇವಯ್ಯ, ಜಿಲ್ಲಾ ಪಂಚಾಯತ್ ಸಿಇಒ ಕೆ ಎಮ್ ಗಾಯತ್ರಿ, ದಕ್ಷಿಣ ವಲಯ ಡಿಐಜಿಪಿ ಎಂ ಬಿ ಬೋರಲಿಂಗಯ್ಯ, ಜಯನಗರ ವಿಧಾನಸಭಾ ಸದಸ್ಯ ಸಿ ಕೆ ರಾಮಮೂರ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ ವಿ ನಾಗರಾಜ ಮೂರ್ತಿ, ಮಾಜಿ ಸಚಿವೆ ರಾಣಿ ಸತೀಶ್, ಲೀಲಾ ದೇವಿ ಆರ್ ಪ್ರಸಾದ್, ಅರ್ಕ ಫೌಂಡೇಶನ್ ಸಂಸ್ಥಾಪಕ ಶ್ರೀ ಯೋಗಿ ಶ್ರೀನಿವಾಸ ಅರ್ಕ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.