ಬೆಂಗಳೂರು: ತಾಯಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ಶವವನ್ನು ಮೈಕೋಲೇಔಟ್ ಪೊಲೀಸ್ ಠಾಣೆಗೆ ತಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳು ಹೊರ ಬರುತ್ತಿದ್ದು, ಪೊಲೀಸರ ವಿಚಾರಣೆ ವೇಳೆ ಪುತ್ರಿ ಸೋನಾಲಿ ಸೇನ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾಳೆ.
ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್ ಎಸ್ ಆರ್ ಗ್ರೀನ್ ಅಪಾರ್ಟ್ಮೆಂಟ್ ನ 106 ಫ್ಲಾಟ್ ನಲ್ಲಿ ವಾಸವಾಗಿದ್ದರು. ಫ್ಲಾಟ್ ನಲ್ಲಿ ಸೋನಾಲಿ ಸೇನ್, ಸೋನಾಲಿ ಸೇನ್ ಪತಿ, ಮಗ, ಅತ್ತೆ ಮತ್ತು ಸೋನಾಲಿ ಸೇನ್ ತಾಯಿ ವಾಸವಾಗಿದ್ದರು.
ನಿನ್ನೆ (ಜೂ.12) ಬೆಳಿಗ್ಗೆ 7 ಗಂಟೆಗೆ ಸೋನಾಲಿ ಸೇನ್ ತಾಯಿಗೆ ನಿದ್ದೆ ಮಾತ್ರೆ ನೀಡಿದ್ದರು. ಬಳಿಕ ಬೆಳಿಗ್ಗೆ 11 ಗಂಟೆಗೆ ತಾಯಿ ಹೊಟ್ಟೆ ನೊವ್ವು ಎಂದಿದ್ದರು. ಈ ವೇಳೆ ಸೋನಾಲಿ ಸೇನ್ ತಾಯಿದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ನಂತರ ಸೂಟ್ ಕೇಸ್ ನಲ್ಲಿ ತಾಯಿಯ ಶವ ಹಾಕಿಕೊಂಡು ಮಧ್ಯಾಹ್ನ 1 ಗಂಟೆಗೆ ಊಬರ್ ಕ್ಯಾಬ್ ನಲ್ಲಿ ಠಾಣೆಗೆ ಬಂದಿದ್ದರು.
ಸೂಟ್ ಕೇಸ್ ನಲ್ಲಿ ಮೃತದೇಹ ತಂದದ್ದನ್ನು ಕಂಡ ಪೊಲೀಸರು ಶಾಕ್ ಆಗಿದ್ದು, ಕೂಡಲೆ ಆರೋಪಿ ಸೋನಾಲಿ ಸೇನ್ ಅವರನ್ನು ವಶಕ್ಕೆ ಪಡೆದರು.
ಬಳಿಕ ಸೋನಾಲಿ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಚ್ಚರಿ ಸಂಗತಿಗಳನ್ನು ಬಾಯಿ ಬಿಟ್ಟಿದ್ದಾರೆ.
ಸೋನಾಲಿ ಸೇನ್ ಹೇಳಿಕೆ: ತಾಯಿಯೇ ತನ್ನನ್ನು ಕೊಲ್ಲುವಂತೆ ಹೇಳಿದರು. ನಾನು ನಿನ್ನ ತಂದೆ ಬಳಿ ಹೊಗಬೇಕು ಎಂದು ಹೇಳಿದರಂತೆ. ಅದಕ್ಕೆ ಸೋನಾಲಿ ಸೇನ್ ನಿದ್ದೆ ಮಾತ್ರೆ ನೀಡಿದರಂತೆ. ಬಳಿಕ 11 ಗಂಟೆಗೆ ಪ್ಯಾರಲೀಸಿಸ್ ಆಗುತ್ತಿದೆ ಮಗಳೆ ಅಂದರಂತೆ. ಅಲ್ಲದೇ ನನ್ನನ್ನು ಕೊಂದು ಬಿಡು ಎಂದು ತಾಯಿಯೇ ಮಗಳಿಗೆ ಹೇಳಿದರಂತೆ. ಹೀಗಾಗಿ ಕೊಲೆ ಮಾಡಿದೆ ಎಂದು ಪೋಲಿಸರ ಮುಂದೆ ಬಾಯಿ ಬಿಟ್ಟಿದ್ದಾರೆ