Friday, April 4, 2025
Google search engine

Homeರಾಜ್ಯಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಇಲಾಖೆ  ಹೆಚ್ಚು ಗಮನ ಹರಿಸುತ್ತದೆ- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಇಲಾಖೆ  ಹೆಚ್ಚು ಗಮನ ಹರಿಸುತ್ತದೆ- ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ತುಮಕೂರು:  ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟಲು ಇಲಾಖೆ  ಹೆಚ್ಚು ಗಮನ ಹರಿಸುತ್ತದೆ ಎಂದು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ವಿಚಾರವಾಗಿ ಕೊರಟಗೆರೆಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್,ಈ ಬಗ್ಗೆ ಗೃಹ ಸಚಿವರ ಹತ್ತಿರಾನೂ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು.ಪೊಲೀಸ್ ಇಲಾಖೆ ಈ ಜಾಲವನ್ನ ಪತ್ತೆ ಹಚ್ಚಿ, ಕ್ರಮ ವಹಿಸ್ತಿದ್ದಾರೆ, ಅವ್ರಿಗೆ ಅಭಿನಂದನೆ. ಈ ಬಗ್ಗೆ ವಿಸ್ತೃತವಾಗಿ ತನಿಖೆ ಆಗಬೇಕು ಅಂತಾ ಹೇಳಿದ್ಮೇಲೆ ಸಿಎಂ,ಗೃಹ ಸಚಿವರು ಚರ್ಚೆ ಮಾಡಿ ಸಿಐಡಿ ಗೆ ವಹಿಸಿದ್ದಾರೆ.

ಇದು ಒಂದು ಜಿಲ್ಲೆಗೆ ಸೇರಿದ್ದಂತಲ್ಲಾ, ಇದರ ವ್ಯಾಪ್ತಿ ರಾಜ್ಯದಲ್ಲಿ ಹಬ್ಬಿದೆ. ಇದು ಸರಿಯಾದ ರೀತಿಯಲ್ಲಿ ತನಿಖೆ ಆಗೋ ಅಗತ್ಯೆ ಇದೆ.ಇದನ್ನ ಗಂಭೀರವಾಗಿ ಪರಿಗಣಿಸಿದೆ. ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಜೊತೆಯಾಗಿ ಕೈಜೋಡಿಸಿ ತನಿಖೆ ಮಾಡಬೇಕಿದೆ. ಲಿಂಗಾನುಪಾತ ನೋಡಿದಾಗ, ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಸಮಾಜದಲ್ಲಿ ಹೆಣ್ಣು ಮಗು ಅಂದಾಕ್ಷಣ ಬೇಡ ಅನ್ನೋ ಪರಿಸ್ಥಿತಿ ಇದೆ.ಗಂಡು ಮಗು ಬೇಕು ಅನ್ನೋ ಮನಸ್ಥಿತಿ ಹೋಗಬೇಕಿದೆ.ಭ್ರೂಣ ಲಿಂಗ ಹತ್ಯೆ ತಡೆಗಟ್ಟಲು ನಮ್ಮ ಇಲಾಖೆ ಹೆಚ್ಚು ಗಮನ ಹರಿಸುತ್ತೆ.ಈಗಾಗಲೇ ಇಬ್ಬರು ಅಧಿಕಾರಿಗಳನ್ನ ಅಮಾನತ್ತು ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

RELATED ARTICLES
- Advertisment -
Google search engine

Most Popular