Monday, April 21, 2025
Google search engine

Homeರಾಜ್ಯಸುದ್ದಿಜಾಲಜಿಲ್ಲೆಯು ಸಂಪತ್ಭರಿತಾ ಜಿಲ್ಲೆಯಾಗಿದ್ದು, ಸ್ವಉದ್ಯೋಗಕ್ಕೆ ಬಹಳ ಅವಕಾಶಗಳಿವೆ: ಸ್ನೇಹಲ್ ಸುಧಾಕರ್ ಲೋಖಂಡೆ

ಜಿಲ್ಲೆಯು ಸಂಪತ್ಭರಿತಾ ಜಿಲ್ಲೆಯಾಗಿದ್ದು, ಸ್ವಉದ್ಯೋಗಕ್ಕೆ ಬಹಳ ಅವಕಾಶಗಳಿವೆ: ಸ್ನೇಹಲ್ ಸುಧಾಕರ್ ಲೋಖಂಡೆ


ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯು ಸಂಪತ್ಭರಿತಾ ಜಿಲ್ಲೆಯಾಗಿದ್ದು, ಇಲ್ಲಿ ಸ್ವಉದ್ಯೋಗ ಮಾಡಲು ಬಹಳ ಅವಕಾಶಗಳಿವೆ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಈ ನಿಟ್ಟಿನಲ್ಲಿ ಕೆಲಸವನ್ನು ಮಾಡುತ್ತಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಿಇಓ ಲೋಕಂಡೆ ಸ್ನೇಹಲ್ ಸುಧಾಕರ್ ತಿಳಿಸಿದರು.

ಅವರು ಜೂನ್ 10 ರಂದು ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಹೊಳಲೂರು ಇಲ್ಲಿ ಪಶು ಸಖಿ ಮತ್ತು ಬ್ಯೂಟಿಪಾರ್ಲರ್ ಮ್ಯಾನೆಜ್ಮೇಂಟ್ ತರಬೇತಿ ಕಾರ್ಯಕ್ರಮದ ಉದ್ಘಾಟನ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಶಿಬಿರಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲ ಶಿವಯೋಗಿ ಯೆಲಿ, ಉಪ ನಿರ್ದೇಶಕರು, ಪಶು ವೈದ್ಯಕೀಯ ಇಲಾಖೆ ಶಿವಮೊಗ್ಗ ಇವರು ಪಶು ಇಲಾಖೆಯ ಬಗ್ಗೆ ಮತ್ತು ಪಶು ಸಖಿಯರ ಕಾರ್ಯ ವೈಖರಿಯ ಬಗ್ಗೆ ಮಾಹಿತಿಯನ್ನು ನೀಡಿದರು. ಡೋಮೈನ್ ಸ್ಕೀಲ್ ಟ್ರೈನರ್ ಅದಂತಹ ಕತ್‍ಮುನಿಸಾ ಮತ್ತು ದೀಪಾರವರು ಹಾಜರಿದ್ದರು. ಸಂಸ್ಥೆಯ ನಿರ್ದೇಶಕ ಕಾಂತೇಶ ಅಂಬಿಗಾರ್ ಇವರು ಮಾತನಾಡಿ ಈ ತರಬೇತಿಗಳು ನಿಮ್ಮ ಜೀವನದಲ್ಲಿ ಬಹಳ ಮುಖ್ಯವಾದ ಅವಕಾಶವಿದ್ದಂತೆ. ಇದನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಜೀವನದಲ್ಲಿ ಉನ್ನತವಾಗಿ ಬೆಳೆಯಬೇಕೆಂದು ತಿಳಿಸುವ ಜೊತೆಗೆ ಸಂಸ್ಥೆಯ ಕಿರು ಪರಿಚಯವನ್ನು ಮಾಡಿಕೊಟ್ಟರು. ಉಪನ್ಯಾಸಕ ಸುರೇಶ್ ವೈ ಹಳ್ಳಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನ ಶಿಬಿರಾರ್ಥಿಗಳು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular