ಮಂಗಳೂರು (ದಕ್ಷಿಣ ಕನ್ನಡ) : ಕೋಮು ಸೂಕ್ಷ್ಮ ಜಿಲ್ಲೆ. ಇಲ್ಲಿ ಅನೇಕ ಕೋಮು ಘರ್ಷಣೆಗಳು ನಡೆದಿದೆ, ಕೋಮಿನ ಹೆಸರಲ್ಲಿ ಅನೇಕ ಕೊಲೆಗಳು ನಡೆದಿದೆ. ಹೀಗಾಗಿ ಮಂಗಳೂರು ಅಂದ್ರೆ ಕೋಮು ಗಲಾಟೆ ಮೊದಲು ನೆನಪಿಗೆ ಬರುತ್ತದೆ. ಇದರಿಂದ ಹಿಂದೂಮುಸ್ಲಿಂ ಪರಸ್ಪರ ಇಲ್ಲಿ ವೈರಿಗಳು ಎಂಬಂತಹ ವಾತಾವರಣ ಸೃಷ್ಟಿಯಾಗಿತ್ತು.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಂಗಳೂರು ನಗರರಲ್ಲೊಂದು ಸೌಹಾರ್ದ ಮೂಡಿಸುವ ಕಾಯಕವೊಂದು ನಡೆದಿದೆ. ಅಚ್ಚರಿಯಾದ್ರೂ ಸತ್ಯ. ಮಂಗಳೂರಿನ ಕುದ್ರೋಳಿಯ ಜಾಮಿಯಾ ಮಸೀದಿ ಆಡಳಿತ ಸಮಿತಿ, ಮುಸ್ಲಿಂ ಐಕ್ಯತಾ ವೇದಿಕೆ ಕುದ್ರೋಳಿ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಇದರ ವತಿಯಿಂದ ಸಾರ್ವಜನಿಕರಿಗೆ ಮಸೀದಿಯನ್ನು ವೀಕ್ಷಿಸುವ ಅವಕಾಶವನ್ನು ಇಂದು ಕಲ್ಪಿಸಲಾಗಿತ್ತು.

ಮಧ್ಯಾಹ್ನ 12ರಿಂದ ಸರ್ವಧರ್ಮೀಯರೆಲ್ಲಾ ಮಸೀದಿ ಒಳಗಡೆ ಬಂದಿ ವೀಕ್ಷಿಸತೊಡಗಿದರು.
ಅದಕ್ಕೂ ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಇದು ದಿವ್ಯತೆಯ ದರ್ಶನವಾಗಿದೆ. ಪ್ರಾರ್ಥನೆಯ ವೇಳೆ ಕಣ್ಣು ಮುಚ್ಚಿದರೂ ಆಂತರಿಕ ಕಣ್ಣು ತೆರೆಯುತ್ತೇವೆ ಎಂದರು. ಇದೇ ವೇಳೆ ಹೋಲಿ ರೊಸಾರಿಯೊ ಚರ್ಚ್‌ನ ಧರ್ಮಗುರು ಫಾದರ್ ವಲೇರಿಯನ್ ಡಿಸೋಜಾ ಮಾತನಾಡಿ, ಧರ್ಮಗಳ ತಿರುಳು ಪರಸ್ಪರ ಪ್ರೀತಿಯಾಗಿದೆ. ದೇವಸ್ಥಾನ, ಮಸೀದಿ, ಚರ್ಚ್‌ಗಳ ಆಚರಣೆಗಳು ಎಲ್ಲರಿಗೂ ತಿಳಿದಿರಬೇಕು. ಇದು ದೇವರ ಪ್ರೇರಣೆಯ ಹೊಸ ಹೆಜ್ಜೆಯಾಗಿದೆ. ಈ ಹೆಜ್ಜೆಗಳು ಇಲ್ಲಿಗೆ ನಿಲ್ಲಬಾರದು. ಎಂದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಜೈರಾಜ್ ಎಚ್., ಯುಎಇ ಮೊಗವೀರ ಸಂಘದ ಅಧ್ಯಕ್ಷ ಲೋಕೇಶ್ ಪುತ್ರನ್, ಬೆಂಗರೆ ಮಹಾಸಭಾ ಅಧ್ಯಕ್ಷ ಚೇತನ್ ಬೆಂಗರೆ, ಬರಕಾ ಇಂಟರ್‌ನ್ಯಾಷನಲ್ ಸ್ಕೂಲ್‌ನ ಪ್ರಾಂಶುಪಾಲ ಬಿ.ಎಸ್.ಶರ್ಫುದ್ದೀನ್ ಶುಭ ಹಾರೈಸಿದರು. ಮಸೀದಿಯನ್ನು ನೋಡಲು ಸಾವಿರಾರು ಮಂದಿ ಆಗಮಿಸಿ ಮಸೀದಿ, ಮದ್ರಸಾ ಚಟುವಟಿಕೆಗಳ ಬಗ್ಗೆ ಸಂಜೆಯವರೆಗೂ ನೈಜ ದರ್ಶನ ಪಡೆದು ಸಂತುಷ್ಟರಾದ್ರು.
ವಿಶುವಲ್ ಫ್ಲೋ ಇದ್ದರು.