Friday, April 11, 2025
Google search engine

Homeಸ್ಥಳೀಯವಿಶ್ವದ ದೃಷ್ಟಿ ಯಂಗ್ ಇಂಡಿಯಾ ಮೇಲಿದೆ

ವಿಶ್ವದ ದೃಷ್ಟಿ ಯಂಗ್ ಇಂಡಿಯಾ ಮೇಲಿದೆ


ಮೈಸೂರು: ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಚೈನಾದಲ್ಲೂ, ನಮ್ಮ ದೇಶದಲ್ಲಿ ಇರುವಷ್ಟು ಯುವ ಶಕ್ತಿ ಇಲ್ಲ. ಹಾಗಾಗಿಯೇ ಜಗತ್ತಿನ ಎಲ್ಲ ದೇಶಗಳು ನಮ್ಮ ರಾಷ್ಟ್ರವನ್ನು ಯಂಗ್ ಇಂಡಿಯಾ ಎಂದು ಕರೆಯುವ ಮೂಲಕ ನಮ್ಮ ದೇಶದತ್ತ ದೃಷ್ಟಿಯಿಟ್ಟಿವೆ ಎಂದು ಎನ್‌ವೈಕೆಎಸ್‌ನ ದಕ್ಷಿಣ ರಾಜ್ಯಗಳ ಪ್ರಾದೇಶಿಕ ನಿರ್ದೇಶಕ ಎಂ.ಎನ್.ನಟರಾಜ್ ಹೇಳಿದರು.
ಭಾರತ ಸರ್ಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಮೈಸೂರು, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು, ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು, ಮಹಾರಾಣಿ ಮಹಿಳಾ ಕಲಾ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಮೈಸೂರು ವಿಶ್ವವಿದ್ಯಾನಿಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಜಿ ಮಟ್ಟದ ಯುವ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯಕ್ಕೂ ಮುನ್ನ ನಮ್ಮ ದೇಶದ ಒಟ್ಟು ಜನಸಂಖ್ಯೆ ೩೩ ಕೋಟಿ ಇತ್ತು. ಈಗ ೧೩೦ ಕೋಟಿ ದಾಟಿದೆ. ಚೈನಾದ ನಂತರದ ಜನಸಂಖ್ಯೆಯಲ್ಲಿ ನಾವು ಎರಡನೇ ಸ್ಥಾನದಲ್ಲಿ ಇದ್ದೇವೆ. ಮುಂದಿನ ಕೆಲವು ವರ್ಷಗಳಲ್ಲಿ ಅದನ್ನು ಮೀರಿಸಲಿದ್ದೇವೆ. ಸ್ವಾತಂತ್ರ್ಯ ಬಂದ ೭೫ ವರ್ಷಗಳಲ್ಲಿ ೧೦೦ ಕೋಟಿ ಮಾನವ ಸಂಪನ್ಮೂಲ ಹೊಂದಿದ್ದೇವೆ ಎಂದರು.
ನಮ್ಮ ಎರಡು ಯುವ ನೀತಿಗಳು ಇವೆ. ೨೦೦೩ರ ಯುವ ನೀತಿ ಪ್ರಕಾರ ೧೫ ರಿಂದ ೩೫ ವಯಸ್ಸಿನವರನ್ನು ಯುವ ಸಮೂಹದಲ್ಲಿ ಗುರುತಿಸಲಾಗುತ್ತದೆ. ೨೦೧೪ರ ಯುವ ನೀತಿ ಪ್ರಕಾರ ೧೫ ರಿಂದ ೨೯ ವಯಸ್ಸಿನವರನ್ನು ಯುವ ಸಮೂಹದಲ್ಲಿ ಸೇರಿಸಲಾಗುತ್ತದೆ. ನಮ್ಮ ದೇಶದಲ್ಲಿ ೧೫ ರಿಂದ ೨೯ ವಯಸ್ಸಿನವರು ೪೫ ಕೋಟಿ ಮಂದಿ ಇzರೆ. ಈ ಪ್ರಮಾಣದ ಯುವ ಶಕ್ತಿ, ನಮಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೈನಾದಲ್ಲೂ ಇಲ್ಲ. ಹಾಗಾಗಿಯೇ ಜಗತ್ತಿನ ಎಲ್ಲ ದೇಶಗಳು ನಮ್ಮ ರಾಷ್ಟ್ರ್ರವನ್ನು ಯಂಗ್ ಇಂಡಿಯಾ ಎಂದು ಕರೆಯುವ ಮೂಲಕ ನಮ್ಮ ದೇಶದತ್ತ ದೃಷ್ಟಿಯಿಟ್ಟಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಹರೀಶ್‌ಗೌಡ, ಮೈಸೂರಿನ ಮಹಾರಾಜ ಮತ್ತು ಮಹಾರಾಣಿ ಕಾಲೇಜುಗಳು ಪ್ರತಿಷ್ಠಿತ ಕಾಲೇಜುಗಳಾಗಿದ್ದು, ಈ ಕಾಲೇಜುಗಳ ಬಗ್ಗೆ ಹೆಮ್ಮೆ ಇದೆ. ಇಲ್ಲಿ ೮ ವಿಷಯಗಳ ಸ್ನಾತಕೋತ್ತರ ತರಗತಿಗಳು ನಡೆಯುತ್ತವೆ. ಹಾಗಾಗಿ, ಸಂಶೋಧನೆಗೂ ಅವಕಾಶ ನೀಡುಬೇಕು ಎಂದು ಪ್ರಾಂಶುಪಾಲರು ಕೇಳಿzರೆ. ಈ ನಿಟ್ಟಿನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಅತಿಥಿಗಳನ್ನು ಜಾನಪದ ಕಲಾತಂಡಗಳೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ವೇದಿಕೆ ಕಾರ್ಯಕ್ರಮದ ನಂತರ ಪಂಚಪ್ರಾಣ ೨೦೪೭ ಎಂಬ ವಿಷಯದ ಕುರಿತು ಚಿತ್ರಕಲಾ, ಕವನ ಸ್ಪರ್ಧೆ, ಮೊಬೈಲ್ ಫೋಟೋಗ್ರಾಫಿ, ಭಾಷಣ ಸ್ಪರ್ಧೆ ಮತ್ತು ಜಾನಪದ ನೃತ್ಯ ಸ್ಪರ್ಧೆಗಳು ನಡೆದವು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ವಿ.ವಸಂತಕುಮಾರ್, ಮೈಸೂರು ವಿವಿ ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಎಂ.ಬಿ.ಸುರೇಶ್, ಕಾಲೇಜಿನ ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಡಾ.ಜಯರಾಜು.ಆರ್, ಖಜಾಂಚಿ ಡಾ.ಸವಿತಾ, ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಾಕ್ರಮಾಧಿಕಾರಿ ಪ್ರೊ.ವಿಶ್ವನಾಥ್.ಎಂ, ಡಾ.ನಿಂಗರಾಜು, ಯುವ ಕೇಂದ್ರದ ಸಲಹಾ ಸಮಿತಿ ಸದಸ್ಯ ಪ್ರಕಾಶ್, ನೆಹರು ಯುವ ಕೇಂದ್ರದ ಜಿ ಯುವ ಅಧಿಕಾರಿ ಅಭಿಷೇಕ್ ಎಸ್.ಚವರೆ ಇತರರು ಇದ್ದರು.


ಹೆಮ್ಮೆಯ ಮಹಾರಾಣಿ ಕಾಲೇಜಿನಲ್ಲಿ ಕಟ್ಟಡಗಳು ಶಿಥಿಲಗೊಂಡಿವೆ ಎಂಬುದು ಬೇಸರದ ಸಂಗತಿ. ಕಾಲೇಜಿನ ಅಭಿವೃದ್ಧಿಗೆ ಏನೇನು ಅಗತ್ಯವಿದೆ, ಯಾವ ಸೌಕರ್ಯ ಬೇಕಿದೆ ಎಂಬುದರ ಕುರಿತು ಕಾಲೇಜು ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳಿಂದ ಮಾಹಿತಿ ಪಡೆದು ಸರ್ಕಾರದಿಂದ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು.
-ಕೆ.ಹರೀಶ್‌ಗೌಡ, ಶಾಸಕ

RELATED ARTICLES
- Advertisment -
Google search engine

Most Popular