Thursday, April 3, 2025
Google search engine

Homeಅಪರಾಧಮಗಳೊಂದಿಗೆ ಮದುವೆ ಮಾಡಿಸುವುದಾಗಿ ಯುವಕನಿಂದ 25 ಲಕ್ಷ ಪಡೆದು ವಂಚಿಸಿದ ಯುವತಿ ಕುಟುಂಬ

ಮಗಳೊಂದಿಗೆ ಮದುವೆ ಮಾಡಿಸುವುದಾಗಿ ಯುವಕನಿಂದ 25 ಲಕ್ಷ ಪಡೆದು ವಂಚಿಸಿದ ಯುವತಿ ಕುಟುಂಬ

ಮೈಸೂರು: ಮಗಳನ್ನು ಮದುವೆ ಮಾಡಿಕೊಡುವುದಾಗಿ ಆಸೆ ತೋರಿಸಿ, ಯುವಕನಿಂದ ಬರೋಬ್ಬರಿ 25 ಲಕ್ಷ ರೂ. ಹಣವನ್ನು ಪಡೆದು ಯುವತಿ ಕುಟುಂಬಸ್ಥರು ವಂಚಿಸಿರುವ ಘಟನೆ ಹುಣಸೂರು ತಾಲೂಕಿನ ಕಡೆಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕುಟುಂಬಸ್ಥರು ಇತ್ತ ಕನ್ಯೆ ಕೊಡಲಿಲ್ಲ, ಸಾಲದ ರೂಪದಲ್ಲಿ ಕೊಟ್ಟ ಹಣವನ್ನು ಕೊಡದೆ ಮೋಸ ಮಾಡಿದ್ದಾರೆ ಎಂದು ಯುವಕ ದೂರು ದಾಖಲಿಸಿದ್ದು, ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾನೆ. ಅಶೋಕ್ ಹಣ ಕಳೆದುಕೊಂಡ ಯುವಕ. ಯುವತಿ ತಂದೆ ವೆಂಕಟೇಶ್ ಮತ್ತು ತಾಯಿ ಲಕ್ಷ್ಮಿ, ಮಗಳು ಸಿಂಚನ ಮೋಸ ಮಾಡಿದ್ದಾರೆ ಎಂದು ಯುವಕ ದೂರು ದಾಖಲಿಸಿದ್ದಾನೆ.

ಯುವಕ ಅಶೋಕ್​ ಮತ್ತು ಆತನ ತಂದೆ-ತಾಯಿ ಹುಣಸೂರು ತಾಲೂಕಿನ, ಕಡೆಮನುಗನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದಾರೆ. ಅಶೋಕ್​ ಬಿಸ್‌ನೆಸ್ ಕರೆಸ್ಪಾಂಡಿಂಗ್ಸ್ ಮತ್ತು ವ್ಯವಸಾಯ ಮಾಡಿಕೊಂಡಿದ್ದಾನೆ. ಇದೇ ಗ್ರಾಮದ ವೆಂಕಟೇಶ್ ಮತ್ತು ಅವರ ಪತ್ನಿ ಲಕ್ಷ್ಮಿಯವರು ತಮ್ಮ ಮಗಳಾದ ಸಿಂಚನ ಅವರನ್ನು ಮದುವೆಯಾಗುವಂತೆ 2022ರ ಜನವರಿ ತಿಂಗಳಿನಲ್ಲಿ ಅಶೋಕ್​ ಅವರ ಮನೆಗೆ ಹೋಗಿದ್ದರು. ಇದಕ್ಕೆ ಅಶೋಕ್​ ಹಾಗೂ ಆತನ ತಂದೆ-ತಾಯಿ ಒಪ್ಪಿದ್ದರು.

ಆದರೆ ಸಿಂಚನ ತಾನು ಇನ್ನು ಒಂದು ವರ್ಷ ವಿದ್ಯಾಭ್ಯಾಸ ಮಾಡಬೇಕು, ಓದು ಮುಗಿದ ಮೇಲೆ ಮದುವೆಯಾಗೋಣ ಎಂದು ಹೇಳಿದ್ದಾರೆ. ಇದಕ್ಕೆ ಅಶೋಕ್​ ಹಾಗೂ ಕುಟುಂಬಸ್ಥರು ಒಪ್ಪಿದ್ದಾರೆ. ಬಳಿಕ ಅಶೋಕ್​ ಮತ್ತು ಸಿಂಚನ ಅವರ ವಿವಾಹದ ಮಾತುಕಥೆ ಇಬ್ಬರ ಮನೆಯವರು ಸೇರಿ ನೆರವೇರಿಸಿದ್ದಾರೆ. ಬಳಿಕ ಅಶೋಕ್​ ಮತ್ತು ಸಿಂಚನ ಪ್ರತಿ ದಿನ ದೂರವಾಣಿ ಮೂಲಕ ಮಾತನಾಡಲು ಆರಂಭಿಸಿದ್ದಾರೆ. ಸಿಂಚನ ತಮ್ಮ ಮನೆಯ ಎಲ್ಲಾ ವಿಷಯಗಳನ್ನು ಹಾಗೂ ತಮ್ಮ ಮನೆಯ ಹಣಕಾಸಿನ ತೊಂದರೆಗಳನ್ನು ಅಶೋಕ್​ ಬಳಿ ಹೇಳಿಕೊಂಡಿದ್ದಾಳೆ.

ಅಲ್ಲದೆ ಸಿಂಚನ ಅವರ ತಂದೆ-ತಾಯಿಗಳು ಸಹ ಅಶೋಕ್​ಗೆ ಕರೆ ಮಾಡಿ ತಮಗೆ ಶುಂಠಿ ಬೆಳೆಯ ಬೇಸಾಯಕ್ಕಾಗಿ ಸುಮಾರು 15,00,000 ರೂ. ವರೆಗೆ ಖರ್ಚಾಗಿದ್ದು ಅಲ್ಲದೆ ಸುಮಾರು 8 ಎಕರೆ ಜಮೀನಿನಲ್ಲಿ ಮುಸಕಿನ ಜೋಳ ಮತ್ತು ಅಡಿಕೆ ಬೆಳೆಯ ಬೇಸಾಯಕ್ಕಾಗಿ ಗ್ರಾಮದ ಹಾಗೂ ಕೆಲವು ಸ್ನೇಹಿತರು ಹಾಗೂ ಸಂಭಂದಿಕರಿಂದ ಸಾಲ ಮಾಡಿ ಶುಂಠಿ ಬೆಳೆ ವ್ಯವಸಾಯ ಮಾಡಿದ್ದೇನೆ. ಆದರೆ ಶುಂಠಿ ಬೆಳೆಗೆ ರೋಗ ಉಂಟಾಗಿ ಬೆಳೆಯೂ ಸರಿಯಾಗಿ ಬಾರದೆ, ಶುಂಠಿಗೆ ಬೆಲೆಯು ಸರಿಯಾಗಿ ಸಿಗದೆ ತುಂಬಾ ಕಡಿಮೆ ಬೆಲೆಗೆ ಮಾರಾಟ ಮಾಡಿ ಸುಮಾರು 12,00,000 ಲಕ್ಷ ರೂ. ನಷ್ಟವಾಗಿದೆ. ಹೀಗಾಗಿ ತಮಗೆ ಹಣಕಾಸಿನ ನೆರವನ್ನು ನೀಡಿ, ಮದುವೆಯ ದಿನಾಂಕದೊಳಗಾಗಿ ತಾವು ಯಾವುದಾದರು ಜಮೀನನ್ನು ಮಾರಾಟ ಮಾಡಿ ಹಣವನ್ನು ವಾಪಸ್ಸು ಮಾಡುತ್ತೇವೆಂದು ಅಶೋಕ್​​ಗೆ ಹೇಳಿದ್ದಾರೆ.

ಬಳಿಕ ಅಶೋಕ್​, ವೆಂಕಟೇಶ್​ ಅವರಿಗೆ 15,00,000 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಮತ್ತು ಲಕ್ಷ್ಮಿ ಅವರಿಗೆ 8.00,000 ಲಕ್ಷ ರೂಪಾಯಿಗೂ ಅಧಿಕ ಹಣ ನೀಡಿದ್ದಾರೆ. ಅಲ್ಲದೆ ಸಿಂಚನ ಅವರಿಗೂ ಅಶೋಕ್​ 2,00,000 ಲಕ್ಷ ರೂಪಾಯಿಗೂ ಅಧಿಕ ಹಣ ನೀಡಿದ್ದಾರೆ. ಒಟ್ಟಾರೆಯಾಗಿ ಮೂವರಿಗೂ ಸುಮಾರು 25,00,000 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ನೀಡಿದ್ದಾರೆ. ಆದರೆ ಮೂವರು ಹಣ ನೀಡದೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ಅಶೋಕ್ ಹುಣಸೂರು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ​ ದೂರು ದಾಖಲಿಸಿದ್ದಾರೆ.

RELATED ARTICLES
- Advertisment -
Google search engine

Most Popular