Friday, April 4, 2025
Google search engine

Homeಸ್ಥಳೀಯಅನಿಲ ಸೋರಿಕೆ ಮೃತಪಟ್ಟ ಕುಟುಂಬಕ್ಕೆ ತಲಾ ರೂ. ೩ ಲಕ್ಷ : ಡಾ. ಹೆಚ್.ಸಿ. ಮಹಾದೇವಪ್ಪ

ಅನಿಲ ಸೋರಿಕೆ ಮೃತಪಟ್ಟ ಕುಟುಂಬಕ್ಕೆ ತಲಾ ರೂ. ೩ ಲಕ್ಷ : ಡಾ. ಹೆಚ್.ಸಿ. ಮಹಾದೇವಪ್ಪ

ಮೈಸೂರು: ಮೈಸೂರಿನ ಯರಗನಹಳ್ಳಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಮೃತಪಟ್ಟ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆದೇಶದ ಮೇರೆಗೆ ಸರ್ಕಾರದ ವತಿಯಿಂದ ತಲಾ ೩ ಲಕ್ಷ ರೂ.ಗಳನ್ನು ಅವರ ಕುಟುಂಬದವರಿಗೆ ವಿತರಿಸಲಾಗುವುದೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ತಿಳಿಸಿದರು.

ಶವಗಾರಕ್ಕೆ ಭೇಟಿ ನೀಡಿ ಮೃತ ದೇಹಗಳನ್ನು ವೀಕ್ಷಿಸಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಇದೊಂದು ದುರಂತ ಘಟನೆಯಾಗಿದ್ದು ಇಡೀ ಕುಟುಂಬ ಜೀವ ಕಳೆದುಕೊಂಡಿದೆ. ಸಾರ್ವಜನಿಕರು ಅಡುಗೆ ಅನಿಲ ಉಪಯೋಗಿಸುವಾಗ ಮತ್ತು ನಂತರ ಜಾಗೃತರಾಗಿರಬೇಕು. ಇಂತಹ ಅನಾಹುತಗಳು ಮುಂದೆ ನಡೆಯದಂತೆ ಅನಿಲ ಕಂಪನಿಗಳು ಹಾಗೂ ವಿತರಕರು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಡಾ ಅಧ್ಯಕ್ಷ ಕೆ. ಮರೀಗೌಡ ಹಾಜರಿದ್ದರು.

RELATED ARTICLES
- Advertisment -
Google search engine

Most Popular