ಮೈಸೂರು: ಈತನಿಗೆ ಎರಡು ಹೆಣ್ಣು ಮಕ್ಕಳಿದ್ದಾರೆ. ಪತ್ನಿ ಗಂಡು ಮಗುವಿಗೆ ಜನ್ಮ ನೀಡುವ ವೇಳೆ ಸಾವನ್ನಪ್ಪಿದ್ದಾರೆ. ಆದರೆ, ಈ ಸಣ್ಣ ಮಗುವನ್ನು ಸಾಕಲು ಆಗುತ್ತಿಲ್ಲವೆಂದು ಇಬ್ಬರು ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಮಗುವನ್ನು ಕೊಂಡುಹೋಗಿ ಕೆರೆಗೆ ಎಸೆದು ಕೊಲೆ ಮಾಡಿದ್ದಾನೆ. ಈ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
ದೇವನಹಳ್ಳಿಯಲ್ಲಿಯೆ ವಾಸವಿದ್ದ ದಂಪತಿಗೆ ಹಾರಿಕಾ ಮತ್ತು ದೀಕ್ಷಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಒಂದು ವರ್ಷದ ಹಿಂದೆ ಮೂರನೇ ಮಗುವಿಗೆ ಜನ್ಮ ನೀಡುವ ವೇಳೆ ಲಕ್ಷ್ಮೀ ಮೃತಪಟ್ಟಿದ್ದಾಳೆ. ಹೀಗಾಗಿ ಹೆಣ್ಣು ಮಕ್ಕಳನ್ನು ಅಜ್ಜಿ ತಾತನ ಜೊತೆ ಬಿಟ್ಟು ಒಂದೂವರೆ ವರ್ಷದ ಕುಮಾರ್ ಎಂಬ ಗಂಡು ಮಗುವಿನಿಂದಿಗೆ ಪಿರಿಯಾಪಟ್ಟಣ ತಾಲೂಕಿನ ಮಾಕೋಡಿಗೆ ವಾಪಸ್ ಆಗಿದ್ದಾನೆ. ಇಲ್ಲಿ ತನ್ನ ತಾಯಿಯೊಂದಿಗೆ ಮಗುವನ್ನು ಸಾಕುತ್ತಿದ್ದನು. ಹಲವು ಬಾರಿ ಮಗುವನ್ನು ನಮಗೆ ವಾಪಸ್ಸು ನೀಡಿ, ನಾವೇ ಸಾಕುವುದಾಗಿ ಅತ್ತೆ ತಿಳಿಸಿದ್ದರು. ಅತ್ತೆಗೆ ಮಗುವನ್ನು ಒಪ್ಪಿಸದೆ ಅದನ್ನು ಸಾಕಲು ಆಗುತ್ತಿಲ್ಲವೆಂದು ಕೆರೆಗೆ ಎಸೆದು ಕೊಂದೇ ಬಿಟ್ಟಿದ್ದಾನೆ.
ಕೊಲೆ ಪ್ರಕರಣ ದಾಖಲಿಸಿಕೊಂಡ ಪಿರಿಯಾಪಟ್ಟಣ ಠಾಣಾ ಪೊಲೀಸರು, ಆರೋಪಿ ಗಣೇಶ್‌ನನ್ನು ಬಂದಿಸಿದ್ದಾರೆ.