Tuesday, February 17, 2026
Google search engine

Homeರಾಜ್ಯಶುಕ್ರವಾರದ ಕರ್ನಾಟಕ ಬಂದ್ ​ಗೆ ಚಿತ್ರರಂಗ ಬೆಂಬಲ

ಶುಕ್ರವಾರದ ಕರ್ನಾಟಕ ಬಂದ್ ​ಗೆ ಚಿತ್ರರಂಗ ಬೆಂಬಲ

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ಶುಕ್ರವಾರ (ಸೆಪ್ಟೆಂಬರ್ 29) ಕರೆ ನೀಡಿರುವ ಕರ್ನಾಟಕ ಬಂದ್ ​ಗೆ ಚಿತ್ರರಂಗದವರು ಬೆಂಬಲ ನೀಡಿದ್ದಾರೆ.

ಈ ಸಂಬಂಧ ಇಂದು (ಸೆಪ್ಟೆಂಬರ್ 27) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ಕರೆಯಲಾಗಿದೆ.

‘ನೆಲ, ಜಲ, ಭಾಷೆ ವಿಚಾರವಾಗಿ ಚಿತ್ರರಂಗದವರಿಂದ ಯಾವಾಗಲೂ ಬೆಂಬಲ ಇದ್ದೆ ಇರುತ್ತದೆ. ಶುಕ್ರವಾರದ ಬಂದ್​ ಗೆ ನಮ್ಮ ಬೆಂಬಲ ಇದೆ. ಆದರೆ ನಮ್ಮ ಹೋರಾಟ ಹೇಗೆ ಎಂಬುದರ ಬಗ್ಗೆ ಇವತ್ತು ಸಭೆ ಮಾಡುತ್ತೇವೆ. ಪ್ರತ್ಯೇಕವಾಗಿ ಭಾಗಿಯಾಗಬೇಕಾ ಅಥವಾ ಕನ್ನಡ ಸಂಘಟನೆಗಳ ಜೊತೆಯೇ ಪ್ರತಿಭಟನೆ ಮಾಡಬೇಕಾ ಅನ್ನೋದನ್ನು ಚರ್ಚೆ ಮಾಡುತ್ತೇವೆ. ಕಲಾವಿದರ ಭಾಗಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​ ಎಂ ಸುರೇಶ್ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular