ಮೈಸೂರು: ಡಿಎಂಸಿ ಪ್ರೊಡಕ್ಷನ್ಸ್ ನಿರ್ಮಿಸಿರುವ ಲೇಡಿಸ್ ಬಾರ್ ಸಿನಿಮಾ ಫೆ.೧೬ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ಎಂ.ಎನ್.ಮುತ್ತು ತಿಳಿಸಿದರು.
ಹೆಣ್ಣು ಮಕ್ಕಳು ಕುಡಿತದ ಚಟಕ್ಕೆ ಬಲಿಯಾದರೆ ಸಮಾಜದಲ್ಲಿ ಯಾವೆಲ್ಲ ದುಷ್ಪರಿಣಾಮ ಉಂಟಾಗಬಹುದು ಎಂಬುದನ್ನು ಚಿತ್ರ ತಿಳಿಸಲಿದೆ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆದಿದ್ದು, ಮಂಡ್ಯ ಮದ್ದೂರಿನಲ್ಲೂ ಕೆಲ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಮಹಿಳೆಯರೇ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ. ನಾಲ್ಕು ಹಾಡುಗಳು, ಮೂರು ಸಾಹಸ ದೃಶ್ಯಗಳಿದ್ದು, ಕುಟುಂಬ ಸಮೇತ ವೀಕ್ಷಿಸುವ ಸಿನಿಮಾ ಎಂದು ತಿಳಿಸಿದರು.