Friday, April 4, 2025
Google search engine

ಭವಿಷ್ಯ

ನುಡಿವ ನಾಲಿಗೆಗೆ ಎಲುಬಿನ ನೆರವಿಲ್ಲದೆ
ಹರಿಯುವುದು ನಾನು ತಾನು ನಾನೇ ಎಂದು
ದುರ್ಜನರ ಸಂತೆಯಲಿ ನಿಂತು ಮರುಗಿದೆ ಮನ ದ್ವೇಷದ ದಳ್ಳುರಿಯ ಜ್ವಾಲೆಗೆ ಸಿಲುಕಿ..

ತಿಳಿ ಹಾಲಿಗೆ ಹುಳಿ ಹಿಂಡುವ ಜನ
ಕೊಳದ ನೀರಿಗೆ ಕಲ್ಲೆಸೆದು
ಅಲೆಗಳ ಚದುರಿಸುವಂತೆ
ಮತೀಯ ವಿಷವ ಹರಡುತ್ತಿರುವರು…..

ಕಿರುನಗೆಯ ಬೀರಿ ಉರುಗ ಪತಾಕೆಯ
ಮನದಲಿ ಭೋರ್ಗರಿಸಿ
ದ್ವೇಷದ ದಳ್ಳುರಿಗೆ
ಕುರು ವಂಶವೆ ನಶಿಸಲು ಕಾರಣವಾಯ್ತುಆ ನಗು
ಧರ್ಮ ಸ್ಥಾಪನೆಗೂ ಕಾರಣ ಇರಬಹುದಲ್ಲ…..?

ಧರಣಿಯ ದಹಿಸುವ ಶಕ್ತಿಗಳು
ಕರುಣೆಯ ಮರೆಸುವ ಮತಿಗಳು
ಮರುಕವ ತೊರೆದ ಪ್ರಜೆಗಳು
ಜಿದ್ದಾಜಿದ್ದಿ ಝೇಂಕರಿಸುವ ಮಾಧ್ಯಮಗಳು
ನಡುವೆ ಮುಗಿಲು ಮುಟ್ಟಿದೆ ಭುವಿಯ ಆಕ್ರಂದನ….

ಕಡಲೊಳಗೆ ಮೀನಿನ ರೆಕ್ಕೆಯ ಬಡಿತವು
ಕಂಡರೂ ಕಾಣಬಹುದು,
ಒಡಲ ಮಂಡಿ ಮಾಂಸದ ಒಳಗೆ ಕುದಿಯುವ
ರಕ್ತದ ಚಲನೆ ಬಲ್ಲವರು ಯಾರು?
ಘೋರ ಪ್ರಪಂಚದಲ್ಲಿ ಕ್ರೂರ ಜನರ ಒಳತಿಗಾಗಿ
ಬಡಿದಾಡುತ್ತಿರಿ ಜನರೆ ಇದೇ ನಾಳಿನ ಭವಿಷ್ಯ….

-ದೆ. ಶಿವರತ್ನಾನಂದ್.

RELATED ARTICLES
- Advertisment -
Google search engine

Most Popular