ಯಳಂದೂರು: ತಾಲೂಕಿನ ಕಂದಹಳ್ಳಿ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರಾಜಋಷಿ ಭಗೀರಥ ಮಹರ್ಷಿ ನೂತನ ಹಬ್ಬಾಗಿಲು ಮತ್ತು ನೂತನ ಕಳಶ ಪ್ರತಿಷ್ಠಾಪನೆ ಇಂದು ಜ. ೨೪ರ ಶುಕ್ರವಾರ ನೆರವೇರಲಿದೆ.
ಇದಕ್ಕಾಗಿ ಗುರುವಾರ ಇದಕ್ಕಾಗಿ ಗಂಗಾಪೂಜೆ, ಪಂಚಕಾವ್ಯಶುದ್ಧಿ, ಕಳಸ ಸ್ಥಾಪನೆ, ನವಗ್ರಹ, ವಾಸ್ತು ಹೋಮ ಸೇರಿದಂತೆ ಅನೇಕ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಇದಕ್ಕಾಗಿ ಇಡೀ ಗ್ರಾಮವನ್ನು ತಳಿರು ತೋರಣ, ವಿಶೇಷ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿತ್ತು.
ಇಂದು ಜ.೨೪ ರಂದು ಪುತ್ಥಳಿ ಅನಾವರಣ, ಕಳಶ ಪ್ರತಿಷ್ಠಾಪನೆ ಸೇರಿದಂತೆ ವಿವಿಧ ದಾರ್ಮಿಕ ವಿಧಿಗಳು ನಡೆಯಲಿದೆ. ಭಗೀರಥದ ಪೀಠದ ಪುರುಷೋತ್ತಮಾನಂದಪುರಿ ಸ್ವಾಮಿಜಿ, ಅಯ್ಯನಮಠದ ಮಹಾದೇವಸ್ವಾಮಿಜಿ, ಕಾರಾಪುರ ವಿರಕ್ತಮಠದ ಬಸವರಾಜಸ್ವಾಮಿ ಒಡೆಯರ್ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎ.ಆರ್. ಕೃಷ್ಣಮೂರ್ತಿ, ಸಂಸದ ಸುನೀಲ್ ಬೋಸ್, ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.