Thursday, April 3, 2025
Google search engine

Homeರಾಜ್ಯಸುದ್ದಿಜಾಲಮೊಬೈಲ್ ಬಳಕೆ ಕಾರಣ ನೀಡಿ ಹಾಸ್ಟೆಲ್ನಿಂದ ರಾತ್ರೋರಾತ್ರಿ ವಿದ್ಯಾರ್ಥಿನಿ ಮನೆಗೆ: ಅಳಲು ತೋಡಿಕೊಂಡ ವಿದ್ಯಾರ್ಥಿನಿ ತಂದೆ

ಮೊಬೈಲ್ ಬಳಕೆ ಕಾರಣ ನೀಡಿ ಹಾಸ್ಟೆಲ್ನಿಂದ ರಾತ್ರೋರಾತ್ರಿ ವಿದ್ಯಾರ್ಥಿನಿ ಮನೆಗೆ: ಅಳಲು ತೋಡಿಕೊಂಡ ವಿದ್ಯಾರ್ಥಿನಿ ತಂದೆ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಹೊರವಲಯದ ಮೂಲ್ಕಿಯ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ಎರಡನೇ ವರ್ಷದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ತನ್ನ ಪುತ್ರಿ ಮೊಬೈಲ್ ಫೋನ್ ಬಳಸಿದ ಕಾರಣ ನೀಡಿ ಅ.5ರಂದು ರಾತ್ರೋರಾತ್ರಿ ಹಾಸ್ಟೆಲ್‌ನಿಂದ ಮನೆಗೆ ಕಳುಹಿಸಿದ್ದು, ಈಗ ಆಕೆ ಮಾನಸಿಕವಾಗಿ ನೊಂದು ಹೋಗಿದ್ದಾಳೆ ಎಂದು ಆಕೆಯ ತಂದೆ ಕಡಬದ ಸೆಬಾಸ್ಟಿಯನ್ ಅಳಲು ತೋಡಿಕೊಂಡಿದ್ದಾರೆ.

ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ವರ್ಷದ ಶಿಕ್ಷಣ ಪೂರೈಸಿದ ಅವಳ ಎರಡನೇ ವರ್ಷದ ಶುಲ್ಕ ಒಂದು ಲಕ್ಷ ರೂ. ಪಾವತಿಸಲಾಗಿತ್ತು. ಆದರೆ ಮೊಬೈಲ್ ಫೋನ್ ಬಳಸಿದ್ದಕ್ಕೆ ಏಕಾಏಕಿ ಕಾಲೇಜಿನಿಂದ ಹೊರಗೆ ಕಳುಹಿಸಲಾಗಿದೆ. ಮಾತ್ರವಲ್ಲದೇ ಆಕೆಯ ಮೊಬೈಲನ್ನು ಕೂಡಾ ಕಾಲೇಜಿನವರು ತೆಗೆದು ಇಟ್ಟುಕೊಂಡಿದ್ದಾರೆ. ಕಾಲೇಜಿಗೆ ನೀಡಲಾದ ಎಸೆಸೆಲ್ಸಿ, ಪಿಯುಸಿ ಅಂಕ ಪಟ್ಟಿಯನ್ನೂ ನೀಡಿಲ್ಲ. ಕಾಲೇಜಿಗೆ ಹೋಗಿ ಕೇಳಿದರೂ ಆಡಳಿತ ಮಂಡಳಿ ಸ್ಪಂದಿಸಿಲ್ಲ. ಈ ಬಗ್ಗೆ ಡಿ.12ರಂದು ಮುಲ್ಕಿ ಠಾಣೆಗೆ ದೂರು ನೀಡಲಾಗಿತ್ತು. ಆದರೆ ಅದರಿಂದಲೂ ಯಾವುದೇ ಪ್ರಯೋಜನವಾಗಿಲ್ಲ. ಈಗ ಆಕೆಯ ಮುಂದಿನ ವಿದ್ಯಾಭ್ಯಾಸಕ್ಕೂ ತೊಡಕಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ಇತರ ವಿದ್ಯಾರ್ಥಿಗಳಾದ ಮುಹಮ್ಮದ್ ಮೊಹ್ಸಿನ್, ಮುಹಮ್ಮದ್ ಮುಸ್ತಫ, ಅಜ್ಜಲ್, ಮುಹಮ್ಮದ್ ರಶೀದ್ ಕಾಲೇಜಿನಲ್ಲಿ 3 ಪಟ್ಟು ಹೆಚ್ಚು ಶುಲ್ಕ ಕೇಳುತ್ತಿದ್ದು, ಕಟ್ಟದಿರುವುದಕ್ಕೆ ಪರಿಕ್ಷೆಯ ಹಾಲ್ ಟಿಕೆಟ್ ನೀಡಿಲ್ಲ ಎಂದು ದೂರಿದರು.

RELATED ARTICLES
- Advertisment -
Google search engine

Most Popular