Friday, April 18, 2025
Google search engine

Homeರಾಜ್ಯಸುದ್ದಿಜಾಲಸರ್ಕಾರಿ ಅಧಿಕಾರಿಗಳ ಉತ್ತಮ ಕೆಲಸ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವುದು-ತಹಸೀಲ್ದಾರ್ ಸೋಮನಗೌಡ ಎಸ್.ನರಗುಂದ್

ಸರ್ಕಾರಿ ಅಧಿಕಾರಿಗಳ ಉತ್ತಮ ಕೆಲಸ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವುದು-ತಹಸೀಲ್ದಾರ್ ಸೋಮನಗೌಡ ಎಸ್.ನರಗುಂದ್

ವರ್ಗಾವಣೆಗೊಂಡ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರಿಗೆ ಬೀಳ್ಕೊಡುಗೆ ಸಮಾರಂಭ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡುವವರು ತಮ್ಮ ಸೇವಾವಧಿಯಲ್ಲಿ ಉತ್ತಮ ಸೇವೆ ನೀಡಿದಂತಹವರ ಹೆಸರು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದು ಸಾಲಿಗ್ರಾಮ ತಹಸೀಲ್ದಾರ್ ಸೋಮನಗೌಡ ಎಸ್.ನರಗುಂದ್ ಹೇಳಿದರು.

ಕೆ.ಆರ್.ನಗರ ತಾಲೂಕಿನಲ್ಲಿ ಒಂದು ವರ್ಷ ಸೇವೆ ಸಲ್ಲಿಸಿ ಕಡೂರು ತಾಲೂಕಿಗೆ ವರ್ಗಾವಣೆಗೊಂಡ ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಅವರಿಗೆ ಸಹೊದ್ಯೋಗಿಗಳು ಮತ್ತು ಕಚೇರಿ ಸಿಬ್ಬಂದಿಗಳು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ನಾವು ಪ್ರಾಮಾಣಿಕರಾಗಿ ಕರ್ತವ್ಯ ಮಾಡಿದರೆ ಸರ್ಕಾರದ ಸವಲತ್ತುಗಳು ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿ ಇದರಿಂದ ಸರ್ಕಾರದ ಮೂಲ ಉದ್ದೇಶ ಮತ್ತು ಆಶಯ ಈಡೇರಲಿದ್ದು ಇದನ್ನು ಅರಿತು ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಒಂದು ವರ್ಷದ ಸೇವಾ ಅವಧಿಯಲ್ಲಿ ಸಿ.ಎಸ್.ಪೂರ್ಣಿಮಾ ಅವರು ಜನಪರವಾದ ಕೆಲಸಗಳನ್ನು ಮಾಡಿ ಸಾರ್ವಜನಿಕರು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯ ಮನ ಗೆದ್ದಿದ್ದು ಇದು ಅವರ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಡೂರು ತಹಸೀಲ್ದಾರ್ ಸಿ.ಎಸ್.ಪೂರ್ಣಿಮಾ ಇಲ್ಲಿ ನಾನು ಕೆಲಸ ನಿರ್ವಹಿಸುವಾಗ ಸಹಕಾರ ನೀಡಿದ ಸಹೊದ್ಯೋಗಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿ ನೀವುಗಳು ನಮ್ಮಂತಹ ಅಧಿಕಾರಿಗಳಿಗೆ ಸಹಕಾರ ನೀಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.

ಕೆ.ಆರ್.ನಗರ ತಾಲೂಕು ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಶಿರಸ್ತೇದಾರ್ ಅಸ್ಲಾಂಬಾಷಾ, ನಿವೃತ್ತ ಗ್ರೇಡ್-೨ ತಹಸೀಲ್ದಾರ್ ಕೆ.ಎಸ್.ಬಾಲಸುಬ್ರಹ್ಮಣ್ಯಂ, ಎಡಿಎಲ್‌ಆರ್ ಶ್ರೀಕಂಠಶರ್ಮ, ಉಪ-ತಹಸೀಲ್ದಾರ್ ಕೃಷ್ಣಮೂರ್ತಿ, ಮಾತನಾಡಿ ಸಿ.ಎಸ್.ಪೂರ್ಣಿಮಾ ಅವರ ಕೆಲಸದ ಶೈಲಿಯ ಬಗೆ ಗುಣಗಾನ ಮಾಡಿದರು.

ಗ್ರೇಡ್ -೨ ತಹಸೀಲ್ದಾರ್ ಎ.ಎಸ್.ಚಂದ್ರಶೇಖರ್, ಸಾಲಿಗ್ರಾಮ ಶಿರಸ್ತೇದಾರ್ ಎಂ.ಸಿ.ಶಿಕುಮಾರ್, ಕಂದಾಯಾಧಿಕಾರಿ ರ, ರಂಜಿತ್, ಕಚೇರಿ ಸಿಬ್ಬಂದಿಗಳಾದ ಎಂ.ಸಿ.ಸಣ್ಣಸ್ವಾಮಿ, ದ್ರುವ, ಯಶವಂತ್, ಮನು, ರಜಿನಿ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular