ಮಂಡ್ಯ: ರಾಜ್ಯದಲ್ಲಿ ಮುಂಗಾರು ಕೈಕೊಟ್ಟ ಹಿನ್ನಲೆಯಲ್ಲಿ ಬೆಳೆದ ಬೆಳೆಗೆ ನೀರಿಲ್ಲದೇ ರೈತರು ಕಂಗಾಲಾಗಿದ್ದಾರೆ.
ಈ ನಡುವೆ ಹೊಸದಾಗಿ ಬೆಳೆ ಬಿತ್ತನೆ ಕಾರ್ಯ ಮಾಡದಂತೆ ರೈತರಿಗೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ.
ಇರುವ ಬೆಳೆ, ಜನಜಾನುವಾರುಗಳಿಗೆ ಕುಡಿಯಲು ಮಾತ್ರ ಡ್ಯಾಂನಿಂದ ನಾಲೆಗಳಿಗೆ ನೀರು ಪೂರೈಕೆ ಮಾಡಲಾಗಿದೆ.ರಾಜ್ಯದ ಎಲ್ಲಾ ಡ್ಯಾಂ ಗಳು ಬರಿದಾಗಿವೆ. ರೈತರಿಗೆ ನೀರು ಕೊಡುವ ಪರಿಸ್ಥಿತಿಯಲ್ಲಿಲ್ಲ. ಮಂಡ್ಯ ಕೆಆರ್ ಎಸ್ ಅಚ್ಚುಕಟ್ಟಿನಲ್ಲಿ ಕೆರೆ ತುಂಬಿ ಜನಜಾನುವಾರು ಕುಡಿಯಲು ನೀರು ಪೂರೈಕೆ ಮಾಡಲಾಗುತ್ತಿದೆ ಎಂದಿದ್ದಾರೆ.
ಶಾಸಕರ ಒತ್ತಾಯದ ಮೇರೆಗೆ ಸರ್ಕಾರ ತೀರ್ಮಾನ ಕೈಗೊಂಡು ನೀರು ಬಿಟ್ಟಿದೆ. ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು, ಹೊಸ ಬೆಳೆ ಹಾಕದಂತೆ ಈಗಾಗಲೇ ನೀರಾವರಿ ಇಲಾಖೆ ಸೂಚನೆ ಕೊಟ್ಟಿದೆ. ರೈತರು ಸಹಕರಿಸಿ 6 ತಿಂಗಳ ಮಟ್ಟಿಗೆ ಬೆಳೆ ಹಾಕಬೇಡಿ. ಕೆಆರ್ ಎಸ್ ನೀರು ನಂಬಿ ರೈತರು ಹೊಸ ಭಿತ್ತನೆ ಮಾಡಬೇಡಿ. ಎಲ್ಲದಕ್ಕೂ ಪರಿಹಾರ ಇಲ್ಲ, ಸಾಕಷ್ಟು ಕಾರ್ಯಕ್ರಮ ರೈತರಿಗೆ ಕೊಟ್ಟಿದ್ದೇವೆ ಎಂದು ಮನವಿ ಮಾಡಿದ್ದಾರೆ.
ಸದ್ಯ ಕೆ ಆರ್ ಎಸ್ ಜಲಾಶಯದಲ್ಲಿ 91.82 ಅಡಿ ನೀರಿದೆ.