Friday, April 11, 2025
Google search engine

Homeರಾಜ್ಯಸುದ್ದಿಜಾಲಸರ್ಕಾರ ಕೂಡಲೇ ಹೆಚ್. ಕಾಂತರಾಜು ಆಯೋಗದ ವರದಿಯನ್ನು ಸ್ವೀಕಾರ ಮಾಡಿ ಜಾರಿಗೊಳಿಸುವಂತೆ ಎಚ್.ವಿಶ್ವನಾಥ್ ಒತ್ತಾಯ

ಸರ್ಕಾರ ಕೂಡಲೇ ಹೆಚ್. ಕಾಂತರಾಜು ಆಯೋಗದ ವರದಿಯನ್ನು ಸ್ವೀಕಾರ ಮಾಡಿ ಜಾರಿಗೊಳಿಸುವಂತೆ ಎಚ್.ವಿಶ್ವನಾಥ್ ಒತ್ತಾಯ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ .ಆರ್.ನಗರ: ಹೆಚ್.ಕಾಂತರಾಜು ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಸ್ವೀಕಾರ ಮಾಡಿ ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸರ್ಕಾರವನ್ನು ಒತ್ತಾಯಿಸಿದರು.
ಕೆ.ಆರ್.ನಗರ ಪಟ್ಟಣದ ಆಂಜನೇಯ ಬಡಾವಣೆಯ ಉಪ್ಪಾರ ಶ್ರೀ ರಾಮ ಮಂದಿರದಲ್ಲಿ ಭಾನುವಾರ ನಡೆದ ಸಂಘದ ಉದ್ಘಾಟನೆ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು ಈ ವಿಚಾರದಲ್ಲಿ ಯಾವುದೇ ಒತ್ತಡ ಮತ್ತು ಯಾರ ಮುಲಾಜಿಗೂ ಮುಖ್ಯಮಂತ್ರಿಗಳು ಒಳಗಾಗಬಾರದು ಎಂದರು.
ಕಾಂತರಾಜು ಆಯೋಗದ ವರದಿಯ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಆರ್.ಅಶೋಕ್ ಅವರು ಅದನ್ನು ಓದಿಕೊಂಡಿದ್ದಾರೆಯೆ ಎಂದು ಪ್ರಶ್ನಿಸಿದ ಅವರು ಇಂಡಿಯನ್ ಇನ್ಸ್ಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ನವರು ವರದಿಯನ್ನು ಪರಿಶೀಲಿಸಿ ಅಂತಿಮಗೊಳಿಸಿದ್ದು ಅವರಿಗಿಂತಾ ಈ ಇಬ್ಬರು ಮಹಾನ್ ನಾಯಕರು ಬುದ್ದಿವಂತರೆ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಎಲ್.ಜಿ.ಹಾವನೂರರ ವರದಿಯನ್ನು ಹಿಂದುಳಿದ ವರ್ಗಗಳ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜಅರಸು ಅವರು ಜಾರಿಗೆ ತರುವಾಗ ಯಾವುದೇ ಒತ್ತಡಕ್ಕೂ ಜಗ್ಗಲ್ಲಿಲ್ಲ ಅದರ ಪರಿಣಾಮ ಅತ್ಯಂತ ಹಿಂದುಳಿದ ಜಾತಿಯವರು ಆರ್ಥಿಕ ಮತ್ತು ಶೈಕ್ಷಣಿಕವಾಗಿ ಮುಂದುವರೆಯಲು ಸಾಧ್ಯವಾಯಿತು ಎಂದರು

ಶಾಸಕ ಡಿ.ರವಿಶಂಕರ್ ಮಾತನಾಡಿ ಸಮಾಜದಲ್ಲಿ ಹಿಂದುಳಿದ ವರ್ಗ ಮತ್ತು ಜಾತಿಯವರು ಗಟ್ಟಿಯಾಗಿ ನಿಲ್ಲಬೇಕಾದರೆ ಒಗ್ಗಟ್ಟು ಮತ್ತು ಸಂಘಟನೆ ಅತ್ಯಂತ ಅವಶ್ಯವಾಗಿದ್ದು ಇದನ್ನು ಮನಗಂಡು ಎಲ್ಲರೂ ಒಂದಾಗಿ ಕೆಲಸ ಮಾಡಬೇಕು ಎಂದರು.
ಸಮುದಾಯ ಅಭಿವೃದ್ದಿಯಾಗಿ ರಾಜಕೀಯ ಅಧಿಕಾರ ಸಿಗಬೇಕಾದರೆ ಶೈಕ್ಷಣಿಕ ಏಳಿಗೆ ಪ್ರಮುಖವಾಗಿದ್ದು ಇದನ್ನು ಮನಗಂಡು ಉಪ್ಪಾರ ಸಮಾಜದ ಬಾಂಧವರು ತಮ್ಮ ಮಕ್ಕಳಿಗೆ ಉನ್ನತ ಮತ್ತು ಉತ್ತಮ ಶಿಕ್ಷಣ ಕೊಡಿಸಬೇಕು ಎಂದರಲ್ಲದೆ ನನ್ನ ಶಾಸಕತ್ವದ ಅವಧಿಯಲ್ಲಿ ನಿಮ್ಮ ಸಮಾಜಕ್ಕೆ ಹೆಚ್ಚಾಗಿ ರಾಜಕೀಯ ಅಧಿಕಾರ ನೀಡುವುದಾಗಿ ಭರವಸೆ ನೀಡಿದರು.
ಸಮಾಜದ ಮುಖಂಡರ ಬಹುದಿನಗಳ ಬೇಡಿಕೆಯಾಗಿರುವ ಸಮುದಾಯ ಭವನ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ ನಿವೇಶನ ಕೊಡುವುದರ ಜತೆಗೆ ಸರ್ಕಾರದಿಂದ ಅಗತ್ಯ ಅನುದಾನ ಮತ್ತು ವೈಯುಕ್ತಿಕ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ ಶಾಸಕರು ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ ಎಂದು ಹೇಳಿದರು.
ಮುಡಾ ಮಾಜಿ ಅಧ್ಯಕ್ಷ ಹೆಚ್.ಎನ್.ವಿಜಯ್, ವಾಣಿಜ್ಯ ಇಲಾಖೆಯ ನಿವೃತ್ತ ಅಪರಾ ಆಯುಕ್ತ ಡಿ.ಜಗನ್ನಾಥ್ ಸಾಗರ್, ಸಂಘದ ಅಧ್ಯಕ್ಷ ಕಾಟ್ನಾಳುಮಹದೇವ್, ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ಟಿ.ರಾಮೇಗೌಡ ಮಾತನಾಡಿದರು.
ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಹೆಚ್.ಟಿ.ಪಾಂಡು, ಸಂಘದ ಪದಾಧಿಕಾರಿಗಳಾದ ಎಸ್.ಯೋಗಾನಂದ, ಮುದುಗುಪ್ಪೆಕುಮಾರ್, ಡಿ.ತಮ್ಮಯ್ಯ, ಯೋಗೀಶ್‌ಕುಮಾರ್, ಟಿ.ರಾಮಕೃಷ್ಣ, ಸೋಮಣ್ಣ, ಮೋಹನ್, ಬಿ.ಕೆ.ನಾಗಣ್ಣ, ಸಂದೀಪ್, ಗೋವಿಂದೇಗೌಡ, ಮಂಜುನಾಥ್, ತಿಪ್ಪೂರುರವಿ, ಮಾಜಿ ಪುರಸಭಾ ಸದಸ್ಯ ಎಸ್.ಯೋಗನಂದ, ಮುಖಂಡ ಕಾಳಮ್ಮನಕೊಪ್ಪಲು ಮೋಹನ್ ಕುಮಾರ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular