ವರದಿ: ರವಿಚಂದ್ರಬೂದಿತಿಟ್ಟು
ಪಿರಿಯಾಪಟ್ಟಣ: ಬಿಜೆಪಿಯ ಪ್ರತಿಭಟನೆ ಫಲವಾಗಿ ರೈತರಿಗೆ ರಸಗೊಬ್ಬರ ವಿತರಾಣೆ ಮಾಡುವಲ್ಲಿ ಸರ್ಕಾರ ಮುಂದಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಬಾರ ಹಳ್ಳಿ ಸುಬ್ಬಣ್ಣ ತಿಳಿಸಿದರು.
ಪಟ್ಟಣದ ತಾಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿರುವುದು ಸಂತೋಷ ಆದರೆ ಈ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಕೂಡ ಗಮನಿಸಬೇಕಾಗಿದೆ. ಲಕ್ಷಾಂತರ ಮಹಿಳೆಯರು ಶಕ್ತಿ ಯೋಜನೆಯಲ್ಲಿ ಪ್ರಯಾಣಿಸಿದ್ದಾರೆ ಎಂದು ಲೆಕ್ಕ ತೋರಿಸುವ ಸರ್ಕಾರ ಪ್ರಯಾಣಿಕರಿಗೆ ಹೆಚ್ಚಿನ ಬಸ್ ಸೌಲಭ್ಯ ಮಾಡಿದೆಯೇ ಎಂಬುದನ್ನು ಉತ್ತರಿಸಬೇಕು. ಈ ಹಿಂದೆ ಇದ್ದಂತ ಬಸ್ಸ್ ಗಳ ಸಂಖ್ಯೆಯೇ ಇಂದಿಗೂ ಇದೆ.
ರೈತರಿಗೆ ಬೆಳೆಗಳಿಗೆ ರಸಗೊಬ್ಬರ ಸಿಗದೆ ಸಾಕಷ್ಟು ಪರದಾಡುತ್ತಿದ್ದಾರೆ. ಇದನ್ನು ಮನಗಂಡು ರಾಜ್ಯ ಬಿಜೆಪಿ ಪಕ್ಷವು ಪ್ರತಿಭಟನೆ ಮಾಡಲಾಗಿ ಸರ್ಕಾರ ಇಂದು ರಸಗೊಬ್ಬರ ವಿತರಣೆ ಮಾಡುವಲ್ಲಿ ಕ್ರಮ ಕೈಗೊಳ್ಳುತ್ತಿದೆ.
ಬಿಜೆಪಿ ತಾಲೂಕು ಅಧ್ಯಕ್ಷ ರಾಜೇಂದ್ರ ಮಾತನಾಡಿ ಕೇಂದ್ರ ಸರ್ಕಾರದಿಂದ ಸಾಕಷ್ಟು ಅನುದಾನಗಳು ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾಗುತ್ತಿದ್ದು, ಈ ಯೋಜನೆಗಳ ಕಟ್ಟಡ ಮತ್ತು ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮಗಳಿಗೆ ಸ್ಥಳೀಯ ಸಚಿವರು ಸಂಸದರನ್ನು ನಿರ್ಲಕ್ಷ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ತಾಲೂಕಿನ ಚಪ್ಪರದಹಳ್ಳಿಯ ನೂತನ ಗ್ರಾಮ ಪಂಚಾಯಿತಿಯ ಉದ್ಘಾಟನೆಯನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದಾರೆ. ಇದೇ ರೀತಿಯ ಪರಿಸ್ಥಿತಿಗಳು ನಿರ್ಮಾಣವಾದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ.ಸಚಿವರು ಕೇವಲ ಪ್ರವಾಸದಲ್ಲಿಯೇ ಕಾಲಹರಣ ಮಾಡುತ್ತಿದ್ದು ತಾಲೂಕಿನ ಅಭಿವೃದ್ಧಿಯ ಕಡೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಮೇಶ್,ಕೌಲನಹಳ್ಳಿ ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಕಿರಣ್ ಜಯರಾಮೇಗೌಡ, ಜಿಲ್ಲಾ ವಕ್ತಾರ ದಯಾನಂದ್ ಪಟೇಲ್,ಮುಖಂಡರಾದ ಆರ್.ಟಿ. ಸತೀಶ್, ಲೋಕಪಾಲಯ್ಯ,ಚನ್ನ ಬಸವರಾಜ್, ವಿಕ್ರಂ ರಾಜ್,ಬೆಮ್ಮತಿ ಚಂದ್ರು, ಮಾಗಳಿ ಸ್ವಾಮಿ,ಪಾಪಣ್ಣ, ಬಾಲಕೃಷ್ಣ, ಸಾಮ್ರಾಟ್ ಸೇರಿದಂತ್ತೆ ಇತರರು ಹಾಜರಿದ್ದರು.