Saturday, April 19, 2025
Google search engine

Homeರಾಜ್ಯವರ್ಗಾವಣೆಗೊಂಡಿದ್ದ 5 ಐಎಎಸ್ ಅಧಿಕಾರಿಗಳ ಸ್ಥಳ ನಿಯೋಜನೆ ಮಾಡಿ ಸರ್ಕಾರ ಆದೇಶ

ವರ್ಗಾವಣೆಗೊಂಡಿದ್ದ 5 ಐಎಎಸ್ ಅಧಿಕಾರಿಗಳ ಸ್ಥಳ ನಿಯೋಜನೆ ಮಾಡಿ ಸರ್ಕಾರ ಆದೇಶ

ಬೆಂಗಳೂರು:  ಇತ್ತೀಚೆಗೆ ವರ್ಗಾವಣೆಯಾಗಿದ್ದ ಐದು ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯೋಜನೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಐಎಎಸ್ ಅಧಿಕಾರಿ ನವೀನ್ ರಾಜ್ ಸಿಂಗ್ ಅವರನ್ನ ವಸತಿ ಇಲಾಖೆಯ ಕಾರ್ಯದರ್ಶಿಯಾಗಿ,  ಸುಷ್ಮಾ ಗೋಡ್ಬೋಲೆ ಅವರನ್ನ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಿಇಒ ಆಗಿ ನೇಮಿಸಲಾಗಿದೆ.

ಹಾಗೆಯೇ ಯಶ್ವಂತ್ ಗುರುಕರ್ ಅವರನ್ನ ಸ್ಮಾರ್ಟ್ ಗವರ್ನೆನ್ಸ್ ಸೆಂಟರ್  ನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ , ಪಿ.ಸುನೀಲ್ ಕುಮಾರ್ ಅವರನ್ನ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರನ್ನಾಗಿ ನೇಮಿಸಿದೆ. ಹಾಗೆಯೇ ಎಂಆರ್ ರವಿ ಕುಮಾರ್ ಅವರನ್ನ ಮೈಸೂರು ಸಕ್ಕರೆ ಕಾರ್ಖಾನೆಗೆ ಎಂಡಿ ಆಗಿ ನೇಮಿಸಲಾಗಿದೆ.

ಇನ್ನು ಹಲವು ಐಎಎಸ್ ಅಧಿಕಾರಿಗಳನ್ನ  ವರ್ಗಾವಣೆ ಮಾಡಲಾಗಿದೆ. ವರ್ಗಾವಣೆಗೊಂಡವರ ಪಟ್ಟಿ ಹೀಗಿದೆ.

ರಮೇಶ್ .ಡಿಎಸ್ –ತೋಟಗಾರಿಕೆ ಇಲಾಖೆ, ನಿರ್ದೇಶಕರು

ಸತೀಶ ಬಿ.ಸಿ- ಆಡಳಿತ ತರಬೇತಿ ಸಂಸ್ಥೆ ಮೈಸೂರು,  ಜಂಟಿ ನಿರ್ದೇಶಕರು.

ಡಾ.ಗೋಪಾಲ್ ಕೃಷ್ಣ- ಕಾರ್ಮಿಕ ಇಲಾಖೆ , ಬೆಂಗಳೂರು, ಆಯುಕ್ತರು.

ಮೀನಾ ನಾಗರಾಜ್ –ಜಿಲ್ಲಾಧಿಕಾರಿ ಚಿಕ್ಕಮಗಳೂರು

ಡಾ.ಆನಂದ್ ಕೆ- ಸಿಇಒ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್.

ಜಯವಿಭವಸ್ವಾಮಿ-ಮ್ಯಾನೇಜಿಂಗ್ ಡೈರೆಕ್ಟರ್, ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು.

ಪ್ರಭು ಜಿ.-ಸಿಇಒ, ತುಮಕೂರು ಜಿಲ್ಲಾ ಪಂಚಾಯತ್

RELATED ARTICLES
- Advertisment -
Google search engine

Most Popular