Sunday, August 10, 2025
Google search engine

Homeರಾಜ್ಯಹನುಮ ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮವಾಗಬೇಕು: ಸಿ.ಟಿ ರವಿ

ಹನುಮ ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮವಾಗಬೇಕು: ಸಿ.ಟಿ ರವಿ

ಮಂಡ್ಯ: ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೆರಗೋಡು ಗ್ರಾಮದಿಂದ ಮಂಡ್ಯ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆದಿದ್ದು, ಡಿಸಿ ಕಚೇರಿಯಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಸಭೆಯಲ್ಲಿ ಮೊದಲಿಗೆ ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಬಳಿಕ ಮಾಜಿ ಶಾಸಕ ಪ್ರೀತಂಗೌಡ ಮಾತನಾಡಿದರು.  ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಿಎಂ ಹೆಚ್ ಡಿಕೆ ಆಗಮಿಸಿದ್ದು, ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿ ಹಲವರು ಸಾಥ್ ನೀಡಿದರು.

ಮಂಡ್ಯದ ಡಿಸಿ ಕಚೇರಿ ಬಳಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿ, ಹನುಮ ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮ ವಾಗಬೇಕು ಎಂದು ಕಿಡಿಕಾರಿದರು.

ಮೊದಲಿಗೆ ಹರ ಹರ ಮಹಾದೇವ್ , ಭಾರತ್ ಮಾತಾ ಕೀ ಜೈಕಾರ ಕೂಗಿದ ಸಿಟಿ ರವಿ, ನಮ್ಮ ಹೋರಾಟ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧ ನೀತಿ ವಿರುದ್ಧ. ಹನುಮನನ್ನ ಕೆಣಕಿ ಯಾರಾದ್ರು ಉಳಿದಿದ್ದಾರಾ? ಕಾಂಗ್ರೆಸ್ ಕೂಡ ಜಾಸ್ತಿ ದಿನ ಉಳಿಯಲ್ಲ. ಹನುಮ ಜನಿಸಿದ ನಾಡು ಕರ್ನಾಟಕ, ಈ ನಾಡಲ್ಲಿ ಹನುಮ ಧ್ವಜ ಹಾಕೋದು ಅಪರಾಧ ನಾ? ಕಾಂಗ್ರೆಸ್ ಅಪರಾಧ ಅಂತ ಭಾವಿಸಿದೆ ಎಂದು ಕಿಡಿಕಾರಿದರು.

ನಾವು ಊರು, ಊರಿನಲ್ಲಿ, ಮನೆ ಮನೆಯಲ್ಲಿ ಹನುಮ ಧ್ವಜ ಹಾರಿಸುತ್ತೇವೆ. ನಿಮಗೆ ತಾಕತ್ ಇದ್ರೆ ತೆಗೆದು ನೋಡಿ ನೀವು ಉಳಿಯುತ್ತಿರೋ, ಹನುಮ ಭಕ್ತರು ಉಳಿಯುತ್ತಾರೋ ನೊಡೋಣಾ. ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮ ವಾಗಬೇಕು. ಶಾಂತಿ ಸಂಧಾನಕ್ಕೆ ರಾಮ ಹೋಗಿದ್ದ, ಹನುಮನ ಬಾಲಕ್ಕೆ ಬೆಂಕಿ ಹಾಕಿದ್ರು. ನಿಮ್ಮ ಹೆಸರಲ್ಲಿ ರಾಮ ಇರಬಹುದು ಸಿದ್ದರಾಮಯ್ಯ ಅವರೇ ರಾಮ ಭಕ್ತಿ ಇಲ್ಲ. ರಾಮನ ವಿರೋಧಿ ಎಂದು ಸಾಬೀತುಪಡಿಸಿದ್ದೀರಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಗೆ ಭೂತ, ಪ್ರೇತಾ ಮೆಟ್ಟಿಕೊಂಡಿದೆ. ಟಿಪ್ಪು ಸುಲ್ತಾನ್ ದೆವ್ವ ಮೆಟ್ಟಿಕೊಂಡಿದ್ದೆ. ಸಿದ್ದರಾಮಯ್ಯ ಅವರು ತನ್ನ ರಾಜಕೀಯ ಅವತಾರ ಹನುಮ ಧ್ವಜ ತೆಗೆದಿದ್ದಾರೆ ಎಂದು ಆರೋಪಿಸಿದರು.

ನೀವು ತಪ್ಪು ಮಾಡಿದ್ದಿರಿ, ಅ ತಪ್ಪಿಗೆ ಸಾರ್ವಜನಿಕರ ಕ್ಷಮೆ ಯಾಚನೆ ಮಾಡಿ. ಕೆರಗೋಡು ಗ್ರಾಮದಲ್ಲಿ ಮತ್ತೆ ಹನುಮ ಧ್ವಜ ಹಾರಾಡಬೇಕು. ಈ ಊರಿಗೆ ಕಾಲಿಡಲು ಆಗದ ಪರಿಸ್ಥಿತಿ ಬರುತ್ತೆ. ರಾಜಕೀಯ ಎಷ್ಟು ದಿನ ಮಾಡ್ತಿರಾ ನೀವು? ಕಾಂಗ್ರೆಸ್ ಕೇಲ್ ಕತಮ್ ಆಗುತ್ತೆ. ಜಿಲ್ಲಾಡಳಿತ ಮತ್ತೆ ಹನುಮ ಧ್ವಜ ಹಾಕಿ ಎಂದು ಆಗ್ರಹಿಸಿದರು.

ಇದೇ ವೇಳೆ ಲೋಕಸಭಾ ಚುನಾವಣೆ 28 ಸೀಟು ಗೆಲ್ಲುತ್ತೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular