ಮಂಗಳೂರಿನ ಕಂಕನಾಡಿಯಲ್ಲಿರುವ ʼಸಿಟಿ ಗೋಲ್ಡ್ ಡೈಮಂಡ್ಸ್ʼ ನಲ್ಲಿ ಮುಂದಿನ ಜನವರಿ 15ರವರೆಗೆ ನಡೆಯುವ ‘ದಿ ಹೋಪ್’ ವಜ್ರಾಭರಣ ಪ್ರದರ್ಶನ ಮತ್ತು ಮಾರಾಟ ಮೇಳವು ಶುಕ್ರವಾರ ಸಂಜೆ ಉದ್ಘಾಟನೆಗೊಂಡಿತು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಸೋಷಿಯಲ್ ಇನ್ಫ್ಲುಯೆನ್ಸರ್‌ಗಳಾದ ಅನೀಶ್ ಮತ್ತು ನೇಹಾ ಹಾಗೂ ಉದ್ಯಮಿಗಳಾದ ಉಮ್ಮರ್ ಫಾರೂಕ್, ರಿಯಾಝ್ ಅಶ್ರಫ್, ಆಶಿಕ್ ಕುಕ್ಕಾಜೆ, ಮೇಕಪ್ ಆರ್ಟಿಸ್ಟ್‌ಗಳಾದ ನಿಶಾ, ಸಹನಾ ಬಾನು ಭಾಗವಹಿಸಿ ಶುಭ ಹಾರೈಸಿದರು.
ಸಿಟಿ ಗೋಲ್ಡ್‌ನ ಎಜಿಎಂ ಮುಹಮ್ಮದ್ ಅಝ್ಮಲ್, ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್, ಅಸಿಸ್ಟೆಂಟ್ ಬ್ರಾಂಚ್ ಮ್ಯಾನೇಜರ್ ಅಝೀಝ್ ಎಸ್.ಎ, ಸೇಲ್ಸ್ ಮ್ಯಾನೇಜರ್ ಇಮ್ರಾನ್ ವಿ., ಮಾರ್ಕೆಟಿಂಗ್ ಮ್ಯಾನೇಜರ್ ಮುಹಮ್ಮದ್ ರಹೀಸ್ ಮತ್ತು ಸಿಟಿಗೋಲ್ಡ್‌ನ ಸಿಬ್ಬಂದಿ ವರ್ಗ ಹಾಗೂ ಗ್ರಾಹಕರು ಉಪಸ್ಥಿತರಿದ್ದರು. ನಮಿತಾ ಅಂತರ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.



