Friday, April 18, 2025
Google search engine

Homeಅಪರಾಧಮಗಳಿಗೆ ಬಾಲ್ಯ ವಿವಾಹ ಬೇಡ ಅಂದಿದ್ದಕ್ಕೆ ಪತ್ನಿಯ ಕಾಲು ಮುರಿದ ಪತಿ

ಮಗಳಿಗೆ ಬಾಲ್ಯ ವಿವಾಹ ಬೇಡ ಅಂದಿದ್ದಕ್ಕೆ ಪತ್ನಿಯ ಕಾಲು ಮುರಿದ ಪತಿ

ಬೆಳಗಾವಿ: ಮಗಳಿಗೆ ಬಾಲ್ಯವಿವಾಹ ಮಾಡಿಸುವುದು ಬೇಡ ಅಂದಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು ಪತಿ ತನ್ನ ಪತ್ನಿ ಕಾಲು ಮುರಿದಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ.

ಮಾಯವ್ವಾ ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  

ಹಾರುಗೊಪ್ಪ ಗ್ರಾಮದ ಬೀರಪ್ಪ ತನ್ನ ಮಗಳಿಗೆ ಬಾಲ್ಯವಿವಾಹ ಮಾಡಿಸಲು ಮುಂದಾಗಿದ್ದರು. ಪತ್ನಿ ಮಾಯವ್ವಾ ಇದನ್ನು ನಿರಾಕರಿಸಿದಕ್ಕೆ ಹಲ್ಲೆ ನಡೆದಿದೆ. ಮಗಳಿಗೆ 13ವರ್ಷ, ವಯಸ್ಸು ಚಿಕ್ಕದು ಮದುವೆ ಬೇಡ. ಒಳ್ಳೆಯ ಶಿಕ್ಷಣ ಕೊಡಿಸೋಣ ಮದುವೆ ಬೇಡ. ಬಾಲ್ಯ ವಿವಾಹ ಸಮಸ್ಯೆ ಆಗುತ್ತೆ ಎಂದು ಪತಿಗೆ ಬುದ್ದಿವಾದ ಹೇಳಿದಕ್ಕೆ ಕೋಪಗೊಂಡ ಪತಿ, ಮದುವೆ ಬೇಡಾ ಅಂತಿಯಾ? ಎಂದು ಹೆಂಡತಿ ಕೈ ಕಾಲು ಮುರಿದಿದ್ದಾನೆ.

ತನ್ನ ಅಣ್ಣನ ಹೆಂಡತಿ ಮನೆಯ ಹುಡಗನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸಲು ಬೀರಪ್ಪನ ಮುಂದಾಗಿದ್ದ. 40 ಎಕರೆ ಜಮೀನು ಇದೆ, ನಿಮ್ಮ ಮಗಳು ಚೆನ್ನಾಗಿರುತ್ತಾಳೆ ಎಂದು ಬೀರಪ್ಪನ ಅತ್ತಿಗೆ ಮನೆಯವರು ಬೀರಪ್ಪನಿಗೆ ತಲೆ ಕೆಡಿಸಿದ್ದರು. ಹುಡುಗ ಸ್ವಲ್ಪ ಹುಚ್ಚನ ತರ ಇದ್ದಾನೆ, ಅವನಿಗೆ ಕೊಟ್ಟರೆ ಆಸ್ತಿ ಸಿಗುತ್ತೆ ಅಂತಾ ಬೀರಪ್ಪ ಲೆಕ್ಕಾಚಾರ ಹಾಕಿದ್ದ. ಹೀಗಾಗಿ ಮದುವೆ ಮಾಡಲು ಮುಂದಾಗಿದ್ದ. ಆದರೆ ಇದಕ್ಕೆ ಮಾಯವ್ವಾ ನಿರಾಕರಿಸಿದ್ದಾರೆ. ಪತಿಯ ನಿರ್ಧಾರಕ್ಕೆ ವಿರೋಧಿಸಿದ್ದಕ್ಕೆ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೈ ಕಾಲು ಮುರಿದಿದ್ದಾನೆ. ಮಾಯವ್ವಾ ಅವರನ್ನು ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದಕ್ಕೆಲ್ಲಾ ಸೂತ್ರಧಾರಿ ಬೀರಪ್ಪನ ಅಣ್ಣ ಹಾಗೂ ಅವನ ಹೆಂಡತಿ ಮನೆಯವರು ಎಂದು ಮಾಯವ್ವಾ ಆರೋಪ ಮಾಡಿದ್ದಾರೆ. ಪ್ರಕರಣ ದಾಖಲಾದ್ರೂ ಪೋಲಿಸರು ಅವರನ್ನ ಬಂಧಿಸಿಲ್ಲ ಎಂದು ಮಹಿಳೆ ಆಕ್ರೋಶ ಹೊರ ಹಾಕಿದ್ದಾರೆ. ಮುರಗೋಡ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES
- Advertisment -
Google search engine

Most Popular