ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಅಬಕಾರಿ ಇಲಾಖೆಯಿಂದ ವಿವಿಧ ಮೊಕದ್ದಮೆಗಳಲ್ಲಿ ವಶಪಡಿಸಿಕೊಂಡ ಮದ್ಯದ ದಾಸ್ತಾನಿನ ಪೈಕಿ, ಒಟ್ಟಾರೆ ೧೭ ಮೊಕದ್ದಮೆಗಳಿಂದ ವಶಪಡಿಸಿಕೊಂಡಿದ್ದ ಸುಮಾರು ೧೫೬.೬೯ ಲೀ ಮದ್ಯವನ್ನು ಅಬಕಾರಿ ಉಪ ಅಧೀಕ್ಷಕರು ಹುಣಸೂರು ಉಪ ವಿಭಾಗ ಕೆ.ಟಿ.ವಿಜಯಕುಮಾರ್ ಅವರ ನೇತೃತ್ವದಲ್ಲಿ ನಾಶ ಪಡಿಸಲಾಯಿತು.
ಪಟ್ಟಣದ ಅಬಕಾರಿ ಇಲಾಖೆ ಕಛೇರಿಯಲ್ಲಿ ವಿವಿಧ ಮೊಕದ್ದಮೆಗಳಲ್ಲಿ ವಶ ಪಡಿಸಿಕೊಂಡಿದ್ದ ಮಧ್ಯವನ್ನು ಸುಮಾರು ತಿಂಗಳಿನಿoದ ಶೇಖರಿಸಲ್ಪಟ ೧೫೬.೬೯ಲೀ ಮಧ್ಯವನ್ನು ನಾಶ ಪಡಿಸಿ ಮಾತನಾಡಿದ ಅವರು ಮುಂದಿನ ದಿನಗಳಲ್ಲಿ ವಿವಿಧ ಗ್ರಾಮಗಳಲ್ಲಿ ಅಕ್ರಮವಾಗಿ ಮಧ್ಯ ಸಂಗ್ರಹಿಸಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ನಾಶಪಡಿಸಲು ಮಾನ್ಯ ಅಬಕಾರಿ ಉಪ ಆಯುಕ್ತರು ಮೈಸೂರು ಗ್ರಾಮಾಂತರ ಜಿಲ್ಲೆ ಮೈಸೂರು ರವರ ಆದೇಶದ ಮೇರೆಗೆ ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಕೆ.ಆರ್.ನಗರ ರವರ ಸಮ್ಮುಖದಲ್ಲಿ ಶ್ರೀಮತಿ ಮೋಹನಕುಮಾರಿ.ಸಿ ಅಬಕಾರಿ ನಿರೀಕ್ಷಕರು ಕೆ.ಆರ್.ನಗರ ವಲಯ ನೇತೃತ್ವ ವಹಿಸಿದರು.
ಈ ಸಂದರ್ಭದಲ್ಲಿ ಉಪ ನಿರೀಕ್ಷಕ ಶ್ರೀನಿವಾಸ್, ಹೆಡ್ ಕಾನ್ಸ್ಟೇಬಲ್‌ಗಳಾದ ಸಂತೋಷ್, ಮಲ್ಲೇಶ್, ಕಂದಾಯ ನಿರೀಕ್ಷಕ ಸಿದ್ದರಾಜು, ಜಗದೀಶ್, ಸಿಬ್ಬಂದಿ ಸಂದೀಪ್ ಸೇರಿದಂತೆ ಇನ್ನಿತರರು ಹಾಜರಿದ್ದರು.