Friday, April 11, 2025
Google search engine

Homeರಾಜ್ಯಸುದ್ದಿಜಾಲಅಮರ ಶಿಲ್ಪಿ ಜಕಣಾಚಾರಿಯವರು ಶಿಲ್ಪ ಕಲೆಗಳ ಮೂಲಕ ಇಂದಿಗೂ ಜೀವಂತ : ಶಿವಾನಂದ ಮೂರ್ತಿ

ಅಮರ ಶಿಲ್ಪಿ ಜಕಣಾಚಾರಿಯವರು ಶಿಲ್ಪ ಕಲೆಗಳ ಮೂಲಕ ಇಂದಿಗೂ ಜೀವಂತ : ಶಿವಾನಂದ ಮೂರ್ತಿ

ರಾಮನಗರ: ಅಮರ ಶಿಲ್ಪಿ ಜಕಣಾಚಾರಿಅವರ ಕಲೆ ಮತ್ತು ಸಂಸ್ಕೃತಿಗೆತಮ್ಮದೆಯಾದ ವಿಶೇಷ ಕೊಡುಗೆಗಳನ್ನು ನಾವು ನೆನೆದುಕೊಳ್ಳಬೇಕು.ಅವರು ತಿಳಿಸಿರುವ ಕಲೆಯನ್ನುಜನರು ನಂಬಿಕೆ ಮತ್ತು ಶ್ರದ್ದೆಯಿಂದ ವೃತ್ತಿಯಲ್ಲಿ ಬೆಳೆಸಿದಾಗ ದೇಶ ಮತ್ತುರಾಜ್ಯಕ್ಕೆತಮ್ಮದೆಯಾದಕೊಡುಗೆ ನೀಡಬಹುದುಎಂದುಅಪರಜಿಲ್ಲಾಧಿಕಾರಿ ಶಿವಾನಂದ ಮೂರ್ತಿಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ದೀಪ ಬೆಳಗಿಸಿ ಅಮರ ಶಿಲ್ಪಿ ಜಕಣಾಚಾರಿಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಾಡಿನಐತಿಹಾಸಿಕ ವಾಸ್ತುಶಿಲ್ಪ, ಪರಂಪರೆಗೆ ಶಿಲ್ಪಗಳಿಗೆ ಅಮರಶಿಲ್ಪಿ ಕಣಾಚಾರಿಅವರಕೊಡುಗೆಅಪಾರವಾದುದುಎಂದು ತಿಳಿಸಿದರು.

ಚನ್ನಪಟ್ಟಣ ತಾಲ್ಲೂಕು ತಹಶೀಲ್ದಾರ್ ಮಹೇಂದ್ರ ಎ.ಎಚ್‌ ಅವರುಮಾತನಾಡಿ, ಅಮರಶಿಲ್ಪಿ ಜಕಣಾಚಾರಿ ಅವರ ಕೆತ್ತನೆಗಳನ್ನು ದಕ್ಷಿಣ ಭಾರತದ ಹಲವು ದೇವಾಲಯಗಳಲ್ಲಿ ನಾವು ಕಾಣಬಹುದು.ವಿಶ್ವಕರ್ಮರು ಸಮಾಜದಲ್ಲಿಕಬ್ಬಿಣ, ಚಿನ್ನ ಮತ್ತು ಬೆಳ್ಳಿ, ಶಿಲ್ಪಕಲೆ, ಮರಗೆಲಸ ಹೀಗೆ ಐದುರೀತಿಯಲ್ಲಿ ಕುಲಕಸುಬುಗಳನ್ನು ನಿರ್ವಹಿಸುತ್ತಿದ್ದಾರೆ.ಈ ಕಲೆಗಳನ್ನು ಮುಂದಿನ ತಲೆಮಾರುಗಳಿಗೂ ಕೂಡ ಕಲಿಸಿ ಬೆಳಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿಕನ್ನಡ ಮತ್ತು ಸಂಸ್ಕೃತಿಇಲಾಖೆಯ ನಿರ್ದೇಶಕರಾದರಮೇಶ್ ಬಾಬು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ವಿಶ್ವಕರ್ಮ ಸಮುದಾಯದರಾಜ್ಯಾಧ್ಯಕ್ಷರಾದ ಬಿ.ಉಮೇಶ್, ತಗಡಚಾರಿ, ಶ್ರೀನಿವಾಸ ಮೂರ್ತಿ ಸೇರಿದಂತೆಸಮುದಾಯದ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular