Friday, April 18, 2025
Google search engine

Homeಸ್ಥಳೀಯದೇಶದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ: ಡಾ. ಮಂಜುನಾಥ್

ದೇಶದಲ್ಲಿ ಹೃದ್ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ: ಡಾ. ಮಂಜುನಾಥ್

ಮೈಸೂರು: ದೇಶದಲ್ಲಿ ಹೃದಯ ವೈಪಲ್ಯತೆಯಿಂದ ಹೃದಯರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದುಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಹಾಗು ಬೆಂಗಳೂರು ಗ್ರಾಮಾಂತರ ಲೋಕಸಭಾ ಸದಸ್ಯ ಪದ್ಮಶ್ರೀ ಸಿ.ಎನ್. ಮಂಜುನಾಥ್ ತಿಳಿಸಿದರು.


ಜೆ.ಕೆ.ಗ್ರೌಂಡ್‌ನಲ್ಲಿರುವ ಮೆಡಿಕಲ್‌ಕಾಲೇಜಿನಅಮೃತ ಮಹೋತ್ಸವದ ಭವನದಲ್ಲಿ ೧೦೦ನೇ ವರ್ಷದ ಅಂಗವಾಗಿ ಮೈಸೂರು ಮೆಡಿಕಲ್‌ಕಾಲೇಜು ಹಳೆಯ ವಿದ್ಯಾರ್ಥಿ ಸಂಘದಿಂದ ಆಯೋಜಿಸಿದ್ದ ಉಪನ್ಯಾಸಕಾರ್ಯಕ್ರಮದಲ್ಲಿ ಹೃದಯ ವೈಪಲ್ಯತೆಗೆ ಕಾರಣಗಳು ಮತ್ತುಆಧುನಿಕಚಿಕಿತ್ಸಾ ಕ್ರಮಗಳ ಬಗ್ಗೆ ಮಾತನಾಡಿದಅವರು ಹೃದಯದ ಶಕ್ತಿ ಶೇ೬೦ರಿಂದ ೬೫%ರಷ್ಟಿರುತ್ತದೆ.ದೇಶದಜನಸಂಖ್ಯೆಯಲ್ಲಿ ಶೇ೧% ಜನರಿಗೆ ಹೃದಯ ವೈಪಲ್ಯತೆಇರುತ್ತದೆ, ಇದಕ್ಕೆ ಸೂಕ್ತ ಸಮಯದಲ್ಲಿಚಿಕಿತ್ಸೆಕೊಡದಿದ್ದರೆ ಹೃದಯಘಾತ ವಾಗುತ್ತದೆ.

ಹೃದಯರೋಗಿಗಳು ಸಕ್ಕರೆ ಕಾಯಿಲೆ, ರಕ್ತದಒತ್ತಡ, ನಿಯಂತ್ರಣದಲ್ಲಿಟ್ಟುಕೊಳ್ಳಬೇಕು,ರಕ್ತಹೀನತೆ,ಕಿಡ್ನಿ ಸಮಸ್ಯೆ, ಇದ್ದರೂ ಸಹ ಹೃದಯ ಸಮಸ್ಯೆ ಹೆಚ್ಚಾಗುತ್ತದೆ. ನಡೆಯುವಾಗ ಸುಸ್ತು, ಮಲಗಿದ್ದಾಗಉಬ್ಬಸ, ಕಾಲು ಊತಕಂಡುಬಂದರೆ ಇ.ಸಿ.ಜಿ, ಎಕೋ. ಟಿ.ಎಂ.ಟಿ,ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು, ನೋವಿನ ಮಾತ್ರೆ ನಿರಂತರವಾಗಿತೆಗೆದುಕೊಂಡರೆಕಿಡ್ನಿ ಮತ್ತು ಹೃದಯಕ್ಕೆ ಹಾನಿಯಾಗುತ್ತದೆ. ಹೃದಯ ವೈಪಲ್ಯತೆಯಾದಾಗ ಫೇಸ್ ಮೇಕರ್, ಐ.ಸಿ.ಡಿ ಮಿಷನ್ ಹಾಕುತ್ತಾರೆ. ಆದುದರಿಂದ ಹೃದಯರೋಗಿಗಳು ವರ್ಷಕ್ಕೊಮ್ಮೆತಪಾಸಣೆ ಮಾಡಿಸಿಕೊಂಡು ನಿಯಮಿತಆಹಾg, ಸರಿಯಾದ ಸಮಯಕ್ಕೆ ಮಾತ್ರೆ, ವ್ಯಾಯಾಮ, ಮಾಡಬೇಕುಎಂದರು.


ಸಮಾರಂಭದಲ್ಲಿರಾಜಮಾತೆ ಪ್ರಮೋದಾದೇವಿ ಒಡೆಯರ್, ಡಾ.ಎಂ.ಎ.ಶೇಖರ್, ಡಾ.ಕಾಂತಜಾದವ್, ಡಾ.ಸಿ.ಡಿ.ಶ್ರೀನಿವಾಸ ಮೂರ್ತಿ, ಡಾ.ದಾಕ್ಷಾಯಣಿ, ಸಂಘದಅಧ್ಯಕ್ಷಡಾ.ಹೆಚ್.ಎನ್.ದಿನೇಶ್, ಉಪಾಧ್ಯಕ್ಷಡಾ. ಮಾಲೇಗೌಡ, ಕಾರ್ಯದರ್ಶಿ ಶಶಿಧರ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular