ಚನ್ನಪಟಣ: ಮೇಕೆದಾಟು ಯೋಜನೆ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಸರ್ಕಾರ ಕೂಡಲೇ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲಿ ಎಂದು ಸಾರ್ವಜನಿಕ ಒಕ್ಕಲಿಗರ ವಿದ್ಯಾ ಸಂಸ್ಥೆಯ ಖಜಾಂಚಿ ಎಸ್.ಟಿ ನಾರಾಯಣಗೌಡರು ಅಭಿಪ್ರಾಯಿಸಿದರು.
ಕಾವೇರಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡರ ನೇತೃತ್ವದಲ್ಲಿ ನಿರಂತರವಾಗಿ ಹೋರಾಟ ಮಾಡುತ್ತಿದ್ದು ಮಂಗಳವಾರ ನಡೆದ ೬೨ ನೇ ದಿನದ ಹೋರಾಟದಲ್ಲಿ ವಿದ್ಯಾಂಸ್ಥೆಯಿಂದ ಬೆಂಬಲ ಸೂಚಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಇಂದು ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ, ಈ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು, ಜೊತೆಗೆ ಮೇಕೆದಾಟು ಯೋಜನೆ ಮಾಡುತ್ತೇವೆ ಎಂದು ಹೋರಾಟ ಮಾಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳು ಕೂಡಲೇ ಯೋಜನೆಯ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದೆ ನೀರಿನ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದರು.
ದಸಸಂ ಸಂಚಾಲಕ ವೆಂಕಟೇಶ್ (ಸೇಟು) ಮಾತನಾಡಿ, ತಮಿಳುನಾಡಿನಲ್ಲಿ ಜೋರು ಮಳೆ ಬರುತ್ತಿದೆ. ನಮಗೆ ಕುಡಿಯುವ ನೀರಿಗೂ ಅಭಾವ ಇದ್ದರೂ ಇಂತಹ ಸಂದರ್ಭದಲ್ಲಿ ಮತ್ತೆ ತಮಿಳುನಾಡಿಗೆ ನೀರು ಬಿಡುವುದು ಖಂಡನೀಯವಾಗಿದೆ. ಈ ನಿಟ್ಟಿನಲ್ಲಿ ಪ್ರಾಧಿಕಾರದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಮೇಕೆದಾಟು ಯೋಜನೆಯನ್ನು ಅನುಷ್ಠಾನಕ್ಕೆ ತರುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಮಾತನಾಡಿ, ತಮಿಳುನಾಡಿನಲ್ಲಿ ಚಂಡಮಾರುತದಿಂದ ಜನಜೀವನ ಅಸ್ತವ್ಯಸ್ತವಾಗಿದ್ದರೂ ತಮಿಳುನಾಡು ನೀರು ಬೇಕು ಎಂದು ಹೇಳುವುದು ರಾಜಕೀಯ ಉದ್ದೇಶದಿಂದ ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ನೀರಾವರಿ ತಜ್ಞರು ತಮಿಳುನಾಡಿನ ನೀರಿನ ಬಗ್ಗೆ ಮಾಹಿತಿ ಪಡೆದು ದಾಖಲೆಗಳನ್ನು ಮುಂದಿಟ್ಟು ತಮಿಳುನಾಡಿಗೆ ಹರಿಸುತ್ರಿರುವ ನೀರನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ತಮಿಳುನಾಡಿನಲ್ಲಿ ಭಾರೀ ಮಳೆಯಿಂದ ಹಲವು ಪ್ರದೇಶಗಳು ಜಲಾವೃತವಾಗಿದ್ದು ಅಲ್ಲಿನ ಶಾಲಾಕಾಲೇಜುಗಳಿಗೆ ವಾರಗಟ್ಟಲೆ ರಜೆ ನೀಡಿದ್ದಾರೆ, ಈ ಮಾಹಿತಿಯನ್ನು ಪ್ರಾಧಿಕಾರ ಗಮನಕ್ಕೆ ತಂದು ತಮಿಳುನಾಢಿಗೆ ಅವಶ್ಯವಿಲ್ಲದಿದ್ದರೂ ಹರಿಯುತ್ತಿರುವ ಕಾವೇರಿ ನದಿ ನೀರನ್ನು ಕೂಡಲೇ ನಿಲ್ಲಿಸಲು ಕ್ರ,ಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂದರ್ಭದಲ್ಲಿ ವೇದಿಕೆಯ ಮಹಿಳಾ ರಾಜ್ಯಾಧ್ಯಕ್ಷರಾ ಮಂಗಳಮ್ಮ, ಸಂಘಟನಾ ಕಾರ್ಯದರ್ಶಿ ಕೃಷ್ಣೇಗೌಡ, ರಾಜ್ಯ ಉಪಾಧ್ಯಕ್ಷರ ಬೆಂಕಿ ಶ್ರೀಧರ್, ಸಾಂಸ್ಕೃತುಕ ಘಟಜಕದ ಅಧ್ಯಕ್ಷ ರ್‍ಯಾಂಬೋ ಸೂರಿತಾಲ್ಲೂಕು ಗೌರವಾಧ್ಯಕ್ಷ ಚಿಕ್ಕಣ್ಣಪ್ಪ, ಟೊಯೋಟೋ ವೆಂಕಟರಮಣ, ಪುನೀತ್, ರಾಮಕೃಷ್ಣಪ್ಪ, ನಾಗಣ್ಣ, ಮಂಜು, ಯೇಸು, ಕೃಷ್ಣಪ್ರಸಾದ್ ಸೇರಿದಂತೆ ಇನ್ನೂ ಅನೇಕರು ಉಪಸ್ಥರಿದರು.