ಮೈಸೂರು: ಕೇರಳದ ಕುಂಭದ್ರೋಣ ಮಳೆ ಪರಿಣಾಮ ಬಂಡೀಪುರ ಅರಣ್ಯ ಪ್ರದೇಶಕ್ಕೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಪರಿಣಾಮ ಕೇರಳದ ವಯನಾಡು – ಗುಂಡ್ಲುಪೇಟೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ರಸ್ತೆ ಯಾವುದೇ ಕ್ಷಣದಲ್ಲಿ ಬಂದ್ ಆಗುವ ಸಾಧ್ಯತೆ ಇದೆ.
ಬಂಡೀಪುರ ಅರಣ್ಯ ವ್ಯಾಪ್ತಿಯ ಮುತ್ತಂಗ ಬಳಿ ಹೆದ್ದಾರಿ ಮೇಲೆ ಭಾರೀ ಪ್ರಮಾಣದ ನೀರು ಹರಿಯುತ್ತಿದ್ದು, ಮತ್ತಷ್ಟು ಮಳೆ ಬಂದರೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗುವ ಸಾಧ್ಯತೆ ಇದೆ.