Monday, April 21, 2025
Google search engine

Homeರಾಜ್ಯಸುದ್ದಿಜಾಲಕಾವೇರಿ ಜಲಾಶಯದ ಕೀಲಿ ಪ್ರಾಧಿಕಾರದ ಕೈಯಲ್ಲಿದೆ: ರಮೇಶ್‌ಗೌಡ

ಕಾವೇರಿ ಜಲಾಶಯದ ಕೀಲಿ ಪ್ರಾಧಿಕಾರದ ಕೈಯಲ್ಲಿದೆ: ರಮೇಶ್‌ಗೌಡ

ಚನ್ನಪಟ್ಟಣ: ಕಾವೇರಿ ಜಲಾಶಯದ ನೀರು ಹಂಚಿಕೆ ವಿಚಾರದಲ್ಲಿ ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಜಲಾಶಯದ ಕೀಲಿ ಕೈ ಪ್ರಾಧಿಕಾರದ ಕೈಗೆ ಸೇರಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕಕಸಜ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡರು ಅಭಿಪ್ರಾಯಿಸಿದರು.

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಸೂತ್ರ ರಚಿಸುವ ಜೊತೆಗೆ ಮೇಕೆದಾಟು ಯೋಜನೆಗೆ ಅಡಿಗಲ್ಲು ಹಾಕುವಂತೆ ಆಗ್ರಹಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷರಾದ ರಮೇಶ್‌ಗೌಡರ ನೇತೃತ್ವದಲ್ಲಿ ೨೦೨೩ರ ಅಕ್ಟೋಬರ್ ೫ ರಿಂದ ನಿರಂತರವಾಗಿ ಹೋರಾಟ ಮಾಡುತ್ತಿದ್ದು ೧೭೭ ನೇ ದಿನದ ಹೋರಾಟದಲ್ಲಿ ಅವರು ಮಾತನಾಡಿ, ರಾಜ ಮಹಾರಾಜರ ಕಾಲದಿಂದಲೂ ತಮಿಳುನಾಡು ನಮ್ಮ ಜಲಾಶಯದ ನೀರಿನ ಮೇಲೆ ಪ್ರಾಬಲ್ಯ ಸಾಧಿಸುತ್ತಾ ಬಂದಿದೆ. ಅಂದು ರಾತ್ರೋರಾತ್ರಿ ಜಲಾಶದ ನೀರನ್ನು ಕಳ್ಳತನದಿಂದ ಹರಿಸಿಕೊಳ್ಳುತ್ತಿದ್ದರು ಬಳಿಕ ಎಲ್‌ಟಿಟಿ ಸಂಘಟನೆ ಮೂಲ ನೀರಿನ ಮೇಲೆ ಪ್ರಾಬಲ್ಯ ಸಾಧಿಸಿದರು. ಆದರೆ ಬಿಟೀಷ್ ಸರ್ಕಾರದಲ್ಲಿ ಕೆಆರ್‌ಎಸ್ ಜಲಾಶಯದ ನೀರು ಹಂಚಿಕೆ ಒಪ್ಪಂದ ಮಾಡಿಕೊಂಡ ವೇಳೆ ರಾಜ್ಯದಲ್ಲಿ ಸಮವೃದ್ದವಾಗಿ ಮಳೆ ಇದ್ದ ಕಾರಣ ಸಮಸ್ಯೆ ಇರಲಿಲ್ಲ. ಆದರೆ ಕ್ರಮೇಣ ಮಳೆಯ ಕೊರತೆ ಉಂಟಾದಂತೆಲ್ಲಾ ರಾಜ್ಯಕ್ಕೆ ನೀರಿನ ಸಮಸ್ಯೆ ಉಂಟಾಯಿತು. ಆದರೆ ಕೇಂದ್ರ ಸರ್ಕಾರದಲ್ಲಿ ಆಡಳಿತ ಮಾಡಿದ ಎಲ್ಲಾ ಸರ್ಕಾರಗಳು ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷದ ಸರ್ಕಾರಗಳ ಪ್ರಾಬಲ್ಯ ಕಡಿಮೆ ಮಾಡಲು ತಮಿಳುನಾಡಿನ ಪರವಾಗಿ ಹೆಚ್ಚು ಒಲವು ನೀಡುತ್ತಾ ಬಂದಿದ್ದಾರೆ ಎಂದರು.

ಕೇಂದ್ರ ಸರ್ಕಾರದ ಮುಂದೆ ತಮಿಳುನಾಡಿನ ಪ್ರಾದೇಶಕ ಪಕ್ಷ ಸರ್ಕಾರ ವಿರೋಧ ಪಕ್ಷವಾಗಿ ಪ್ರಶ್ನೆ ಮಾಡುತ್ತಿದೆ ಎಂದರೆ ಅದಕ್ಕೆ ತಮಿಳುನಾಡು ಸರ್ಕಾರದಲ್ಲಿನ ಜನಪ್ರತಿನಿಧಿಗಳಿಗೆ ಅವರ ಜನತೆಯ ಮೇಲಿನ ಕಾಳಜಿ ಮತ್ತು ಇಚ್ಚಾಶಕ್ತಿಯೇ ಕಾರಣವಾಗಿದೆ. ಆದರೆ ನಮ್ಮ ರಾಜ್ಯದ ಜನಪ್ರತಿನಿಧಿಗಳಿಗೆ ನಮ್ಮ ನೀರನ್ನು ಉಳಿಸಿಕೊಳ್ಳುವ ಇಚ್ಛಾಶಕ್ತಿಯೇ ಇಲ್ಲವಾಗಿದೆ. ನಮ್ಮ ರಾಜ್ಯದಲ್ಲಿ ಆಡಳಿತ ಮಾಡಿದ ಯಾವುದೇ ಪಕ್ಷದ ಸರ್ಕಾರಗಳು ಕೇಂದ್ರದ ಮುಂದೆ ಸಮರ್ಥವಾಗಿ ಪ್ರಶ್ನೆ ಮಾಡಲೇ ಇಲ್ಲ. ಬದಾಲಿ ಸುಪ್ರಿಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಆದೇಶಕ್ಕೆ ತಲೆ ಬಾಗುತ್ತಾ ಬಂದರು ಇದೀಗ ಅಂತಿಮವಾಗಿ ಕಾವೇರಿ ಜಲಾಶಯದ ಕೀಲಿ ಕೈ ಪ್ರಾಧಿಕಾರದ ಕೈ ಸೇರಿದ್ದು ಜಲಾಶಯದ ಪಕ್ಕದ ತಾಲೂಕಿಗೆ ೧ ಟಿಎಂಸಿ ನೀರು ಬಿಡಲು ಸಹ ನಮ್ಮ ಸರ್ಕಾರದ ಮುಖ್ಯಮಂತ್ರಿಗಾಗಲಿ ಸಚಿವರಿಗಾಗಲಿ ಅಧಿಕಾರ ಇಲ್ಲ. ಕಾವೇರಿ ಪ್ರಾಧಿಕಾರದಿಂದ ನೀರು ಬಿಡಲು, ನೀರು ನಿಲ್ಲಿಸಲು ಪ್ರಾಧಿಕಾರದ ೫ ಮಂದಿ ತೀರ್ಮಾನ ಮಾಡಬೇಕಿದೆ. ಇದು ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ನಮ್ಮ ನೀರನ್ನು ನಾವೇ ಬಳಕೆ ಮಾಡಲು ಆಗುತ್ತಿಲ್ಲೆ ಎಂದು ರಮೇಶ್‌ಗೌಡ ಬೇಸರ ವ್ಯಕ್ತಪಡಿಸಿದರು.


ಮುಂದಿನ ಪೀಳಿಗೆ ನೀರಿಗಾಗಿ ಪರದಾಡದಂತೆ ಮುಂಜಾಗ್ರತೆ ನಮ್ಮ ಈ ಹೋರಾಟದ ಉದ್ದೇಶವಾಗಿದೆ. ನಮ್ಮ ರಾಜ್ಯದ ಸಂಸದ ಸದಸ್ಯರು ಕಳೆದ ೧೦ ವರ್ಷಗಳಿಂದ ಕೇಂದ್ರದ ಮುಂದೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಾಗಲಿ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುವ ವಚಾರದಲ್ಲಾಗಲಿ ಒಂದು ಮನವಿಯನ್ನು ನೀಡಿಲ್ಲ. ಇಂತಹ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಮುಂದಿನ ಪೀಳಿಗೆ ಮೇಲೆ ಪರಿಣಾಮ ಬೀಡುತ್ತದೆ ಎಂದು ರಮೇಶ್‌ಗೌಡ ಅಭಿಪ್ರಾಯಿಸಿದರು. ನಿವೃತ್ತ ಪ್ರಾಂಶುಪಾಲರಾದ ನಿಂಗೇಗೌಡ(ಎನ್‌ಜಿ) ಮಾತನಾಡಿ, ಮೇಕೆದಾಟು ಯೋಜನೆ ತಮಿಳುನಾಡಿಗೆ ನೀರು ಬಿಡಬಾರದು ಎಂಬ ಉದ್ದೇಶದಿಂದ ನಿರ್ಮಾಣ ಮಾಡುತ್ತಿಲ್ಲ. ನಮಗೆ ಹೆಚ್ಚು ಮಳೆ ಬಂದಾಗ ತಮಿಳುನಾಡಿಗೆ ಹರಿಸುವ ನೀರಿನ ಜೊತೆಗೆ ಸಮುದ್ರದ ಪಾಲಾಗುವ ನೀರನ್ನು ಉಳಿಸಿಕೊಳ್ಳು ಕುಡಿಯುವ ನೀರಿಗೆ ಬಳಕೆ ಮಾಡಿಕೊಲ್ಳುವ ಉದ್ದೇಶದಿಂದ. ಇಂದು ಚುನಾವಣೆ ನಾಮಪತ್ರ ಸಲ್ಲಿಕೆ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ನೀರಾವರಿ ಮಂತ್ರಿ ಡಿಕೆ ಶಿವಕುಮಾರ್ ನಮಗೆ ಅನುಮತಿ ಕೊಟ್ಟರೆ ಜಲಾಶಯ ಕಟ್ಟಲು ಸಿದ್ದ ಎನ್ನುತ್ತಾರೆ. ಅತ್ತ ದೇವೇಗೌಡರು ಸಹ ಇದಕ್ಕೆ ಒಲವು ತೋರಿದ್ದಾರೆ. ಆದರೆ ಇವರಲ್ಲಿನ ರಾಜಕೀಯ ಪ್ರತಿಷ್ಠೆ ಬದಿಗಿಡದೆ ಈ ಯೋಜನೆ ಅನುಷ್ಠಾನಕ್ಕೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಮೇಕೆದಾಟು ಅಣೆಕಟ್ಟೆ ಕಟ್ಟಲು ಜನಪ್ರತಿನಿಧಿಗಳು ಮುಂದಾಗಲಿ ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ, ರಾಜ್ಯ ಉಪಾಧ್ಯಕ್ಷರುಗಳಾದ ಬೆಳಕು ಶ್ರೀಧರ್, ರಂಜಿತ್‌ಗೌಡ, ಜಯರಾಮು, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ರಾಜು, ಚಿಕ್ಕಣ್ಣಪ್ಪ, ಚಾಲಕ ಪುರಿ ಸಿದ್ದು, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ಸೇರಿದಂತೆ ಹಲವರು ಇದ್ದರು.

RELATED ARTICLES
- Advertisment -
Google search engine

Most Popular