ಗುಂಡ್ಲುಪೇಟೆ: ತಾಲ್ಲೂಕಿನ ಹಕ್ಕಲಪುರದಿಂದ ಹುಣಸಿನಪುರಕ್ಕೆ ತೆರಳುವ ಮಾರ್ಗದಲ್ಲಿರುವ ಹುಣಸಿನಪುರ ಪಟೇಲರಟ್ಟಿಗೆ ಸೇರಿದ ಜಮೀನೊಂದರಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬೆಳಿಗ್ಗೆ ಚಿರತೆ ಬಿದ್ದಿರುವ ಘಟನೆ ನಡೆದಿದೆ.
ಚಿರತೆ ಬೋನಿಗೆ ಬಿದ್ದ ವಿಚಾರ ತಿಳಿದು ಜನರು ಜಮೀನಿನ ಬಳಿ ಜಮಾಯಿಸಿದ್ದರು. ಚಿರತೆ ಸೆರೆಗೆ ಬೋನಿನಲ್ಲಿ ಸತ್ತ ಹಸುವನ್ನು ಇರಿಸಲಾಗಿತ್ತು. ಹಸು ತಿನ್ನಲು ಬಂದು ಚಿರತೆ ಬೋನಿಗೆ ಬಿದ್ದಿರುವ ಘಟನೆ ನಡೆದಿದೆ. ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಚಿರತೆ ಸೆರೆ ಹಿಡಿದು ಬಂಡೀಪುರ ಅರಣ್ಯ ವ್ಯಾಪ್ತಿಗೆ ಬಿಡಲಾಗಿದೆ ಎಂದು ತಿಳಿಸಿದರು.