Friday, April 4, 2025
Google search engine

Homeಅಪರಾಧದುಷ್ಕರ್ಮಿಗಳಿಂದ ಕಲ್ಯಾಣ ಮಂಟಪದ ಬೀಗ ಮುರಿದು ಕಳವು

ದುಷ್ಕರ್ಮಿಗಳಿಂದ ಕಲ್ಯಾಣ ಮಂಟಪದ ಬೀಗ ಮುರಿದು ಕಳವು

ಮದ್ದೂರು:ದುಷ್ಕರ್ಮಿಗಳು ಕಲ್ಯಾಣ ಮಂಟಪದ ಬೀಗ ಮುರಿದು ಲಕ್ಷಾಂತರ ರೂ ಮೌಲ್ಯದ ಪದಾರ್ಥಗಳನ್ನು ದೋಚಿ ಪರಾರಿಯಾಗಿರುವ ಘಟನೆ ತಾಲ್ಲೂಕಿನ ಸೋಮನಹಳ್ಳಿ ಗ್ರಾಮದ ಸರಸಮ್ಮ ಚನ್ನಪ್ಪ ಕಲ್ಯಾಣ ಮಂಟಪದಲ್ಲಿ ಜರುಗಿದೆ.
ಭಾನುವಾರ ರಾತ್ರಿ ಕಲ್ಯಾಣ ಮಂಟಪ ಪ್ರವೇಶಿದ ದುಷ್ಕರ್ಮಿಗಳು ಅಡಿಗೆ ಪರಿಕರಗಳು, ಕುರ್ಚಿ, ವಿದ್ಯುತ್ ಪರಿಕರಗಳು ಸೇರಿದಂತೆ ಇನ್ನಿತರೆ ಹಲವು ಬಗೆಯ ಪದಾರ್ಥಗಳನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದು ಸುಮಾರು ೪ ಲಕ್ಷಕ್ಕೂ ಅಧಿಕ ಮೌಲ್ಯದ ಪದಾರ್ಥಗಳನ್ನು ಕಳುವು ಮಾಡಿದ್ದಾರೆ.
ಕಲ್ಯಾಣ ಮಂಟಪದ ಬಾಗಿಲು ಮುರಿದ ದುಷ್ಕರ್ಮಿಗಳು ರಾತ್ರೋರಾತ್ರಿ ದುಷ್ಕೃತ್ಯ ವ್ಯೆಸಗಿದ್ದು ಭಾನುವಾರ ಯಾವುದೇ ಸಭೆಸಮಾರಂಭಗಳು ಜರುಗದ ಹಿನ್ನೆಲೆಯಲ್ಲಿ ವಂಚುಹಾಕಿದ್ದ ದುಷ್ಕರ್ಮಿಗಳು ಅಪಾರ ಪ್ರಮಾಣದ ವಸ್ತುಗಳನ್ನು ಬೇರೆಗೆ ಸಾಗಿಸಿದ್ದು, ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಸ್ಥಳೀಯ ಪೊಲೀಸರು ಕ್ರಮವಹಿಸಿದ್ದಾರೆ.

RELATED ARTICLES
- Advertisment -
Google search engine

Most Popular