Monday, April 21, 2025
Google search engine

Homeಅಪರಾಧಮಗಳಿಂದ ದೂರವಿರು ಎಂದಿದ್ದಕ್ಕೆ ಯುವತಿಯ ತಂದೆಯನ್ನೇ ಕೊಂದ ಪ್ರಿಯತಮ

ಮಗಳಿಂದ ದೂರವಿರು ಎಂದಿದ್ದಕ್ಕೆ ಯುವತಿಯ ತಂದೆಯನ್ನೇ ಕೊಂದ ಪ್ರಿಯತಮ

ಬಾಗಲಕೋಟೆ: ತಮ್ಮ ಪ್ರೀತಿಯನ್ನು ನಿರಾಕರಿಸಿ, ನನ್ನ ಮಗಳಿಂದ ದೂರ ಇರು ಎಂದಿದ್ದಕ್ಕೆ ಯುವಕ ತಾನು ಪ್ರೀತಿಸಿದ್ದ ಯುವತಿಯ​ ತಂದೆಯನ್ನೇ ಕೊಲೆ ಮಾಡಿದ್ದಾನೆ.

ಬಾಗಲಕೋಟೆ ತಾಲೂಕಿನ ಭಗವತಿ ಗ್ರಾಮದಲ್ಲಿ ಪ್ರವೀಣ್ ಕಾಂಬಳೆ ಎಂಬ ಯುವಕ ಮಚ್ಚಿನಿಂದ ಕೊಚ್ಚಿ ಸಂಗನಗೌಡ ಪಾಟೀಲ್(52) ಎಂಬುವವರ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಲಿತ ಯುವಕ ಪ್ರವೀಣ್ ಕಾಂಬಳೆ ಕೊಲೆಯಾದ ಸಂಗನಗೌಡ ಪಾಟೀಲ್ ಅವರ ಮಗಳನ್ನು ಪ್ರೀತಿಸಿದ್ದ. ಇಬ್ಬರ ನಡುವೆಯೂ ಪ್ರೀತಿ ಅರಳಿತ್ತು. ಆದರೆ ಅಂತರ್ಜಾತಿ ಹಿನ್ನೆಲೆ ಮಗಳಿಂದ ದೂರ ಇರಲು ಸಂಗನಗೌಡ ಪಾಟೀಲ್ ಎಚ್ಚರಿಕೆ ನೀಡಿದ್ದರು. ಅಲ್ಲದೆ ಕೆಲ‌ ದಿನಗಳ ಹಿಂದೆ ಮಗಳಿಂದ ದೂರ ಇರುವಂತೆ ಥಳಿಸಿದ್ದರು. ಇದೇ ಕೋಪದಲ್ಲಿದ್ದ ಪ್ರವೀಣ್ ಕಾಂಬಳೆ ಮಚ್ಚಿನಿಂದ ಹಲ್ಲೆ ನಡೆಸಿ ತನ್ನ ಪ್ರಿಯತಮೆಯ ತಂದೆಯ ಕೊಲೆ ಮಾಡಿದ್ದಾನೆ.

 ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular