Saturday, April 19, 2025
Google search engine

Homeಸಿನಿಮಾನಾವು ಮುಖ್ಯವಾಗಿ ನೋಡಬೇಕಿರುವುದು ನಾಳೆಯ ದರ್ಶನ್ : ನಟ ರಮೇಶ್ ಅರವಿಂದ್

ನಾವು ಮುಖ್ಯವಾಗಿ ನೋಡಬೇಕಿರುವುದು ನಾಳೆಯ ದರ್ಶನ್ : ನಟ ರಮೇಶ್ ಅರವಿಂದ್

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ ಪ್ರಕರಣದ ಬಗ್ಗೆ ಹಿರಿಯ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿದ್ದು, ನಾವು ಇಲ್ಲಿ ಮೂವರು ದರ್ಶನ್ ರನ್ನ ನೋಡುತ್ತೇವೆ. ನಾವು ಮುಖ್ಯವಾಗಿ ನೋಡಬೇಕಿರುವುದು ನಾಳೆಯ ದರ್ಶನ್ ಎಂದು ತಿಳಿಸಿದರು.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಲ್ಲಿ ಮೂವರು ದರ್ಶನ್ ಇದ್ದಾರೆ. ನಿನ್ನೆಯ ದರ್ಶನ್ ಇವತ್ತಿನ ದರ್ಶನ್ ಮತ್ತು ನಾಳೆಯ ದರ್ಶನ್. ನಾವು ನಿನ್ನೆ ದರ್ಶನ್ ಅವರನ್ನು ಸ್ಟಾರ್ ಆಗಿ ನೋಡಿದ್ವಿ. ಇಂದು, ಈ ಕೇಸ್ ನಲ್ಲಿ ಸಿಲುಕಿದ ದರ್ಶನ್ ನೋಡುತ್ತಿದ್ದೇವೆ. ಮುಖ್ಯವಾಗಿ ನೋಡಬೇಕಿರುವುದು ನಾಳೆಯ ದರ್ಶನ್ ಬಗ್ಗೆ ಎಂದು ಅವರು ತಿಳಿಸಿದರು.

ಇಷ್ಟು ದಿನ ದರ್ಶನ್ ಬಗ್ಗೆ ನಾನೆಲ್ಲೂ ಸಹ ಮಾತನಾಡಿರಲಿಲ್ಲ. ಇಲ್ಲಿ ಮೂವರು ದರ್ಶನ್ ಇದ್ದಾರೆ ಮುಖ್ಯವಾಗಿ ನೋಡ್ಬೇಕಿರೋದು ನಾಳೆ ದರ್ಶನ್. ನಮಗೆ ದರ್ಶನ್ ಅಂದ ತಕ್ಷಣ ನನಗೆ ಸೂಪರ್ ಸ್ಟಾರ್ ದರ್ಶನ್, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ದರ್ಶನ್ ನೆನಪಾಗುತ್ತಾರೆ. ನಾವು ಬದಲಾದ ದರ್ಶನ ನೋಡಬೇಕು.ಹಳೆ ಸೂಪರ್ ಸ್ಟಾರ್ ದರ್ಶನ್ ನೋಡಬೇಕು ಎಂದು ಬೆಂಗಳೂರಿನಲ್ಲಿ ನಟ ರಮೇಶ ಅರವಿಂದ ಹೇಳಿಕೆ ನೀಡಿದರು.

RELATED ARTICLES
- Advertisment -
Google search engine

Most Popular