ಬೆಂಗಳೂರು: ಇಂದಿನಿಂದ ರಾಜ್ಯದ ಮಳೆಗಾಲದ ವಿಧಾಮಂಡಲ ಅಧಿವೇಶನ ಆರಂಭವಾಗಲಿದೆ.
ಎರಡು ವಾರಗಳ ಕಾಲ ಆಗಸ್ಟ್ 22ವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ತೀವ್ರ ವಿರೋಧ ತೋರುವ ತಯಾರಿಯಲ್ಲಿ ಇವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ‘ಮತಗಳ್ಳತನ’ ಆರೋಪದ ಬಗ್ಗೆ ಗಂಭೀರ ಚರ್ಚೆಯ ಸಾಧ್ಯತೆ ಇದೆ. ಜೊತೆಗೆ ಆರ್‌ಸಿಬಿ ಸಂಭ್ರಮಾಚರಣೆ ವೇಳೇ 11 ಮಂದಿ ಸಾವಿನ ವಿಷಯ, ಪೊಲೀಸ್ ಅಧಿಕಾರಿಗಳ ಅಮಾನತು ಹಾಗೂ ಸರ್ಕಾರದ ವಿವಾದಾತ್ಮಕ ನಿರ್ಧಾರಗಳ ಬಗ್ಗೆ ಬಿಜೆಪಿ ಸಮರಕ್ಕೆ ಸಜ್ಜಾಗಿದೆ.
ಮೊದಲ ದಿನವೇ ಚರ್ಚೆಕ್ಕೆ ಅವಕಾಶ ಕೋರಿ ನಿಲುವಳಿ ನೋಟಿಸ್ ನೀಡಲಾಗಿದೆ. ಅಧಿವೇಶನದಲ್ಲಿ 27 ವಿಧೇಯಕ ಮಂಡನೆಗೆ ಸರ್ಕಾರ ಯೋಜನೆ ರೂಪಿಸಿದೆ.