Friday, April 11, 2025
Google search engine

Homeಸಿನಿಮಾಜೂನ್ 23ರಂದು ಮಲಯಾಳಂ, ಕನ್ನಡದಲ್ಲಿ‘ಧೂಮಂ’ ಸಿನಿಮಾ ರಿಲೀಸ್

ಜೂನ್ 23ರಂದು ಮಲಯಾಳಂ, ಕನ್ನಡದಲ್ಲಿ‘ಧೂಮಂ’ ಸಿನಿಮಾ ರಿಲೀಸ್

ವಿಜಯ್ ಕಿರಗಂದೂರು ಒಡೆತನದ ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯ ಜನಪ್ರಿಯತೆ ಹೆಚ್ಚಿದೆ. ‘ಕೆಜಿಎಫ್ 2’ ಬಳಿಕ ಹಲವು ಭಾಷೆಗಳಲ್ಲಿ ಈ ನಿರ್ಮಾಣ ಸಂಸ್ಥೆ ಸಿನಿಮಾ ಘೋಷಿಸುತ್ತಿದೆ. ಈಗ ಹೊಂಬಾಳೆ ಫಿಲ್ಮ್ಸ್​ ನಿರ್ಮಾಣದ ‘ಧೂಮಂ’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಈ ಸಿನಿಮಾದ ಮೂಲ ಭಾಷೆ ಮಲಯಾಳಂ. ಈ ಚಿತ್ರ ಕನ್ನಡದಲ್ಲೂ ರಿಲೀಸ್ ಆಗುತ್ತಿದೆ. ಆದರೆ, ಈ ಬಗ್ಗೆ ಒಂದಷ್ಟು ಗೊಂದಲ ಇತ್ತು. ಅದಕ್ಕೆಲ್ಲ ತೆರೆ ಬಿದ್ದಿದೆ. ಹೊಂಬಾಳೆ ಫಿಲ್ಮ್ಸ್ ಮಾಡಿದ ಒಂದು ಟ್ವೀಟ್ ​ನಿಂದ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಿದೆ.

‘ಧೂಮಂ’ ಸಿನಿಮಾಗೆ ಪವನ್ ಕುಮಾರ್ ನಿರ್ದೇಶನ ಇದೆ. ಫಹಾದ್ ಫಾಸಿಲ್ ಅವರು ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ರಿಲೀಸ್ ಆದ ಟ್ರೇಲರ್ ಎಲ್ಲರ ಗಮನ ಸೆಳೆದಿದೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಟ್ರೇಲರ್ ಮೂಡಿ ಬಂದಿದೆ. ಈ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗೋದು ವಿಳಂಬ ಆಗಲಿದೆ ಎನ್ನಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಜೂನ್ 23ರಂದು ಮಲಯಾಳಂ ಹಾಗೂ ಕನ್ನಡದಲ್ಲಿ ಈ ಸಿನಿಮಾ ಒಟ್ಟೊಟ್ಟಿಗೆ ರಿಲೀಸ್ ಆಗುತ್ತಿದೆ.

‘ನಿಲ್ಲಲೇ ಬೇಕು ಎಲ್ಲ ದಿಮಾಕು. ಕಾಲಪುರುಷನ ಕಾಲಿನ ಕೆಳಗೆ. ಧೂಮಂ ಕನ್ನಡದಲ್ಲಿ ಜೂನ್ 23ರಂದು ರಾಜ್ಯದಾದ್ಯಂತ ಬಿಡುಗಡೆ’ ಎಂದು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಈ ಮೂಲಕ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯಲಾಗಿದೆ. ಇದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಸಿನಿಮಾ ಯಾವ ರೀತಿಯಲ್ಲಿ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇದೆ.

ಸಖತ್ ಸ್ಪೀಡ್​ ನಲ್ಲಿ ‘ಧೂಮಂ’ ಕೆಲಸ ಪೂರ್ಣಗೊಂಡಿದೆ. ಅಕ್ಟೋಬರ್ 9ರಂದು ‘ಧೂಮಂ’ ಚಿತ್ರಕ್ಕೆ ಮುಹೂರ್ತ ಮಾಡಲಾಗಿತ್ತು. ‘ಧೂಮಂ’ ಚಿತ್ರದ ಮೊದಲ ಸನ್ನಿವೇಶಕ್ಕೆ ಮಂಜುನಾಥ್ ಕಿರಗಂದೂರು ಆರಂಭ ಫಲಕ ತೋರಿಸಿದ್ದರು. ಶೈಲಜಾ ವಿಜಯ್ ಕಿರಗಂದೂರು ಕ್ಯಾಮೆರಾ ಚಾಲನೆ ನೀಡಿದ್ದರು. ಮೂರೇ ತಿಂಗಳಲ್ಲಿ ‘ಧೂಮಂ’ ಸಿನಿಮಾದ ಕೆಲಸ ಪೂರ್ಣಗೊಂಡಿತ್ತು. ಈಗ ಸಿನಿಮಾ ರಿಲೀಸ್​ಗೆ ರೆಡಿ ಇದೆ.

RELATED ARTICLES
- Advertisment -
Google search engine

Most Popular