ಮೈಸೂರು: ಕನ್ನಡದ ಬಹುನಿರೀಕ್ಷಿತ ಮೊಟ್ಟ ಮೊದಲ ಪ್ಯಾರಲಲ್ ಲೈಫ್ ಸಿನಿಮಾ ” ಹೆಜ್ಜಾರು ” ತನ್ನ ಟೀಸರ್ ಮೂಲಕವೇ ಇಂಡಸ್ಟ್ರಿಗೆ ಒಂದು ಒಳ್ಳೆಯ ಕಂಟೆಂಟ್ ಸಿನಿಮಾ ಬರುತ್ತಿರುವ ಸೂಚನೆ ಕೊಟ್ಟಿದ್ದು. ಈಗ ಹೆಜ್ಜಾರಿನ ಟ್ರೈಲರ್ ಬಿಡುಗಡೆಯಾಗಿ, ಲಕ್ಷಗಟ್ಟಲೆ ವೀಕ್ಷಣೆಯಾಗುವ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಿದೆ.
ಲವ್, ಎಮೋಷನ್ ಕಂಟೆಂಟ್ ಓರಿಯೆಂಟೆಡ್ ಸಿನೆಮಾ ಎನ್ನುವುದನ್ನು ಸಾಬಿತು ಪಡಿಸಿದೆ…! ಬ್ಲಿಂಕ್ ಶಾಖಾಹಾರಿ ಚಿತ್ರಗಳಂತೆ ಹೆಜ್ಜಾರು ಸಹ ತನ್ನ ವಿಶೇಷಗಳ ಮೂಲಕ ಕನ್ನಡಿಗರ ಮೆಚ್ಚುಗೆ ಪಡೆಯುವ ನಿರೀಕ್ಷೆ ಇದೆ.
ಇತ್ತೀಚಿಗೆ ಕಿಚ್ಚ ಸುದೀವರವರು ಹೆಜ್ಜಾರಿನ ಟೀಸರ್ ನೋಡಿ ಬಾರಿ ಮೆಚ್ಚುಗೆಯಿಂದ ಚಿತ್ರ ತಂಡಕ್ಕೆ ಸಪೋರ್ಟ್ ಮಾಡುತ್ತಿರುವ ವಿಡೀಯೊಸ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿರುವುದು. ತಂಡದ ಅತ್ಮಸ್ಥೆರ್ಯ ಹೆಚ್ಚಿಸಿದೆ.
ಪುಟ್ಟಗೌರಿ ಮದುವೆ,ಕಿನ್ನರಿ, ಜೊತೆ ಜೊತೆಯಲಿ,ಪುಟ್ಟಕ್ಕನ ಮಕ್ಕಳು, ಮಹಾನಾಯಕ ಅಂಬೇಡ್ಕರ್ ಹಾಗೂ ಹೆಬ್ಬುಲಿಯ “ದೇವರೆ ನೀನು ಇರೊ. ವಿಳಾಸವು ಬೇಕಾಗಿದೆ “ಹೀಗೆ ಎಂದೂ ಮರೆಯಲಾಗದಂತಹ ಹಾಡುಗಳ ಸಾಹಿತಿಯಾಗಿ, ಕಥೆಗಾರನಾಗಿ, ಸಂಭಾಷಣಕಾರನಾಗಿ ಹಾಗೂ ಜೀ ಕನ್ನಡದ ಫಿಕ್ಷನ್ ಹೆಡ್ ಆಗಿ ಹಲವಾರು ಹಿಟ್ ಧಾರಾವಾಹಿಗಳಿಗೆ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದ ” ಹರ್ಷಪ್ರಿಯ” ಅವರು “ಹೆಜ್ಜಾರು” ಮೂಲಕ ತಮ್ಮ ಡೈರೆಕ್ಷನಲ್ ಡೆಬ್ಯೂ ಮಾಡಿದ್ದಾರೆ.
ಕನ್ನಡದ ಎಲ್ಲಾ ವಾಹಿನಿಗಳಲ್ಲೂ 13 ಕ್ಕೂ ಅಧಿಕ ಜನಪ್ರಿಯ ಧಾರಾವಾಹಿಗಳನ್ನು ನೀಡಿರುವ, ಸೀರಿಯಲ್ ಲೋಕದ ಸ್ಟಾರ್ ರೈಟರ್& ಡೈರೆಕ್ಟರ್ ಆದ ಕೆ ಎಸ್ ರಾಮಜಿ ಅವರು ತಮ್ಮ ಗಗನ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ತಮ್ಮ ಚೊಚ್ಚಲ ಚಿತ್ರವಾಗಿ ಹೆಜ್ಜಾರುವಿನ ನಿರ್ಮಾಣ ಮಾಡುತ್ತಿದ್ದಾರೆ. ಸ್ವತಃ ಡೈರೆಕ್ಟರ್ ಆದಾಗ್ಯೂ ಮೊದಲ ಸಿನೆಮಾವನ್ನ ಮತ್ತೊಬ್ಬ ಹೊಸ ನಿರ್ದೇಶರಿಗೆ ಮಾಡುತ್ತಿರುವುದು, ಕಥೆ ಹಾಗೂ ನಿರ್ದೇಶಕರ ಮೇಲಿನ ನಂಬುಗೆಗೆ ಹಿಡಿದ ಕೈಗನ್ನಡಿಯಾಗಿ, ಕುತೂಹಲ ಮೂಡಿಸಿದೆ.
ನಾಯಕರಾಗಿ ಬೆಳ್ಳಿತೆರೆಗೆ ಪರಿಚಿತರಾಗುತ್ತಿರುವ “ಭಗತ್ ಅಳ್ವಾ” ಹಾಗೂ ತಮ್ಮ ಅಭಿನಯ ಮತ್ತು ತೂಕದ ಪಾತ್ರಗಳ ಮೂಲಕ ಹೆಚ್ಚು ಗಮನ ಸೆಳೆಯಿತ್ತಿರುವ” ಗೋಪಾಲಕೃಷ್ಣ ದೇಶಪಾಂಡೆ “ಯವರು ಚಿತ್ರದ ಕಥಾನಾಯಕರು. ನಾಯಕಿಯಾಗಿ ಶ್ವೇತ ಲೀಯೊನಿಲ್ಲಾ ಡಿಸೋಜಾ, ಹಾಗೂ ಮೊದಲ ಬಾರಿಗೆ ನವೀನ್ ಕೃಷ್ಣ ಅವರು ವಿಲನ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಅರುಣಾ ಬಾಲರಾಜ್,ಮುನಿರಾಜ್, ವಿನೋದ್ ಭಾರತಿ ಒಳಗೊಂಡಂತೆ ಬಹುತೇಕ ಕನ್ನಡದ ಪರಿಚಿತ ಕಲಾವಿದರು ಹೆಜ್ಜಾರಿನಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಎಲ್ಲರನ್ನೂ ರಂಜಿಸಲಿದ್ದಾರೆ.
ಲೂಸಿಯಾ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಅವರ ಸಂಗೀತದಲ್ಲಿ ವಿಜಯ್ ಪ್ರಕಾಶರ ಕಂಠಸಿರಿಯಲ್ಲಿ ಮೂಡಿಬಂದಿದ್ದ” ಏನೇ ಸಿಕ್ಕು ಮಳ್ಳಿ ನಿಂಗೆ” ಎಂಬ ಪ್ಯಾತೋ ಸಾಂಗ್ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು.
‘ಇವನ್ಯಾರೋ “ಎಂಬ ರೋಮ್ಯಾಂಟಿಕ್ ಲವ್ ಸಾಂಗ್, ಹಾಗೂ ರೆಟ್ರೋ ಟೈಮ್ ನ ನೆನಪಿಸುವ ಶರಣ್ ಅವರ ಸ್ವರದಲ್ಲಿ “ಶುಕ್ರವಾರ ಸಂಜೆ ಬರುವ ಚಿತ್ರಮಂಜರಿ ” ಹಾಡು ನೋಡುಗರಿನ 90ರ ದಶಕದ ದಿನಗಳನ್ನು ನೆನೆಯುವಂತೆ ಮಾಡಿತ್ತು…ಹರ್ಷಪ್ರಿಯ ಅವರ ಸಾಹಿತ್ಯದ ಸಾಲುಗಳು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಇನ್ ಸ್ಟಾ ರೀಲ್ಸ್ ಗಳಲ್ಲಿ ದೊಡ್ಡ ಮಟ್ಟದಲ್ಲಿಯೇ ವೈರಲ್ ಆಗಿ ಸದ್ದು ಮಾಡುತ್ತಿದೆ.
ಅಮರ್ ಗೌಡ ಕ್ಯಾಮರಾ ಕೈಚಳಕವಿರುವ “ಹೆಜ್ಜಾರು” ಬಹುತೇಕ ಮಳೆಯಲ್ಲಿಯೆ ಚಿತ್ರೀಕರಣವಾಗಿದ್ದು,ಜನರ . ಮನಸ್ಸಿನೊಳಗಿಳಿಯುವುದರಲ್ಲಿ ಎರಡು ಮಾತಿಲ್ಲ. ಮಂಗಳೂರು, ಉಪ್ಪಿನಂಗಡಿ, ಗುರುವಾಯನಕೆರೆ ಮುಂತಾದ ಕರಾವಳಿ ಪ್ರದೇಶಗಳಲ್ಲಿ ಹಾಗೂ ಮಲೆನಾಡಿನಲ್ಲಿ ಚಿತ್ರೀಕರಣವನ್ನು ಮಾಡಲಾಗಿದ್ದು, ಗಿರೀಶ್ ಕನಕಪುರ ಅವರು ಈ ಸಿನೆಮಾದ ಸಂಪೂರ್ಣ ನಿರ್ಮಾಣದ ಹೊಣೆ ಹೊತ್ತಿದ್ದು ಈ ಚಿತ್ರದ ಬೆನ್ನೆಲುಬಾಗಿದ್ದಾರೆ..
ಬಹು ನಿರೀಕ್ಷಿತ ಹೆಜ್ಜಾರು ಚಿತ್ರದ ನಿರ್ಮಾಣದ ಜೊತೆಗೆ “ರಾಮ್ ಜಿ ಫಿಲಂಸ್ ” ಸಂಸ್ಥೆಯಡಿಯಲ್ಲಿ ಡಿಸ್ಟ್ರಿಬ್ಯೂಷನ್ ಸಹ ಆರಂಭಿಸಿದ್ದು, ಹೆಜ್ಜಾರು ಚಿತ್ರವು ಇದೇ ಜುಲೈ 19 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ..