Friday, April 11, 2025
Google search engine

Homeಸಿನಿಮಾನ.14ಕ್ಕೆ ‘ಮಟ್ಕಾ’ ಸಿನಿಮಾ ತೆರೆಗೆ

ನ.14ಕ್ಕೆ ‘ಮಟ್ಕಾ’ ಸಿನಿಮಾ ತೆರೆಗೆ

ವರುಣ್‌ ತೇಜ್‌ ನಟನೆಯ 14ನೇ ಸಿನಿಮಾ ಮಟ್ಕಾ ಬಿಡುಗಡೆಗೆ ದಿನಾಂಕ ಘೋಷಣೆಯಾಗಿದ್ದು, ನವೆಂಬರ್‌ 14ರಂದು ಸಿನಿಮಾ ತೆರೆಗೆ ಬರುತ್ತಿದೆ. ಮಟ್ಕಾ ಜೂಟಾಟದ ಕಥೆಯಾಧಾರಿತ ಸಿನಿಮಾ. 1958ರಿಂದ 82ರ ಅವಧಿಯಲ್ಲಿ ವೈಜಾಗ್ನಲ್ಲಿ ನಡೆದ ಸತ್ಯ ಘಟನೆಯಾಧಾರಿತ ಚಿತ್ರವಾಗಿದೆ. ಬರೋಬ್ಬರಿ 24 ವರ್ಷದ ಹಿಂದಿನ ಕಥೆಯಾಧಾರಿತ ಸಿನಿಮಾವಾಗಿರುವ ಮಟ್ಕಾದಲ್ಲಿ ವರುಣ್‌ ತೇಜ್‌ ನಾಲ್ಕು ವಿಭಿನ್ನ ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಫ‌ಲಾಸ ಸಿನಿಮಾ ಖ್ಯಾತಿಯ ಕರುಣ ಕುಮಾರ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮಟ್ಕಾ ಸಿನಿಮಾದಲ್ಲಿ ನಾಯಕಿಯಾಗಿ ಮೀನಾಕ್ಷಿ ಚೌಧರಿ ಹಾಗೂ ನೋರಾ ಫ‌ತೇಹಿ ನಟಿಸುತ್ತಿದ್ದಾರೆ. ಇವರಲ್ಲದೇ ನವೀನ್‌ ಚಂದ್ರ, ಕನ್ನಡದ ಕಿಶೋರ್‌, ಅಜಯ್‌ ಘೋಷ್‌, ಮೈಮ್‌ ಗೋಪಿ, ರೂಪಲಕ್ಷ್ಮೀ, ವಿಜಯರಾಮ ರಾಜು, ಜಗದೀಶ್‌, ರಾಜ್‌ ತಿರಂದಾಸ್‌ ಸೇರಿದಂತೆ ಹಲವರು ಪ್ರಮುಖ ಪಾತ್ರದಲ್ಲಿದ್ದಾರೆ.

ಮಾಸ್‌ ಆ್ಯಕ್ಷನ್‌ ಮಟ್ಕಾ ಸಿನಿಮಾದ ಕೊನೆ ಹಂತದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶೂಟಿಂಗ್‌ ಕಂಪ್ಲೀಟ್‌ ಆಗುತ್ತಿದ್ದಂತೆ ಚಿತ್ರತಂಡ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿಸಿಕೊಳ್ಳಲಿದೆ. ಡಾ ವಿಜೇಂದರ್‌ ರೆಡ್ಡಿ ಟೀಗಾಲ ಮತ್ತು ರಜನಿ ತಲ್ಲೂರಿ ಮಟ್ಕಾ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಜಿ.ವಿ.ಪ್ರಕಾಶ್‌ ಕುಮಾರ್‌ ಸಂಗೀತ, ಎ ಕಿಶೋರ್‌ ಕುಮಾರ್‌ ಅವರ ಛಾಯಾಗ್ರಹಣ, ಕಾರ್ತಿಕಾ ಶ್ರೀನಿವಾಸ್‌ ಆರ್‌ ಸಂಕಲನ ಚಿತ್ರಕ್ಕಿದೆ.

RELATED ARTICLES
- Advertisment -
Google search engine

Most Popular