ಮೈಸೂರು : ರಾಜ್ಯದಲ್ಲಿ ಸಿಎಂ ಸ್ಥಾನ ಬದಲಾವಣೆ ಹಾಗೂ ಡಿಸಿಎಂ ವಿಷಯದ ಕುರಿತು ಚರ್ಚೆ ನಡೆಯುತ್ತಿರುವಾಗಲೇ ಈಗ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾದಿಂದ ಸೈಟು ಹಂಚಿಕೆ ಆಗಿರುವ ಕುರಿತು ಆರೋಪ ಕೇಳಿ ಬಂದಿದ್ದು ಈ ಕುರಿತಾಗಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸ್ಪೋಟಕ ಆರಂಭ ಮಾಡಿದ್ದು ಸಿಎಂ ಕುರ್ಚಿಗಾಗಿ ಮುಡಾ ಹಗರಣ ಹೊರಬಂದಿದೆ ಎಂದು ಆರೋಪಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿಗಾಗಿ ಅವರ ಪಕ್ಷದವರೇ ಮುಡಾ ಹಗರಣ ಹೊರಗೆ ತಂದಿದ್ದಾರೆ ಎಂದು ಮೈಸೂರಿನಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಸ್ಪೋಟಕವಾದಂತ ಆರೋಪ ಮಾಡಿದ್ದಾರೆ.
ಮುಖ್ಯಮಂತ್ರಿ ಆಗಬೇಕು ಅಂತ ಏನು ಪೈಪೋಟಿ ಇದೆಯಲ್ಲ. ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯ ಕುರ್ಚಿಗೆ ಆಸೆಪಟ್ಟು ಟವೆಲ್ ಹಾಕಿಕೊಂಡು ಕೂತವ್ರಲ್ಲ. ಅವರಿಂದ ಈ ಒಂದು ಹಗರಣ ಹೊರ ಬಂದಿದೆ.ಮುಖ್ಯಮಂತ್ರಿಗಳ ಪಾರದರ್ಶಕತೆ ಅವರ ಆಡಳಿತ ಹೇಗಿದೆ ಎನ್ನುವುದನ್ನು ಅವರ ಪಕ್ಷದಲ್ಲೇ ಇರುವಂತಹ ಮುಖ್ಯಮಂತ್ರಿ ಕುರ್ಚಿಗೆ ಆಸೆ ಪಟ್ಟವರು ಅವರನ್ನು ಇಳಿಸಲು ಮಾಡಲು ಚರ್ಚೆ ನಡಿತಾ ಇದೆ ಎಂದರು.
ಮುಡ ಹಗರಣ ಇಷ್ಟೆಲ್ಲಾ ಹೊರಗಡೆ ಬರಬೇಕಾದರೆ ಸಿಎಂ ಕುರ್ಚಿ ಗಾಗಿ ಪೈಪೋಟಿ ನಡೆಯುತ್ತಿದೆಯಲ್ಲ ಅವರಿಂದ ಈ ಹಗರಣ ಹೊರಗಡೆ ಬಂದಿದೆ. ಈ ರಾಜ್ಯದಲ್ಲಿ ಹಲವಾರು ಅಭಿವೃದ್ಧಿಗಳ ಹೆಸರಿನಲ್ಲಿ ರಸ್ತೆ ಯೋಜನೆ,ರೈಲು ಯೋಜನೆಗಳು ನೀರಾವರಿ ಯೋಜನೆಗಳಿಗೆ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಂಡರಲ್ಲ ನೂರಾರು ಜನ ರೈತರು ಭೂಮಿ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇವತ್ತು ನಿಮ್ಮ ಜಮೀನಿಗೆ ೬೨ ಕೋಟಿ ಕೇಳುತ್ತಿದ್ದೀರಲ್ಲ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಾಗ ಅವರಿಗೆ ಎಷ್ಟು ಹಣ ನೀಡಿದ್ದೀರಿ ಎಂದು ಪ್ರಶ್ನಿಸಿದರು.