Sunday, April 20, 2025
Google search engine

Homeಸ್ಥಳೀಯಮಾದಕ ವಸ್ತುಗಳ ಸೇವನೆಗೆ ಒಳಗಾಗುತ್ತಿರುವವರ ಸಂಖ್ಯೆ ಗಣನೀಯವಾಗಿದೆ : ಜಿಲ್ಲಾಧಿಕಾರಿ ಡಿಎಸ್ ರಮೇಶ್

ಮಾದಕ ವಸ್ತುಗಳ ಸೇವನೆಗೆ ಒಳಗಾಗುತ್ತಿರುವವರ ಸಂಖ್ಯೆ ಗಣನೀಯವಾಗಿದೆ : ಜಿಲ್ಲಾಧಿಕಾರಿ ಡಿಎಸ್ ರಮೇಶ್

ಚಾಮರಾಜನಗರ : ಇತ್ತೀಚಿನ ದಿನಗಳಲ್ಲಿ ಮಾದಕ ವಸ್ತುಗಳ ವ್ಯಸನಗಳಿಗೆ ಒಳಗಾಗುತ್ತಿರುವವರ ಸಂಖ್ಯೆ ಗಣನೀಯವಾಗಿ ಏರುತ್ತಿದೆ ಎಂದು ಜಿಲ್ಲಾಧಿಕಾರಿ ಡಿಎಸ್ ರಮೇಶ್ ಹೇಳಿದರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಚಾಮರಾಜನಗರದ ವತಿಯಿಂದ ನಡೆದ ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಜಾಥಕ್ಕೆ ಜಿಲ್ಲಾಧಿಕಾರಿ ಡಿಎಸ್ ರಮೇಶ್ ಚಾಲನೆ ನೀಡಿ ಮಾತನಾಡಿದರು. ಮಕ್ಕಳು ಹದಿ ಹರೆಯದವರು ಯುವಕರು ಮಾದಕ ವಸ್ತುಗಳ ವೆಸನಕ್ಕೆ ತುತ್ತಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎನ್‌ಸಿಬಿಐ ಯ 2019ರ ಸಮೀಕ್ಷೆ ಪ್ರಕಾರ ಸ್ತ್ರೀಯರಿಗಿಂತ ಪುರುಷರು ಹೆಚ್ಚು ಮಾದಕ ವಸ್ತುಗಳನ್ನು ಬಳಸುತ್ತಿರುವಂತಹ ದೃಶ್ಯ ಕಂಡು ಬಂದಿದೆ. ಜನರು ಸಾಮಾಜಿಕವಾಗಿ ತಮಗೆ ಒತ್ತಡ ಬಂದಾಗ ಅದಕ್ಕೆ ಪರಿಹಾರವಾಗಿ ಹಲವಾರು ದಾರಿಗಳನ್ನು ಹುಡುಕುತ್ತಾರೆ ಇನ್ನು ಕೆಲವರು ದೇವಸ್ಥಾನ, ಚರ್ಚ್, ಮಸೀದಿ ಹಾಗೆಯೇ ಶಾಂತಿಯನ್ನು ಬಯಸಿ ತೋಚಿದಂತ ದಿಕ್ಕಿನಲ್ಲಿ ನಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಇದನ್ನು ಅರಸಿ ಹೋಗುತ್ತಾ ಇರುವುದು ಬಹಳ ಕೆಟ್ಟದ್ದು.ಇತ್ತೀಚಿನ ದಿನಗಳಲ್ಲಿ ಮನಸ್ಸಿನ ಒತ್ತಡಗಳಿಂದ ಮಾದಕ ವಸ್ತುಗಳ ಸೇವನೆಯ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ.ಇದರ ತೊಂದರೆ ಬಂದಾಗ ಅದರ ನೋವು ಏನು ಅನ್ನುವುದು ತಿಳಿಯುತ್ತದೆ.ಮಾದಕ ವಸ್ತುಗಳ ಸೇವನೆಯಿಂದ ತೊಂದರೆ ಅನುಭವಿಸುವುದಕ್ಕಿಂತ ಅದರಿಂದ ದೂರವಿರುವುದು ಒಳ್ಳೆಯದ.ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳಸಾಗಾಣಿಕೆ ವಸ್ತುಗಳಿಂದ ಎಲ್ಲರೂ ದೂರವಿರಬೇಕು ಎಂದು ತಿಳಿಸಿದರು. ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಬಿಎಸ್ ಭಾರತಿ ಅವರು ಮಾತನಾಡಿ, ಜನರು ಮದ್ಯ ಮಾಡುವುದೊಂದೇ ದುಶ್ಚಟ ಅಲ್ಲ ಜೊತೆಗೆ ಕೆಲವರು ಮೊಬೈಲ್ ಫೋನ್ ಗಳಲ್ಲಿ ಬರುವ ಗೇಮ್ ವಿಡಿಯೋ ನೋಡುವುದನ್ನು ಮೊದಲು ನಿಲ್ಲಿಸಬೇಕು ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳು ಮೊಬೈಲ್ ಫೋನ್ಗಳ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ ಅದನ್ನು ಮೊದಲು ತಡೆಯಬೇಕು ಎಂದರು

ಅಂತರಾಷ್ಟ್ರೀಯ ಮಾದಕವಸ್ತು ಸೇವನೆ ಮತ್ತು ಕಳ್ಳ ಸಾಗಣಿಕೆ ವಿರೋಧಿ ದಿನದ ಬಗ್ಗೆ ಪ್ರತಿಜ್ಞಾವಿಧಿಯನ್ನ ಎಲ್ಲರೂ ಒಟ್ಟಾಗಿ ಬೋಧಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಕೆ.ಎಂ ವಿಶ್ವೇಶ್ವರಯ್ಯ, ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಡಾ.ಚಂದ್ರಶೇಖರ್, ಸರ್ವರ್ ಲೈನ್ ಅಧಿಕಾರಿ ಡಾ. ನಾಗರಾಜು,ತಾಲೂಕು ಆರೋಗ್ಯ ಅಧಿಕಾರಿ ಡಾ. ಶ್ರೀನಿವಾಸ್, ಮನೋರೋಗ ತಜ್ಞ ಡಾ.ವಾಸು,ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಖುದ್ರತುಲ್ಲಖಾನ್ , ವೈದ್ಯಾಧಿಕಾರಿ ಡಾ. ಉಮಾರಾಣಿ,ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ,ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ ನಾಗೇಂದ್ರ ಕುಮಾರ್, ಶ್ರೀ ವಾಸುದೇವ್, ಶ್ರೀ ಗೋವಿಂದ್, ಶಿವರಾಜ್, ವೇಣು, ಪ್ರೇಮ,ಅಶಕಾರ್ಯಕರ್ತೆಯರು,ಪೊಲೀಸರು ಸೇರಿದಂತೆ ಇತರರಿದ್ದರು

RELATED ARTICLES
- Advertisment -
Google search engine

Most Popular