ಮೈಸೂರು: ವಿಜ್ಞಾನ ವಿಷಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿ ಇಲ್ಲದ ಕಾರಣ ದೇಶದಲ್ಲಿ ವಿಜ್ಞಾನಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಅಭಿಪ್ರಾಯಪಟ್ಟರು.
ನಗರದ ಮಹಾರಾಣಿ ಮಹಿಳಾ ವಿeನ ಕಾಲೇಜು ವತಿಯಿಂದ ಆಯೋಜಿಸಿದ್ದ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನಾ, ರೆಡ್ ಕ್ರಾಸ್, ರೇಂಜರ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಇಸ್ರೋ, ಡಿಆರ್‌ಡಿಒ, ಸಿಎಫ್‌ಟಿಆರ್‌ಐ ಪ್ರತಿಷ್ಠಿತ ಸಂಶೋಧನಾ ಕೇಂದ್ರಗಳಿದ್ದರೂ ವಿಜ್ಞಾನಿಗಳು ಮಾತ್ರ ಅಗತ್ಯಕ್ಕೆ ಅನುಸಾರವಾಗಿ ಲಭಿಸುತ್ತಿಲ್ಲ. ಇಂತಹ ಕೊರತೆ ನೀಗಿಸುವ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಹೆಚ್ಚು ಗಮನ ಹರಿಸಬೇಕು. ಇಲ್ಲಿ ಸಿಗುವ ಅವಕಾಶ ಪಡೆದುಕೊಂಡು ಉನ್ನತ ವಿeನಿಗಳಾಗಬೇಕು. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಮೈಸೂರಿನ ಮಹಾರಾಣಿ ಮಹಿಳಾ ಕಾಲೇಜು ಅಗ್ರಸ್ಥಾನದಲ್ಲಿದೆ. ಯಾವುದೇ ಖಾಸಗಿ ಕಾಲೇಜಿಗೂ ಕಡಿಮೆ ಇಲ್ಲದಂತಹ ಪ್ರತಿಭಾವಂತ ಹೆಣ್ಣು ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾಮಾನ್ಯವಾಗಿ ವಿeನ ವಿಭಾಗದ ವಿದ್ಯಾರ್ಥಿಗಳು ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ತೀರಾ ಅಪರೂಪ. ಆದರೆ ನೀವು ಅದಕ್ಕೆ ಅಪವಾದ ಎಂಬಂತೆ ವಿದ್ಯಾಭ್ಯಾಸದ ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕಗಳಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಗಮನ ಸೆಳಯುತ್ತಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.
ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರ ಪೈಕಿ ಗ್ರಾಮೀಣ ಭಾಗದ ಹೆಣ್ಣು ಮಕ್ಕಳೆ ಹೆಚ್ಚು. ನಿಮ್ಮ ಮೇಲೆ ಅಪಾರ ಭರವಸೆ ಇಟ್ಟು ನಿಮ್ಮ ಪೋಷಕರು ಇಲ್ಲಿಗೆ ಕಳುಹಿಸಿದ್ದಾರೆ. ಅವರ ಶ್ರಮ ವ್ಯರ್ಥವಾಗದಂತೆ ನೀವುಗಳು ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆದು ಸ್ನಾತಕೋತ್ತರ ವ್ಯಾಸಂಗವನ್ನೂ ಪಡೆಯಬೇಕು. ಈ ವಯಸ್ಸು ಹೆಚ್ಚು ಚಂಚಲವಾಗಿರುವುದರಿಂದ ಅನಗತ್ಯ ವಿಚಾರಗಳ ಕಡೆ ಗಮನ ಹಾಕುವುದೇ ಹೆಚ್ಚು. ಆದ್ದರಿಂದ ಅದ್ಯಾವುದಕ್ಕೂ ಅನುವು ಮಾಡಿಕೊಡೆದೆ ನಿಮ್ಮ ಗುರಿ ಕಡೆಗೆ ಹೆಚ್ಚು ಶ್ರಮ ವಹಿಸಬೇಕು ಎಂದು ಕಿವಿಮಾತು ಹೇಳಿದರು.
ನಟಿ ಅದಿತಿ ಸಾಗರ್ ಮಾತನಾಡಿ, ಶಿಕ್ಷಣ ಎಂಬುದು ನಮ್ಮ ಮನಸ್ಸಿನ ಬಗ್ಗೆ ಅರಿವು ಮಾಡಿಕೊಳ್ಳುವಂತಹದ್ದು ನಮಗೆ ಗೊತ್ತಿಲ್ಲ. ಅನೇಕ ವಿಷಯಗಳನ್ನು ತಿಳಿಸಲು ಶಿಕ್ಷಕರು ಸಾಕಷ್ಟು ಶ್ರಮಿಸುತ್ತಾರೆ ಎಂದು ಹೇಳಿದರು.
ಇದೇ ವೇಳೆ ಕೊಲು ಕೋಲಣ್ಣ ಜಾನಪದ ಗೀತೆ ಹಾಡುವ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು.
ಸಮಾರಂಭಲ್ಲಿ ಪ್ರಾಂಶುಪಾಲ ಡಾ.ಡಿ.ರವಿ, ಸಾಂಸ್ಕೃತಿಕ ಸಂಚಾಲಕಿ ವನಿತಾ ಪಿ.ಆರ್, ದೈಹಿಕ ಶಿಕ್ಷಣ ನಿದೇರ್ಶಕಿ ಡಾ.ಡಿ.ರಮಣಿ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಡಾ.ಲಕ್ಷ್ಮಿ ಪಳೋಟಿ, ರೇಂಜರ್‍ಸ್ ಘಟಕದ ಸಂಚಾಲಕಿ ಮಂಜುಳಾ ಶೇಷಗಿರಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಜರಿದ್ದರು.