Monday, April 21, 2025
Google search engine

Homeರಾಜಕೀಯಆಪರೇಷನ್ ಹಸ್ತ ಆಗಲ್ಲ, ಕಮಲ ಆಗುತ್ತೆ ಕಾದುನೋಡಿ: ಮುರುಗೇಶ್ ನಿರಾಣಿ

ಆಪರೇಷನ್ ಹಸ್ತ ಆಗಲ್ಲ, ಕಮಲ ಆಗುತ್ತೆ ಕಾದುನೋಡಿ: ಮುರುಗೇಶ್ ನಿರಾಣಿ

ಬಾಗಲಕೋಟೆ: ಲೋಕಸಭಾ ಚುನಾವಣೆಗೂ ಮೊದಲೇ ಸಾಕಷ್ಟು ಬದಲಾವಣೆ ಆಗುತ್ತೆ. ಆಪರೇಷನ್ ಹಸ್ತ ಆಗಲ್ಲ, ಆಪರೇಷನ್ ಕಮಲ ಆಗುತ್ತೆ ಕಾದುನೋಡಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ಬಾಗಲಕೋಟೆ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸರ್ಕಾರ ಬಂದಮೇಲೆ ಯಾವುದೇ ಅಭಿವೃದ್ಧಿ ಕಾರ್ಯ ನಡೀತಿಲ್ಲ. ಬಿಟ್ಟಿ ಭಾಗ್ಯದಿಂದ ಈ ವರ್ಷ ೨೫,೦೦೦ ಕೋಟಿ ರೂ. ಖರ್ಚು ಮಾಡಲ್ಲ. ಇದರಿಂದ ಕಾಂಗ್ರೆಸ್ ಸರ್ಕಾರದ ಬಗ್ಗೆ ಜನರು ಬಹಳ ಬೇಸತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಶಾಲಾ ಮಕ್ಕಳು, ಕೆಲಸಕ್ಕೆ ಹೋಗುವವರಿಗೆ ಬಸ್‌ನಲ್ಲಿ ಸೀಟ್ ಸಿಗುತ್ತಿಲ್ಲ. ಮನೆ, ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ ೬೦% ಹೆಚ್ಚುವರಿ ಬಿಲ್ ಬರುತ್ತಿದೆ. ಕರ್ನಾಟಕದಲ್ಲಿ ಈಗ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ಒಬ್ಬರು ಐದು ವರ್ಷ ಸಿಎಂ ಇರಲಿ ಅಂತಾರೆ, ಇನ್ನಿಬ್ಬರು ಎರಡುವರೆ ವರ್ಷಕ್ಕೆ ಸಿಎಂ ಬದಲಾಗುತ್ತಾರೆ ಅಂತಾರೆ. ಇದನ್ನ ನೋಡಿದರೆ ಆದಷ್ಟು ಬೇಗ ಸರ್ಕಾರ ಬೀಳುತ್ತೆ ಎಂದು ವಾಗ್ದಾಳಿ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular