Sunday, October 5, 2025
Google search engine

Homeರಾಜ್ಯಸುದ್ದಿಜಾಲ"ಕನಸು ಕಟ್ಟಿದ ಮಕ್ಕಳನ್ನು ಕಳೆದುಕೊಳ್ಳುವ ನೋವು ಜೀವಿತಪೂರ್ತಿ ಮರೆಯಲು ಸಾಧ್ಯವಿಲ್ಲ": ಸಾ.ರಾ. ಮಹೇಶ್

“ಕನಸು ಕಟ್ಟಿದ ಮಕ್ಕಳನ್ನು ಕಳೆದುಕೊಳ್ಳುವ ನೋವು ಜೀವಿತಪೂರ್ತಿ ಮರೆಯಲು ಸಾಧ್ಯವಿಲ್ಲ”: ಸಾ.ರಾ. ಮಹೇಶ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ವಯಸ್ಸಿಗೆ ಬಂದು ನಮ್ಮ ಮುಂದೆ ಬದುಕಿ ಉತ್ತಮ ಜೀವನ ನಡೆಸಿ ಜನಮುಖಿಯಾಗಿ ಜೀವನ ನಡೆಸುವ ಕನಸು ಕಟ್ಟಿಕೊಂಡ ಮಕ್ಕಳನ್ನು ಕಳೆದುಕೊಂಡರೆ ಆ ನೋವನ್ನು ಜೀವನ ಪೂರ್ತಿ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.

ಸಾಲಿಗ್ರಾಮ ಪಟ್ಟಣದ ಎಸ್ ಎಲ್ ಎಲ್ ವಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ದಿ.ಡಾ.ಅಖಿಲೇಶ್ ಎಂ.ಗೌಡ ಅವರ 30 ನೇ ವರ್ಷದ ಜನ್ಮ ದಿನದ ಆಚರಣೆ ಮತ್ತು ಮೊದಲ ವರ್ಷದ ಸ್ಮರಣೆಯ ಅಂಗವಾಗಿ ನಡೆದ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಪಶು ವೈದ್ಯಕೀಯ ಪದವಿಗೆ ಉಚಿತ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಲಿಗ್ರಾಮ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪಶು ವೈಧ್ಯರಾಗಿದ್ದ ಅಖಿಲೇಶ್ ಎಂ.ಗೌಡ ಅವರು ಹೃದಯಾಘಾತದಿಂದ ಕಳೆದ ವರ್ಷ ನಿಧನರಾದ ಹಿನ್ನೆಲೆಯಲ್ಲಿ ಅವರ ಮೊದಲ ವರ್ಷದ ನೆನಪು ಮತ್ತು ಜನ್ಮ ದಿನಾಚರಣೆ ಮಾಡಿ ಮೂಲಕ ಸಮಾಜ ಮುಖಿ ಕೆಲಸ ಮಾಡುತ್ತಿದ್ದು ದಿವಂಗತರ ಆಶಯಗಳಿಗೆ ನೀರೆರೆಯುವ ಕೆಲಸ ಮಾಡಲಾಗುತ್ತಿದೆ ಎಂದರು.

ಸಾಲಿಗ್ರಾಮದ ಮಂಜುನಾಥ್ ಮತ್ತು ರೇಣುಕಾ ದಂಪತಿಗಳ ಪುತ್ರ ನ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಲು ಟ್ರಸ್ಟ್ ರಚಿಸುವ ಮೂಲಕ ನಿರಂತರವಾಗಿ ನೊಂದವರು ಮತ್ತು ಹಿಂದುಳಿದವರ ಪರವಾಗಿ ಕೆಲಸ ಮಾಡಲಾಗುತ್ತದೆ ಎಂದು ಆತನ ಚಿಕ್ಕಪ್ಪನವರು ಆದ ಮಾಜಿ ಸಚಿವರು ಪ್ರಕಟಿಸಿದರು.

ಸಾಲಿಗ್ರಾಮ ಪಟ್ಟಣದ ಎಸ್ ಎಲ್ ವಿ ಕಲ್ಯಾಣ ಮಂಟಪದಲ್ಲಿ ನಡೆದಡಾ.ಅಖಿಲೇಶ್ ಎಂ.ಗೌಡ ಅವರ 30 ನೇ ವರ್ಷದ ಜನ್ಮ ದಿನದ ಆಚರಣೆ ಮತ್ತು ಮೊದಲ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಪಶು ವೈದ್ಯಕೀಯ ಪದವಿಗೆ ಉಚಿತ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಲಿಗ್ರಾಮ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

ಇದರ ಜತೆಗೆ ಸಾಲಿಗ್ರಾಮದ ಯೋಗಾನತಸಿಂಹಸ್ವಾಮಿ ದೇವರಲ್ಲಿ ಅಪಾರವಾದ ನಂಬಿಕೆ ಮತ್ತು ಭಕ್ತಿ ಹೊಂದಿದ್ದ ಡಾ.ಅಖಿಲೇಶ್ ಎಂ.ಗೌಡ ಅವರ ನೆನಪಿಗಾಗಿ ಅಲ್ಲಿನ ಅರ್ಚಕರಿಗೆ ಸಹಾಯ ಧನ ಮತ್ತು ಸ್ವಚ್ಚತೆ ಕೆಲಸದವರಿಗೆ ವೇತನ ನೀಡಲು 5 ಲಕ್ಷ ಠೇವಣಿ ಇಡುವುದಾಗಿ ಮಾಜಿ ಸಚಿವರು ಘೋಷಿಸಿದರು‌.
ಈ ಸಂದರ್ಭದಲ್ಲಿ ಲಯನ್ಸ್ ಬ್ಲಡ್ ಸೆಂಟರ್ ಜೀವಧಾರ ಇವರ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಆದಿ ಚುಂಚನಗಿರಿ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಶ್ರೀಗಳು ಆಶೀರ್ವಚನ ನೀಡಿದರು‌. ವಿಧಾನ ಪರಿಷತ್ ಸದಸ್ಯ ಸಿ.ಎನ್‌.ಮಂಜೇಗೌಡ, ತಾಲೂಕು ಕಸಾಪ ಅಧ್ಯಕ್ಷ ಎಸ್ ಕೆ.ಮದುಚಂದ್ರ ಮಾತನಾಡಿದರು.

ಜಿ.ಪಂ.ಮಾಜಿ ಅಧ್ಯಕ್ಷರಾದ ಸಾ.ರಾ.ನಂದೀಶ್, ಸಿ.ಜೆ. ದ್ವಾರಕೀಶ್ ‌, ಅಖಿಲೇಶ್ ಎಂ.ಗೌಡ ಅವರ ತಂದೆ ಮಂಜುನಾಥ್, ಚಾಮರಾಜನಗರ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಮೆಡಿಕಲ್ ರಾಜಣ್ಣ, ರಾಜ್ಯ ಆರ್ ಟಿ ಓ ಗಳ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿಸೋಮು, ಮಾಜಿ ನಿರ್ದೇಶಕ ಬಂಡಹಳ್ಳಿಕುಚೇಲ, ಮುಖಂಡರಾದ ಗೋವಿಂದೇಗೌಡ, ವೆಂಕಟೇಶ್, ಎಸ್.ಪಿ.ಆನಂದ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular