ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಮಂಡ್ಯ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜ್ಯ ಧರ್ಮದೊಂದಿಗೆ ಜೊತೆ ಮಾತನಾಡಿದ ಮಾಜಿ ಸಚಿವ ಸಾರಾ ಮಹೇಶ್ ಸತ್ಯಕ್ಕೆ ಜಯ ಸುಳ್ಳಿಗೆ ಅಪಜಯ ಎಂಬುದನ್ನು ಮಂಡ್ಯ ಲೋಕಸಭಾ ಕ್ಷೇತ್ರದ ಮಹಾಜನತೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಅತ್ಯಂತ ಬಹುಮತದಿಂದ ಆಯ್ಕೆ ಮಾಡಿದ್ದಾರೆ ಎಂದರು.
ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೃಷಿ ಸಚಿವ ಚೆಲುವರಾಯಸ್ವಾಮಿ ಸೇರಿದಂತೆ ಏಳು ಶಾಸಕರು ಇಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿ ಬಾರಿ ಹಣವಂತನಾದ ವೆಂಕಟರಮಣೆಗೌಡ ಎಂಬ ಗುತ್ತಿಗೆದಾರರನ್ನು ಕರೆತಂದು ಹರಕೆಯ ಕುರಿ ಮಾಡುವುದರ ಜೊತೆಗೆ ಅಪಪ್ರಚಾರ ಸುಳ್ಳು ಕುತಂತ್ರ ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸೋಲಿಸಲೇಬೇಕು ಎಂಬ ತಂತ್ರಗಾರಿಕೆಗೆ ಎಂಟು ತಾಲೂಕಿನ ಮತದಾರರು ತಕ್ಕ ಉತ್ತರವನ್ನು ನೀಡಿದ್ದಾರೆ ಎಂದರು.
ಕೆ ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಎದುರು ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿಯ ಒಂದು ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಿಗೆ ಎಚ್ಚರಿಕೆಯ ನೀಡುವ ಉತ್ತರವನ್ನು ನೀಡಿದ್ದಾರೆ 27,400 ಮತಗಳ ಅಂತರದಿಂದ ಗೆದ್ದಿದ್ದ ಶಾಸಕರಿಗೆ ಒಂದು ವರ್ಷದಲ್ಲಿಯೇ 7500ಕ್ಕೂ ಹೆಚ್ಚು ಮತಗಳು ಜೆಡಿಎಸ್ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಬಿದ್ದಿರುವುದು ಆಡಳಿತ ವಿರೋಧದಿಂದ ಎಂಬುದು ಸಾಬೀತಾಗಿದೆ ಎಂದರು
ಜನ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಪರ ರಾಜ್ಯದ ಅಭಿವೃದ್ಧಿಗಾಗಿ ಜನಸೇವಕ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಎರಡು ಲಕ್ಷದ ಎಪ್ಪತ್ತು ಸಾವಿರದ ಮತಗಳಿಗೂ ಹೆಚ್ಚು ಅಂತರದಿಂದ ಗೆಲ್ಲಲು ಕಾರಣರಾದ ಮಂಡ್ಯ ಲೋಕಸಭಾ ವ್ಯಾಪ್ತಿಯ ಮತದಾರ ಪ್ರಭುಗಳಿಗೂ ಜೆಡಿಎಸ್ ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಮುಖಂಡರು ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕೆ ಆರ್ ನಗರ ವಿಧಾನಸಭಾ ಕ್ಷೇತ್ರ ಇತಿಹಾಸ ಬರೆದ ಮತದಾರರು.:- ಕೆ ಆರ್ ನಗರ ವಿಧಾನಸಭಾ ಕ್ಷೇತ್ರವು ಮಂಡ್ಯ ಲೋಕಸಭಾ ವ್ಯಾಪ್ತಿಗೆ ಸೇರಿದಾಗಲಿಂದ ಇಲ್ಲಿಯವರಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತ ನೀಡಿರಲಿಲ್ಲ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾರವರಿಗೂ ಜೆಡಿಎಸ್ ಅಭ್ಯರ್ಥಿಗಿಂತ ಸುಮಲತಾ ರವರಿಗೆ 2000 ಕ್ಕಿಂತ ಹೆಚ್ಚು ಮತಗಳನ್ನು ನೀಡಿದ್ದರು ಆದರೆ ಅದೆಲ್ಲವನ್ನು ಹಿಂದಿಕ್ಕಿ ಇಂದುಮಂಡಲೋಕಸಭಾ ಅಭ್ಯರ್ಥಿ ಎಚ್ ಡಿ ಕುಮಾರಸ್ವಾಮಿ ಅವರಿಗೆ 7,500 ಮತಗಳ ಅಂತರಕ್ಕಿಂತ ಹೆಚ್ಚು ಮತ ನೀಡುವ ಮೂಲಕ ಕೆ ಆರ್ ನಗರ ವಿಧಾನಸಭಾ ಕ್ಷೇತ್ರವು ಜೆಡಿಎಸ್ ಪಕ್ಷಕ್ಕೆ ಲೀಡ್ ನೀಡುವ ಮೂಲಕ ಇತಿಹಾಸ ಬರೆದಿದ್ದಾರೆ ಎಂದರು.