Friday, April 11, 2025
Google search engine

Homeರಾಜ್ಯಸುದ್ದಿಜಾಲಕೆ.ಎಲ್‌.ರಮೇಶ್‌ ರಚಿಸಿದ ‘ಚಿಂಟು ನಿನ್ನ ಮರೆಯಲಾರೆ’ ಕೃತಿ ಬಿಡುಗಡೆ

ಕೆ.ಎಲ್‌.ರಮೇಶ್‌ ರಚಿಸಿದ ‘ಚಿಂಟು ನಿನ್ನ ಮರೆಯಲಾರೆ’ ಕೃತಿ ಬಿಡುಗಡೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಮಾಜಿ ಸಚಿವ ಸಾ.ರಾ.ಮಹೇಶ್‌ ಅವರ ಮೈಸೂರು ದಟ್ಟಗಳ್ಳಿಯ
ತೋಟದ ಮನೆಯಲ್ಲಿದ್ದ ಕೋತಿ ಮರಿಯೊಂದರ ವಿಶೇಷ ವರ್ತನೆಗಳ ಕುರಿತು ಮಾಹಿತಿಯನ್ನು ಒಳಗೊಂಡಿರುವ ‘‘ಚಿಂಟು ನಿನ್ನ ಮರೆಯಲಾರೆ’’ ಎಂಬ ಕೃತಿಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.

ಕೆ.ಆರ್‌.ನಗರದ ರಾಜ್ಯಶಾಸ್ತ್ರ ಉಪನ್ಯಾಸಕ ಕೆ.ಎಲ್‌.ರಮೇಶ್‌ ಬರೆದಿರುವ ಕೃತಿಯನ್ನು ಮಾಜಿ ಸಚಿವ ಸಾ.ರಾ.ಮಹೇಶ್‌ ಬಿಡುಗಡೆ ಮಾಡಿದರು.

ಕೆಲ ವರ್ಷಗಳ ಹಿಂದೆ ಮೈಸೂರಿನ ದಟ್ಟಗಳ್ಳಿಯಲ್ಲಿರುವ ಸಾ.ರಾ.ಮಹೇಶ್‌ ಅವರ ತೋಟದ ಮನೆಗೆ ಕೋತಿ ಮರಿಯೊಂದು ಬಂದು ಸೇರಿಕೊಂಡಿತು. ಅದು ಮತ್ತೆ ಕಾಡಿಗೆ ತೆರಳದೆ ಅಲ್ಲಿಯೇ ವಾಸವಿದ್ದು, ಸಾ.ರಾ.ಮಹೇಶ್‌ ಅವರ ಕುಟುಂಬದೊಂದಿಗೆ ಆತ್ಮೀಯತೆಯಿಂದ ಇತ್ತು. ತೋಟದಲ್ಲಿನ ಎಲ್ಲವಸ್ತುಗಳ ಮೇಲೆ ಕಣ್ಣಿಡುವುದು ಮಾತ್ರವಲ್ಲದೆ, ಕುರಿ ಕಾಯುವುದು, ಹಸುಗಳನ್ನು ಕೊಟ್ಟಿಗೆಗೆ ಸೇರಿಸುವುದು ಸೇರಿದಂತೆ ತೋಟದ ಅನೇಕ ಕೆಲಸಗಳನ್ನು ಮಾಡುತ್ತಿತ್ತು. ತೋಟದ ಮನೆಯಿಂದ ಯಾವುದೇ ಪ್ರಾಣಿ ಹಾಗೂ ವಸ್ತುಗಳನ್ನು ಹೊರಗೆ ತೆಗೆದುಕೊಂಡು ಹೋಗಲು ಬಿಡುತ್ತಿರಲಿಲ್ಲ. ಒಂದು ರೀತಿಯಲ್ಲಿ ತೋಟದ ಮನೆಯ ಸದಸ್ಯನಾಗಿ ಜವಾಬ್ದಾರಿ ತೆಗೆದುಕೊಂಡಿತ್ತು. 2019ರಲ್ಲಿಕೋತಿ ಮರಿ ಮರವೊಂದರಿಂದ ಜಿಗಿಯುವಾಗ ವಿದ್ಯುತ್‌ ಸ್ಪರ್ಶವಾಗಿ ಬಲಿಯಾಗಿತ್ತು. ಸಿಂಗಾಪುರದಲ್ಲಿದ್ದ ಸಾ.ರಾ.ಮಹೇಶ್‌ ರಾತ್ರೋರಾತ್ರಿ ಅಲ್ಲಿಂದ ಆಗಮಿಸಿದ್ದರು.

ನಂತರ ಈ ಕೋತಿ ಮರಿ ಚಿಂಟುವಿಗೆ ಅಲ್ಲಿಯೇ ಗುಡಿಕಟ್ಟಲಾಯಿತು. ಕೋತಿ ಮರಿಗೆ ಪ್ರಿಯವಾಗಿದ್ದ ಹಾಗೂ ಸವಾರಿ ಮಾಡುತ್ತಿದ್ದ ಕುರಿ ಮರಿಯ ಮೇಲೆ ಕುಳಿತಿರುವ ವಿಗ್ರಹವನ್ನು ಖ್ಯಾತ ಶಿಲ್ಪಿ ಅರುಣ್‌ ಅವರು ಕೆತ್ತಿದ್ದಾರೆ. ಇದನ್ನು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರತಿ ವರ್ಷ ಮೊದಲನೇ ದಿನದಂದು ಗುಡಿಯ ಎದುರು ಸುದರ್ಶನ ಹೋಮ, ಗಣಪತಿ ಹೋಮ ನಡೆಸಲಾಗುತ್ತಿದೆ. ಅರ್ಚಕರಿಂದ ನಿತ್ಯ ಪೂಜೆಯಾಗುತ್ತಿದೆ. ಈ ಕೋತಿ ಮರಿವ ಚಿಂಟುವಿನ ವಿಶೇಷ ಗುಣಗಳನ್ನು ಒಳಗೊಂಡ ಕೃತಿಯನ್ನು ಉಪನ್ಯಾಸಕ ರಮೇಶ್‌ ರಚಿಸಿದ್ದಾರೆ.

ಈ ಸಂದರ್ಬದಲ್ಲಿ ವಸ್ತು ಪ್ರದರ್ಶನದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್‌ ಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಸಿ.ಜೆ.ದ್ವಾರಕೀಶ್, ಜೆಡಿಎಸ್‌ ನಗರ ಅಧ್ಯಕ್ಷ ಚೆಲುವೆಗೌಡ, ನಗರ ಪಾಲಿಕೆ ಸದಸ್ಯ ಎಸ್‌.ಬಿ.ಎಂ.ಮಂಜು, ಹೆಬ್ಬಾಳು ಎಚ್.ಪಿ. ಶಿವಣ್ಣ, ಲೇಖಕ ಕೆ.ಎಲ್‌.ರಮೇಶ್‌, ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular