Thursday, April 17, 2025
Google search engine

Homeರಾಜ್ಯಸುದ್ದಿಜಾಲಮಹಿಳೆಯರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಗ್ರಾಮಿಣ ಅಭಿವೃದ್ಧಿ ಸಂಸ್ಥೆಯ ಪಾತ್ರ ಅಪಾರ-ಶಾಸಕ ಡಿ.ರವಿಶಂಕರ್

ಮಹಿಳೆಯರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಗ್ರಾಮಿಣ ಅಭಿವೃದ್ಧಿ ಸಂಸ್ಥೆಯ ಪಾತ್ರ ಅಪಾರ-ಶಾಸಕ ಡಿ.ರವಿಶಂಕರ್

ಹೊಸೂರು : ಮಹಿಳೆಯರು ಸ್ವಾವಲಂಬಿ ಬದುಕು ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ ನೂತನ ಯೋಜನಾ ಕಚೇರಿ ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಈ ಯೋಜನೆ ಅಡಿಯಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು ಅವುಗಳನ್ನು ಮಹಿಳೆಯರು, ರೈತರು ಹಾಗೂ ಸಾರ್ವಜನಿಕರುಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಸಮಾಜಮುಖಿ ಕಾರ್ಯಗಳನ್ನು ಈ ಯೋಜನೆಯಡಿ ಇಡೀ ರಾಜ್ಯಾದ್ಯಂತ ಮಾಡುತ್ತಿದ್ದು ಸಮಾಜದ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಯೋಜನೆಯಲ್ಲಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರುಗಳು ಸಂಘಗಳಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಸ್ಥೆಯ ಏಳಿಗೆಗೆ ಮಹಿಳೆಯರು ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಮಾಡುವಂತಹ ಸಮಾಜಮುಖಿ ಕಾರ್ಯಗಳ ಯಶಸ್ವಿಗೆ ಕ್ಷೇತ್ರದ ಶಾಸಕನಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ ಸ್ವ ಸಹಾಯ ಸಂಘಗಳ ಸದಸ್ಯರುಗಳು ವ್ಯವಸ್ಥಿತವಾದ, ಶಿಸ್ತು ಬದ್ಧವಾದ ಜೀವನವನ್ನು ನಡೆಸಲು ಈ ಯೋಜನೆ ಪೂರಕವಾಗಿದೆ. ಯಾರೇ ಆಗಲಿ ತಾವುಗಳು ಅಭಿವೃದ್ಧಿ ಹೊಂದಬೇಕೆಂದರೆ ಅವರಲ್ಲಿ ಗುರಿಯು ಸ್ಪಷ್ಟವಾಗಿರಬೇಕು. ಆಗ ಮಾತ್ರ ಯಶಸ್ಸನ್ನು ಸಾಧಿಸಲು ಸಾಧ್ಯ ಎಂದರು.

ಸಂಘಗಳ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿರಬೇಕು, ಚಟುವಟಿಕೆಗಳಿಂದ ಕೂಡಿರಬೇಕು, ಜವಾಬ್ದಾರಿ ಮತ್ತು ಶಿಸ್ತಿನಿಂದ ಇರಬೇಕು ಆಗ ಸಂಘದ ಬೆಳವಣಿಗೆಯ ಜೊತೆಗೆ ಸಂಘದ ಸದಸ್ಯರುಗಳು ಬೆಳವಣಿಗೆಯ ಕಡೆಗೆ ಹೆಜ್ಜೆಯನ್ನು ಹಾಕಬಹುದು ಎಂದರು.

ಯೋಜನೆಯ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಈ ಯೋಜನೆಯಲ್ಲಿ ಬರುವ ಸವಲತ್ತುಗಳನ್ನು ಸಂಘಗಳ ಎಲ್ಲಾ ಸದಸ್ಯರುಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಏಳು ಜ್ಞಾನವಿಕಾಸ ಕೇಂದ್ರಗಳಿಗೆ ನಾಮಫಲಕ ಹಾಗೂ ದಾಖಲಾತಿಗಳನ್ನು ಹಸ್ತಾಂತರಿಸಲಾಯಿತು. ವಿವಿಧ ಶಾಲೆಗಳಿಗೆ ಪೀಠೋಪಕರಣಗಳಿಗಾಗಿ ಮಂಜೂರಾತಿ ಪತ್ರಗಳು, ಕೆಡಗ ಗ್ರಾಮದ ಹಾಲಿನ ಡೇರಿ ಕಟ್ಟಡ ನಿರ್ಮಾಣಕ್ಕೆ 2 ಲಕ್ಷ ರೂ ಸಹಾಯಧನದ ಮಂಜೂರಾತಿ ಪತ್ರವನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಜಿಲ್ಲಾ ನಿರ್ದೇಶಕ ಎಚ್.ಎಲ್.ಮುರುಳಿಧರ, ಸಾಲಿಗ್ರಾಮ ತಾಲೂಕು ಕ್ಷೇತ್ರ ಯೋಜನಾಧಿಕಾರಿ ಉಮೇಶ ಪೂಜಾರಿ, ಕೆ.ಆರ್.ನಗರ ತಾಲೂಕು ಯೋಜನಾಧಿಕಾರಿ ರಮೇಶ್, ಪೊಲೀಸ್ ಇನ್ಸ್ಪೆಕ್ಟರ್ ಬಿ.ಕೃಷ್ಣರಾಜು, ತಾಲೂಕು ಕಸಾಪ ಅಧ್ಯಕ್ಷ ಎಸ್.ಕೆ.ಮಧುಚಂದ್ರ, ಗ್ರಾ.ಪಂ. ಅಧ್ಯಕ್ಷೆ ಫಾತಿಮಾ, ಜೈನ ಸಮುದಾಯದ ಅಧ್ಯಕ್ಷ ಎಸ್.ಜೆ.ರಾಜೇಂದ್ರ ಪ್ರಸಾದ್, ಜೈನ್ ಮಿಲನ್ ಮಾಜಿ ಅಧ್ಯಕ್ಷೆ ಉಷಾ ಸುರೇಶ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಸದಸ್ಯರಾದ ಶೇಖರ್, ಸಂಪತ್ ಕುಮಾರ್, ಶಕುಂತಲಾ, ತಾ. ಪಂ. ಮಾಜಿ ಸದಸ್ಯ ಎ.ಟಿ.ಗೋವಿಂದೇಗೌಡ, ಗ್ರಾ.ಪಂ. ಮಾಜಿ ಅಧ್ಯಕ್ಷ ಸಿ.ಕೆ.ಬಾಲಮನೋಹರ, ಸಂಸ್ಥೆಯ ಸಿಎಸ್ ಸಿ ಹೊಸೂರುಪವಿತ್ರ ಮಧುಶಂಕರ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular