Saturday, April 19, 2025
Google search engine

Homeರಾಜ್ಯಸುದ್ದಿಜಾಲಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ-ಪ್ರೊ.ಸಿ.ಡಿ.ಪರುಶುರಾಮ್

ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ-ಪ್ರೊ.ಸಿ.ಡಿ.ಪರುಶುರಾಮ್

ವರದಿ : ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಪ್ರಸ್ತುತ ಸಮಾಜದಲ್ಲಿ ಆರೋಗ್ಯಕರ ಮತ್ತು‌ ಸುಸಂಸ್ಕೃತ ವಾತಾವರಣವನ್ನು ಸೃಷ್ಟಿಸುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರೇರಣಾಶಕ್ತಿಯಾಗಬೇಕೆಂದು ಮೈಸೂರು ವಿ.ವಿ.ಕಾಲೇಜಿನ ಪ್ರೊ.ಸಿ.ಡಿ.ಪರುಶುರಾಮ್ ಹೇಳಿದರು.

ಸಾಲಿಗ್ರಾಮ ತಾಲೂಕಿನ‌ ಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕೆಲನಿರ್ವಹಿಸಿ ವರ್ಗಾವಣೆಗೊಂಡ ಭಗಿರಥ ಅವರಿಗೆ ಚಿಮುಕು ಬಳಗದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾದುದು. ಸಮಾಜದಿಂದ ಏನನ್ನು ಬಯಸದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ವರ್ಗವಣೆ ಗೊಂಡಾಗ ಅವರನ್ನು ಸನ್ಮಾನಿಸಿದರೇ ಅವರ ವೃತ್ತಿಯಲ್ಲಿನ‌ ಗೌರವ ಹೆಚ್ಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ನಿವೃತ್ತ ಸಹಾಯಕ ಶಿಕ್ಷಣಾಧಿಕಾರಿ ಕುಪ್ಪೆ ಜವರೇಗೌಡ , ಮುಖಂಡ ಚಂದ್ರಶೇಖರಯ್ಯ, ಕುಪ್ಪೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಕೆ.ಎಸ್.ಸದಾಶಿವಾಕೀರ್ತಿ, ಶಿಕ್ಷಕ ಶ್ರೀರಾಮಪುರ ಶ್ರೀನಿಧಿ, ಕೆ.ಆರ್.ರಘು,ಬನ್ನೂರು ಪುಟ್ಟರಾಜು, ಕ್ಯಾತನಹಳ್ಳಿ ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular