Friday, April 4, 2025
Google search engine

Homeರಾಜ್ಯಸುದ್ದಿಜಾಲಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಅಪಾರ: ಮಾನಸ

ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಅಪಾರ: ಮಾನಸ

ಹುಣಸೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಅನಾವರಣವಾಗಬೇಕಾದರೆ ಶೈಕ್ಷಣಿಕ ದಿನಗಳಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು ಎಂದು ಹುಣಸೂರು ನಗರಸಭೆ ಪೌರಾಯುಕ್ತೆ ಮಾನಸ ಅಭಿಪ್ರಾಯ ಪಟ್ಟರು.

ತಾಲೂಕಿನ ಗಾವಡಗೆರೆ ಗುರುಲಿಂಗ ಜಂಗಮ‌ ಮಠದ ಆವರಣದಲ್ಲಿ ಶ್ರೀ ವಲಯ ಮಟ್ಟದ ನಂಜುಂಡ ಶಿವಯೋಗಿಶ್ವರ ಪ್ರೌಢ ಶಾಲೆಯ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವ ಮಗುವಿನಲ್ಲಿ ಯಾವ ಪ್ರತಿಭೆ ಇದೆ ಎಂದು ಗುರುತಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಕೂಡ ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದರು.

ವಿದ್ಯಾರ್ಥಿಗಳು ಪಾಠ ಪ್ರವಚನಗಳ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕಿದೆ. ನಂತರ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ಪರ್ಧಾತ್ಮಕ ಪರೀಕ್ಷೆಗೆ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಸಮಾಜದ ಉನ್ನತಸ್ಥಾನಕ್ಕೆ ಏರಲು ಸಾಧ್ಯವೆಂದರು.

ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಪಿ. ಹೇಮ ಮಾತನಾಡಿ, ಶ್ರೀ ಮಠವು ಸರಕಾರದ ಅನುದಾನವಿಲ್ಲದೆ ನೂರಾರು ಮಕ್ಕಳಿಗೆ ಅನ್ನ ,ಅಕ್ಷರದ ಜತೆಗೆ ವಸತಿ ಸೌಕರ್ಯ ನೀಡಿ, ಉತ್ತರ ಕರ್ನಾಟಕದ ಭಾಗದ ಗ್ರಾಮೀಣ ಮಕ್ಕಳಿಗೆ ಆದ್ಯತೆ ಕೊಡುತ್ತಿರುವ , ಶ್ರೀ ನಟರಾಜ ಸ್ವಾಮಿಗಳ ಕಾರ್ಯ ಶ್ಲಾಘನೀಯ ವೆಂದರು.

ಶ್ರೀ ಮಠದ ಪೀಠಾಧ್ಯಕ್ಷರಾದ. ಶ್ರೀ ನಟರಾಜ ಸ್ವಾಮಿ ಮಾತನಾಡಿ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮೂರು ತಿಂಗಳಿಗೆ ಕಲಿಕೆಯ ಕಾರ್ಯಗಾರದಲ್ಲಿ ತೊಡಗುವ ಮೂಲಕ ಬಾಲ್ಯದಲ್ಲೆ, ಉತ್ತಮ ಶಿಕ್ಷಣ ಪಡೆಯುವುತ್ತವೆ. ಅಂತಹ ಅನುಕರಣೀಯ ವಿದ್ಯಾಬ್ಯಾಸ ನಮ್ಮಲ್ಲೂ ಆಗಬೇಕಿದೆ ಆಗ ಮಾತ್ರ ನಮ್ಮ ಮಕ್ಕಳು ಕೂಡ ಮುಖ್ಯವಾಹಿನಿಗೆ ಬರಲಿವೆ ಎಂದರು.

ಸಂಸ್ಥೆಯ ವ್ಯವಸ್ಥಾಪಕಿ ಶಿಲ್ಪಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಓದುವ ಜ್ಞಾನದ ಜತೆಗೆ ಕ್ರೀಡೆಯಲ್ಲೂ ಭಾಗವಹಿಸುವ ಮೂಲಕ ಶಾಲೆಗೆ ಕೀರ್ತಿ ತರಬೇಕು ಎಂದರು.

ಹೆಚ್.ಆರ್. ಕೃಷ್ಣಕುಮಾರ್ ಮಾತನಾಡಿ, ನಾಡಿನಲ್ಲಿ ಹಲವಾರು ಶ್ರೀ ಮಠಗಳು ಅಕ್ಷರ, ಆರೋಗ್ಯ, ಮತ್ತು ಅನ್ನದಾನ ನೀಡುತ್ತಿರುವ ಹಾದಿಯಲ್ಲೆ, ತಾಲೂಕಿನ ಶ್ರೀ ಮಠವು ಎಲೆಮರೆ ಕಾಯಿಯಂತೆ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ . ಇದರ ಜತೆಗೆ ಸರಕಾರ ಕೂಡ ಮಠಕ್ಕೆ ಸಹಾಯ ಹಸ್ತ ಚಾಚಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಎಸ್.ಶೋಭ, ಮಠದ ವ್ಯವಸ್ಥಾಪಕ ಮಲ್ಲೇಶ್, ಪ್ರಾಂಶುಪಾಲ ರಾಮಶೆಟ್ಟಿ, ಶಾಲೆಯ ಎಲ್ಲಾ ಶಿಕ್ಷಕರು ಇದ್ದರು.

RELATED ARTICLES
- Advertisment -
Google search engine

Most Popular