Friday, April 18, 2025
Google search engine

Homeರಾಜ್ಯಸುದ್ದಿಜಾಲದೇಶದ ಸಮಗ್ರ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಅಪಾರ-ಡಾ.ಡಿ.ನಟರಾಜ್

ದೇಶದ ಸಮಗ್ರ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಅಪಾರ-ಡಾ.ಡಿ.ನಟರಾಜ್

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ದೇಶದ ಸಮಗ್ರ ಅಭಿವೃದ್ದಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು ಪ್ರತಿಯೊಬ್ಬ ಸಾಧಕ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ಧೇ ಇರುತ್ತಾಳೆ ಇಂತಹ ಮಹಿಳೆಯರನ್ನು ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಆರೋಗ್ಯ ಇಲಾಖೆಯ ಮಾಸಿಕಸಭೆ ಹಾಗೂ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಸಾಧನೆ ಎಂಬುದು ಯಾರ ಸ್ವತ್ತಲ್ಲ ಅಂತಹ ಸಾಧನೆಯನ್ನು ಇಂದು ವಿಶ್ವದಲ್ಲಿ ಮಹಿಳೆಯರು ಸಾಧಿಸಿದ್ದು ಮಹಿಳೆಯರು ಕೇವಲ ಮನೆಕೆಲಸಕ್ಕೆ ಮಾತ್ರ ಸೀಮಿತರಲ್ಲ ಎಂಬುದನ್ನು ಬಾಹ್ಯಾಕಾಶ, ವಿಮಾನಚಾಲನೆ, ರೈಲುಚಾಲನೆ, ಸೇನೆ ಸೇರಿದಂತೆ ಸಮಾಜದ ಉನ್ನತ ಸ್ಥಾನಗಳಲ್ಲಿ ಜವಾಬ್ದಾರಿ ಹೊರುವ ಮೂಲಕ ಸಾಧಿಸಿ ತೋರಿಸಿದ್ದಾರೆ ಎಂದರು.

ಇಲಾಖೆಯಲ್ಲಿಯೂ ಸಹ ಮಹಿಳಾ ಸಿಬ್ಬಂದಿಗಳ ಶ್ರಮದ ಕೆಲಸದಿಂದಲೆ ಇಂದು ಇಲಾಖೆಯಲ್ಲಿನ ಅರ್ಧಕ್ಕೂ ಹೆಚ್ಚು ಕೆಲಸ ಸರಾಗವಾಗಿ ಆಗುತ್ತಿದೆ ಎಂದ ಅವರು, ಮಹಿಳೆ ಅಬಲೆಯಲ್ಲ ಸಬಲೆಯಾಗಿದ್ದು ಪುರುಷನಿಗೆ ಸಮನಾಗಿ ಇಂದು ಹತ್ತು ಹಲವಾರು ಕ್ರಾಂತಿಕಾರಿ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದು ಅವರಿಗೆ ಮತ್ತಷ್ಟು ಶಕ್ತಿ ತುಂಬಿದಲ್ಲಿ ದೇಶದ ಸಮಗ್ರ ಅಭಿವೃದ್ದಿಗೆ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.

ತಾಲೂಕಿನಲ್ಲಿ ಆರೋಗ್ಯಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿವರ್ಗದವರು ಜನತೆಗೆ ಉತ್ತಮ ಸೇವೆ ನೀಡುವ ಜನತೆಗೆ, ಸಾರ್ವಜನಿಕರೊಂದಿಗೆ ಹೇಗೆ ಸೌಜನ್ಯದಿಂದ ವರ್ತಿಸಿ ಉತ್ತಮ ಕೆಲಸ ಮಾಡಿ ಇಲಾಖೆಗೆ ಹೆಸರು ತರಬೇಕೆಂಬ ಬಗ್ಗೆ ಮಾಹಿತಿ ನೀಡಿದರು.

ಪ್ರಸೂತಿ ತಜ್ಞೆ ಡಾ||ಭವಾನಿ, ಡಾ||ಸೌಜನ್ಯ ಮತ್ತಿತರರು ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಕುರಿತು ಹಾಗೂ ಆರೋಗ್ಯ ಇಲಾಖೆಯಲ್ಲಿನ ಮಹಿಳಾ ಸಿಬ್ಬಂದಿಗಳ ಕಾರ್ಯವೈಖರಿ ಕುರಿತು ಮಾತನಾಡಿದರು.
ಜಿಲ್ಲಾ ಕಾಯಕಲ್ಪ ಪ್ರಶಸ್ತಿ ಪಡೆದ ಭೇರ್ಯ ಪ್ರಾಥಮಿಕ ಆರೋಗ್ಯಕೇಂದ್ರದ ಡಾ||ಸೌಜನ್ಯ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ನಾಗವೇಣಿ, ಹೊಸೂರು ಪ್ರಾಥಮಿಕ ಆರೋಗ್ಯಕೇಂದ್ರದ ಪ್ರಯೋಗಶಾಲಾ ತಂತ್ರಜ್ಞಾಧಿಕಾರಿ ಭವ್ಯಶ್ರೀ, ಕಾಟ್ನಾಳು ಸಮುದಾಯ ಆರೋಗ್ಯಕೇಂದ್ರದ ಶಭನಮ್, ಲಕ್ಷಿö್ಮಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಆಶಾ ಕಾರ್ಯಕರ್ತೆ ಮಮತಾರನ್ನು ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ||ಉಮಾ, ಡಾ||ರೇವಣ್ಣ, ಡಾ||ರವಿಚಂದ್ರನ್, ಡಾ||ವೀರಕುಮಾರರೆಡ್ಡಿ, ಡಾ||ಸಿ.ನಟರಾಜ್, ಡಾ||ಸಚಿನ್, ಡಾ||ಕಲ್ಲೇಶ್, ಡಾ||ದೀವಿಕಾ, ಡಾ||ಮಧುಸೂಧನ್‌ರಾವ್, ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ತಾಲೂಕು ಹಿರಿಯ ಆರೋಗ್ಯನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಆನಂದ್, ನಾಗವೇಣಿ, ಮಹೇಶ್, ಪಾರ್ವತಿ, ಲತಾ, ಡಿಸೋಜಾ, ಲಕ್ಷಿö್ಮಬಾಯಿ, ಗಂಗಾಧರ್, ಶೇಖರ್, ಮಮತಾ, ಮನೋಜ್‌ಕುಮಾರ್, ರುಕ್ಮಿಣಿ, ಭವಾನಿ, ವಾಣಿ, ಕೆ.ಎಂ.ಯೋಗೇಶ್, ಶ್ರೀನಿವಾಸ್, ಚೇತನ್, ಸುಮಲತಾ, ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
ಇದೇ ಸಂಧರ್ಭದಲ್ಲಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಮತದಾರರ ಪ್ರತಿಜ್ಞಾವಿಧಿ ಭೋಧಿಸಲಾಯಿತು.

RELATED ARTICLES
- Advertisment -
Google search engine

Most Popular