Wednesday, April 9, 2025
Google search engine

Homeರಾಜ್ಯವ್ಯಾಪಕ ಗಾಳಿಗೆ ಕೃಷ್ಣಮಠದ ಬೃಂದಾವನ ಕಟ್ಟಡದ ಮೇಲ್ಛಾವಣಿಗೆ ಹಾನಿ

ವ್ಯಾಪಕ ಗಾಳಿಗೆ ಕೃಷ್ಣಮಠದ ಬೃಂದಾವನ ಕಟ್ಟಡದ ಮೇಲ್ಛಾವಣಿಗೆ ಹಾನಿ

ಉಡುಪಿ: ವ್ಯಾಪಕ ಗಾಳಿ ಮಳೆಯಿಂದಾಗಿ ಜಿಲ್ಲೆಯ ಹಲವೆಡೆ ಹಾನಿಯುಂಟಾಗಿದ್ದು, ಶ್ರೀ ಕೃಷ್ಣಮಠ ಅಶ್ವತ್ಥಕಟ್ಟೆಯ ಬೃಂದಾವನ ಕಟ್ಟಡದ ಮೇಲಿನ ಮೇಲ್ಚಾವಣಿ ಶೀಟುಗಳಿಗೆ ಹಾನಿ ಸಂಭವಿಸಿದೆ.

ಹಿರಿಯಡಕದಲ್ಲಿ ಸುಂಟರಗಾಳಿಗೆ ತೆಂಗಿನ ಮರಗಳು ಧರೆಗುರುಳಿದ್ದು, ಎರಡು ರಿಕ್ಷಾಗಳ ಮೇಲೆ ಮತ್ತು ಮನೆಗಳಿಗೆ ಹಾನಿ ಸಂಭವಿಸಿದೆ. ಗುರುವಾರ ತಡರಾತ್ರಿ ಗಾಳಿ ಅಬ್ಬರಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಹಾನಿ ಪ್ರಮಾಣ ಮುಂದುವರಿದಿದ್ದು, ಕುಂದಾಪುರ, ಬೈಂದೂರು ಭಾಗದಲ್ಲಿ ಗರಿಷ್ಠ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 70ಕ್ಕೂ ಅಧಿಕ ಮನೆಗಳಿಗೆ ಹಾನಿ ಸಂಭವಿಸಿದೆ.

RELATED ARTICLES
- Advertisment -
Google search engine

Most Popular