ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ನಾವು ನಮ್ಮ ನಾಡು,ನುಡಿ ಭಾಷೆಗೆ ಗೌರವಿಸುವಂತೆ ನಾವು ಕಲಿತ ಶಾಲೆ ನಮ್ಮ ಜನ್ಮಕೊಟ್ಟ ತಾಯಿಯಂತೆ ನೆನದು ಸಹಕರಿಸುವ ಗುಣ ಬೆಳೆಸಿಕೊಳ್ಳುವಂತೆ ಲಯನ್ಸ್ ಅನುದಾನಿತ ಶಾಲೆಯ ಮುಖ್ಯಶಿಕ್ಷಕ ಟಿ.ಪಿ.ನಂದೀಶ್‌ಕುಮಾರ್ ಹೇಳಿದರು.
ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಲಯನ್ಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಳೆಯ ವಿದ್ಯಾರ್ಥಿಗಳು ನಾವು ಕಲಿತ ಶಾಲೆಗೆ ನಮ್ಮ ಉಡುಗೊರೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಸುಮಾರು ೪೦ ಸಾವಿರ ರೂ.ಗಳ ಆಧುನಿಕ ತಂತ್ರಜ್ಞಾನವುಳ್ಳ ಧ್ವನಿವರ್ಧಕವನ್ನು ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿದ ಅವರು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಅತ್ಯಂತ ಪ್ರಮುಖ ಘಟ್ಟವಾಗಿರುತ್ತದೆ. ಮಕ್ಕಳು ತಾವು ಕಲಿತ ಶಾಲೆಯನ್ನು ನೆನಪಿಸಿಕೊಂಡು ಜ್ಞಾನದ ದೀಪವನ್ನು ಬೆಳಗಿಸುವ ವಿದ್ಯಾಲಯಕ್ಕೆ ಕೊಡುಗೆ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಕೊಡುಗೆ ನೀಡಿದ ಹಳೆಯ ವಿದ್ಯಾರ್ಥಿಗಳಾದ ಹೀನಾಕೌಸರ್,ಅಖಿಲಾಶ್ರೀ, ಭಾಸ್ಕರ್, ಕವಿತಾ.ಕೆ, ಚೈತ್ರಾಶ್ರೀ,ನಾಗೇಶ್. ಪ್ರಜ್ವಲ್, ಕಾರ್ತಿಕ್, ದಿಲೀಪ್, ಕೃಷ್ಣಪ್ರಸಾದ್, ನಿರಂಜನ್, ರೂಪಾಶ್ರೀ, ಸುನೀಲ್.ಬಿ, ಉಷಾ.ಬಿ, ಜಲೇಂದ್ರ, ಸುನೀಲ್‌ಕುಮಾರ್, ರತನ್, ಸಿ.ಕೆ.ಅನುಶ್ರೀ, ಉದಯಕುಮಾರ್, ವಿದ್ಯಾರ್ಥಿಗಳಿಗೆ ಶುಭಾಶಯ ಹೇಳಿ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಕಿವಿಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಟಿ.ಪಿ.ನಂದೀಶ್‌ಕುಮಾರ್, ಎಲ್,ಎಸ್.ಲೋಕೇಶ್, ಸಹಶಿಕ್ಷಕರುಗಳಾದ ಹೆಚ್.ಎನ್.ದಿವಾಕರ್, ಗಂಗಾಧರ್, ನಳಿನಿ.ಕೆ.ಆರ್., ಸುಜಾತ, ಆಶಾ, ನಂದಿನಿ, ಬಿ,ಎಸ್,ಹರೀಶ್, ಹಳೆಯ ವಿದ್ಯಾರ್ಥಿಗಳಾದ ಭಾಸ್ಕರ್,ಕವಿತಾ.ಕೆ.ಚೈತ್ರಾಶ್ರೀ, ಅಭಿಲಾಷ್, ಕಾರ್ತಿಕ್, ಅಖಿಲಾಶ್ರೀ ಇದ್ದರು



