ಬೆಂಗಳೂರು: ಬಕ್ರಿದ್ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ನಗರದಲ್ಲಿ ಕುರಿ-ಮೆಕೆಗಳಿಗೆ ಭಾರಿ ಡಿಮ್ಯಾಂಡ್ ಬಂದಿದೆ. ಈಗಾಗಲೇ ಚಾಮರಾಜಪೇಟೆ ಆಟದ ಮೈದಾನದಲ್ಲಿ ಕುರಿ ಸಂತೆ ಆರಂಭವಾಗಿದ್ದು, ಮೇಳದಲಿ ಭರ್ಜರಿ ವ್ಯಾಪಾರವಾಗುವ ನಿರೀಕ್ಷೆ ಇದೆ ಎಂದು ವ್ಯಾಪಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ಆದರಲ್ಲೂ ಬಂಡೂರ್ ಕುರಿ, ಅಮಿನ್‍ಗಢ , ನಾಟಿ ತಳಿ, ಕರಿ ಕುರಿ, ಪಾವಗಡ ಮತ್ತು ಸಿರ ಕುರಿಗಳಿಗೆ ಭಾರಿ ಡಿಮ್ಯಾಂಡ್ ಇದ್ದರೆ, ಮೇಕೆಗಳಲ್ಲಿ 3 ರೀತಿ ಮೇಕೆಗಳಿದ್ದು ಅದ್ರಲ್ಲಿ ಜಮುನ ಪುರಿ, ನಾಟಿ ಹೋತಕ್ಕೆ ಭಾರಿ ಡಿಮ್ಯಾಂಡ್ ಇದೆ. ರಾಮನಗಗರ, ಮಂಡ್ಯ, ಮದ್ದೂರು, ಚೆನ್ನಪಟ್ಟಣ, ಮಾಗಡಿ, ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಬಾಗೇಪಲ್ಲಿ, ತುಮಕೂರು, ನೆಲಮಂಗಲ, ಹೊಸಕೋಟೆ, ಹರಿಹರ, ದಾವಣಗೆರೆ , ಮಳವಳ್ಳಿ,ಕೊಳ್ಳೆಗಾಲ, ಹಾಸನ, ಅರಸಿಕೆರೆ ಸೇರಿದಂತೆ ಒಟ್ಟು 25 ತಾಲೋಕು ಹಾಗೂ ಜಿಲ್ಲೆಗಳ ವ್ಯಾಪಾರಿಗಳು ಚಾಮರಾಜಪೇಟೆ ಸಂತೆಯಲ್ಲಿ ತಮ್ಮ ಕುರಿ ಮೆಕೆಗಳ ವ್ಯಾಪಾರ ಮಾಡುತ್ತಿದ್ದಾರೆ.
ಇಂದಿನಿಂದ ಆರಂಭವಾಗಿರುವ ಕುರಿ ಮೇಳೆ ಬಕ್ರಿದ್ ಹಬ್ಬದವರೆಗೂ ಮುಂದುವರೆಯಲಿರುವುದರಿಂದ ಈ ಬಾರಿ ಭರ್ಜರಿ ವ್ಯಾಪಾರ ಮಾಡುವ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಿಗಳು. ಲಕ್ಷ ಬೆಲೆ ಬಾಳುವ ಕುರಿಗಳು: ಸಂತೆಯಲ್ಲಿ ಮಾರಾಟವಾಗುತ್ತಿರುವ ಬಂಡೂರು ಕುರಿಗೆ ಒಂದು ಲಕ್ಷ ರೂ.ಬೆಲೆ ನಿಗದಿಪಡಿಸಲಾಗಿದ್ದರೆ, ಬಾಗೇವಾಡಿ ಕುರಿ ಒಂದೂವರೆ ಲಕ್ಷ ರೂ.ಬೆಲೆ ಬಾಳುವುದಂತೆ.
ಅದೇ ರೀತಿ ಕಿಲಾರಿ – 80 ಸಾವಿರ
ನಾಟಿ ಕುರಿ- 60 ಸಾವಿರ
ಕರಿ ಕುರಿ – 40 ಸಾವಿರ
ಅಮಿನ್‍ಗಢ – 40 ರಿಂದ 60 ಸಾವಿರ
ಪಾವಗಡ ಮತ್ತು ಸಿರ – 20 – 30 ಸಾವಿರ
ಮೈಲಾರಿ ಟಗರು – 70 ಸಾವಿರ ರೂ. ದರ ನಿಗದಿಪಡಿಸಲಾಗಿದೆ.